ಕರ್ನಾಟಕ

karnataka

ETV Bharat / sitara

ಬಾಲಿವುಡ್​ ಬೆಡಗಿ ದೀಪಿಕಾ ಪೋಸ್ಟ್​ ಡಿಲೀಟ್​ ಬಳಿಕ ಧ್ವನಿ ಸಂದೇಶ.. ಅದರಲ್ಲಿರೋದು ಇಷ್ಟೇ.. - ದೀಪಿಕಾ ಪಡುಕೋಣೆ ಸೋಶಿಯಲ್ ಮೀಡಿಯಾ

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ತಮ್ಮ ಇನ್​ಸ್ಟಾಗ್ರಾಂ ಹಾಗೂ ಟ್ವಿಟರ್​ನಲ್ಲಿದ್ದ ಈ ಹಿಂದಿನ ಎಲ್ಲಾ ಪೋಸ್ಟ್​ಗಳನ್ನು ಡಿಲೀಟ್​ ಮಾಡಿದ್ದಾರೆ..

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ

By

Published : Jan 1, 2021, 3:43 PM IST

ಹೈದರಾಬಾದ್​ :ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೊಸವರ್ಷದ ಹಿಂದಿನ ದಿನ ಅಭಿಮಾನಿಗಳಿಗೆ ಶಾಕ್​ ನೀಡಿದ್ದು, ತಮ್ಮ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿರುವ ಪೋಸ್ಟ್​ಗಳನ್ನು ಡಿಲೀಟ್​ ಮಾಡಿದ್ದರು. ಆದರೆ, ಇದೀಗ ತಮ್ಮ ಧ್ವನಿ ಮುಖಾಂತರ ಸಂದೇಶ ರವಾನಿಸಿದ್ದು, ಜನತೆಗೆ ಹೊಸವರ್ಷದ ಶುಭಾಶಯ ತಿಳಿಸಿದ್ದಾರೆ.

ಡಿಂಪಲ್​ ಬೆಡಗಿ ದೀಪಿಕಾ ಅವರ ಇನ್​ಸ್ಟಾಗ್ರಾಂ ಹಾಗೂ ಟ್ವಿಟರ್​ನಲ್ಲಿ ಯಾವುದೇ ಪೋಸ್ಟ್​ಗಳು ಕಾಣುತ್ತಿಲ್ಲ. ಇನ್​ಸ್ಟಾಗ್ರಾಂ 52.5 ಮಿಲಿಯನ್ ಮತ್ತು ಟ್ವಿಟರ್​ನಲ್ಲಿ 27.7 ಮಿಲಿಯನ್ ಫಾಲೋವರ್ಸ್ ಹೊಂದಿರುವ ದೀಪಿಕಾ ಪಡುಕೋಣೆ, ತಾವಾಗಿಯೇ ತಮ್ಮ ಎರಡು ಖಾತೆಗಳನ್ನ ಡಿಲೀಟ್ ಮಾಡಿದ್ದಾರೆಯೇ? ಅಥವಾ ದೀಪಿಕಾ ಅಕೌಂಟ್​ ಹ್ಯಾಕ್ ಆಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ತಮ್ಮ ಟ್ವಿಟರ್​ ಖಾತೆಯಲ್ಲಿ ಧ್ವನಿ ಮೂಲಕ ಸಂದೇಶ ರವಾನಿಸಿದ್ದು "ಇದು 1.1.2021, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಎಲ್ಲರಿಗೂ ಉತ್ತಮ ಆರೋಗ್ಯ ಮತ್ತು ಮನಸ್ಸಿನ ಶಾಂತಿ ಲಭಿಸಲಿ" ಎಂದಿದ್ದಾರೆ.

ಆದರೆ, ನೆಟ್ಟಿಗರು ದೀಪಿಕಾ ತಮ್ಮ ಪೋಸ್ಟ್​ಗಳನ್ನು ಡಿಲೀಟ್​ ಮಾಡಿದ್ದಾರೆಯೇ ಎಂಬುದರ ಬಗ್ಗೆ ಕನ್ಫ್ಯೂಸ್​ ಆಗಿದ್ದಾರೆ. ಕೆಲವರು ಖಾತೆ ಹ್ಯಾಕ್ ಆಗಿರಬೇಕೆಂದು ಹೇಳಿದ್ರೆ, ಮತ್ತೆ ಕೆಲವರು ಡ್ರಗ್ಸ್ ಹೆಚ್ಚಾಗಿ ತೆಗೆದುಕೊಂಡು ಮತ್ತಿನಲ್ಲಿ ಡಿಲೀಟ್ ಮಾಡಿರಬೇಕೆಂದು ಹೇಳುತ್ತಿದ್ದಾರೆ.

ಇನ್ನೂ ಕೆಲವರು ದೀಪಿಕಾ ಹೊಸ ವರ್ಷದಲ್ಲಿ ಸಾಮಾಜಿಕ ಜಾಲತಾಣದಿಂದ ದೂರ ಉಳಿಯುವ ನಿರ್ಧಾರಕ್ಕೆ ಬಂದಿರಬೇಕೆಂದು ಹೇಳಿದ್ದಾರೆ. ಸದ್ಯ ಇದ್ಯಾವುದಕ್ಕೂ ದೀಪಿಕಾ ಪ್ರತಿಕ್ರಿಯಿಸಿಲ್ಲ. ಡಿಂಪಲ್​ ಬೆಡಗಿ ದೀಪಿಕಾ ಅವರು ಸದ್ಯ ಪತಿ ರಣ್​ವೀರ್​ ಸಿಂಗ್​ ಜೊತೆ ರಾಜಸ್ಥಾನದಲ್ಲಿದ್ದಾರೆ.

ABOUT THE AUTHOR

...view details