ಹೈದರಾಬಾದ್:ಬಾಲಿವುಡ್ ನಿರ್ಮಾಪಕ ಸಂಜಯ್ ಲೀಲಾ ಭನ್ಸಾಲಿಯವರು ಮತ್ತೊಂದು ಬಿಗ್ ಬಜೆಟ್ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದು, ಈ ಚಿತ್ರದ ಕುರಿತಂತೆ ನಟಿ ಆಲಿಯಾ ಭಟ್ ಅವರ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಗಂಗೂಬಾಯಿ ಕಥಿಯಾವಾಡಿ ಬಳಿಕ ಭನ್ಸಾಲಿಯ ಮತ್ತೊಂದು ಚಿತ್ರದಲ್ಲಿ ನಟಿಸಲಿದ್ದಾರಾ ಆಲಿಯಾ? - ಬಾಲಿವುಡ್ ಫೇಮಸ್ ನಿರ್ಮಾಪಕ ಭನ್ಸಾಲಿ
ಬಾಲಿವುಡ್ ನಿರ್ಮಾಪಕ ಸಂಜಯ್ ಲೀಲಾ ಭನ್ಸಾಲಿ ಅವರ ಮುಂಬರುವ ಚಿತ್ರ ಗಂಗೂಬಾಯಿ ಕಥಿಯಾವಾಡಿ ಚಿತ್ರದಲ್ಲಿ ನಟ ಆಲಿಯಾ ಭಟ್ ನಟಿಸುತ್ತಿದ್ದು, ಹೀಗಿರುವಾಗಲೇ ಮತ್ತೊಂದು ಚಿತ್ರದ ಕುರಿತಂತೆ ಭನ್ಸಾಲಿ ಮತ್ತು ಆಲಿಯಾ ಮಾತುಕತೆ ನಡೆಸಿದ್ದಾರೆ.
ಭನ್ಸಾಲಿಯವರು ನಿರ್ಮಿಸುವ ಸಿನಿಮಾಗಳಲ್ಲಿ ಹೆಚ್ಚಾಗಿ ಮಹಿಳಾ ನಟರು ಪುನರಾವರ್ತನೆ ಆಗುತ್ತಿರುತ್ತಾರೆ. ಉದಾಹರಣೆಗೆ ಬಾಲಿವುಡ್ ಬ್ಯೂಟಿ ಐಶ್ವರ್ಯಾ ರೈ ಬಚ್ಚನ್ ಭನ್ಸಾಲಿ ನಿರ್ಮಾಣದ ಹಮ್ ದಿಲ್ ದೇ ಚುಕೆ ಸನಮ್, ದೇವದಾಸ್ ಮತ್ತು ಗುಜಾರಿಶ್ ಹೀಗೆ ಸಾಕಷ್ಟು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರಂತೆ ಬಾಲಿವುಡ್ ಬೆಸ್ಟ್ ಜೋಡಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಕಪೂರ್ ಅವರು ಗೋಲಿಯೋನ್ ಕಿ ರಾಸ್ಲೀಲಾ, ರಾಮ್-ಲೀಲಾ, ಬಾಜಿರಾವ್ ಮಸ್ತಾನಿ ಮತ್ತು ಪದ್ಮಾವತ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಕೂಡ ಮೇರಿ ಕೋಮ್ ಹಾಗೂ ರಾಮ್ ಲೀಲಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಈ ಪಟ್ಟಿಗೆ ನಟಿ ಆಲಿಯಾ ಭಟ್ ಸೇರ್ಪಡೆಗೊಂಡಿದ್ದಾರೆ.
ಸದ್ಯ ಆಲಿಯಾ ಗಂಗೂಬಾಯಿ ಕಥಿಯಾವಾಡಿ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರದ ಚಿತ್ರೀಕರಣ ಇನ್ನೂ ಪೂರ್ಣಗೊಂಡಿಲ್ಲ. ಇದಾಗಲೇ ಆಲಿಯಾ, ಭನ್ಸಾಲಿ ಜೊತೆ ಮತ್ತೊಂದು ಸಿನಿಮಾ ಮಾಡಲು ಮಾತುಕತೆ ನಡೆಸಿದ್ದಾರೆ. ಗಂಗೂಬಾಯಿ ಕಥಿಯಾವಾಡಿ ಸಿನಿಮಾ ಹುಸೇನ್ ಜೈದಿ ಅವರ ಮಾಫಿಯಾ ಕ್ವೀನ್ಸ್ ಆಫ್ ಮುಂಬೈ ಪುಸ್ತಕವನ್ನು ಆಧರಿತ ಚಿತ್ರವಾಗಿದೆ. ಈ ಚಿತ್ರ ಭನ್ಸಾಲಿ ಪ್ರೊಡಕ್ಷನ್ಸ್ನಲ್ಲಿ ನಿರ್ಮಾಣವಾಗುತ್ತಿದೆ.