ಹೈದರಾಬಾದ್ :ಬಾಲಿವುಡ್ ನಟಿ ಕರೀನಾ ಕಪೂರ್ ಒಮಿಕ್ರಾನ್ ವರದಿ ನೆಗೆಟಿವ್ ಬಂದು ಹಿನ್ನೆಲೆ ಇಂದು ಪತಿ ಸೈಫ್ ಅಲಿ ಖಾನ್ ಮತ್ತು ಪುತ್ರರಾದ ತೈಮೂರ್ ಮತ್ತು ಜೆಹ್ ಅಲಿ ಖಾನ್ರೊಂದಿಗೆ ಕ್ರಿಸ್ಮಸ್ ಔತಣ ಕೂಟಕ್ಕೆ ಮುಂಬೈಗೆ ತೆರಳಿದರು.
ಕರೀನಾ ಚರ್ಮದ ಕಂದು ಬಣ್ಣದ ಪ್ಯಾಂಟ್‌ನೊಂದಿಗೆ ಕಪ್ಪು ಟೀ ಶರ್ಟ್‌ನಲ್ಲಿ ಕಾಣಿಸಿಕೊಂಡರೆ, ಸೈಫ್ ಜೀನ್ಸ್ ಮತ್ತು ಬೂಟು ಧರಿಸಿದ್ದರು. ಇತ್ತ ತೈಮೂರ್ ಕುರ್ತಾ-ಪೈಜಾಮಾದಲ್ಲಿ ಮಿಂಚಿದರೆ, ಜೆಹ್ ಜೀನ್ಸ್‌ನೊಂದಿಗೆ ತಿಳಿ ನೀಲಿ ಶರ್ಟ್‌ನಲ್ಲಿ ಕಾಣಿಸಿದರು.
ಡಿಸೆಂಬರ್ ತಿಂಗಳಲ್ಲಿ ಪಾರ್ಟಿವೊಂದರಲ್ಲಿ ಭಾಗಿಯಾಗಿದ್ದ ಕರೀನಾ ಕಪೂರ್ ಹಾಗೂ ಆಕೆಯ ಸ್ನೇಹಿತೆ ಅಮೃತಾ ಅರೋರಾಗೆ ಕೊರೊನಾ ತಗುಲಿತ್ತು. ಹೀಗಾಗಿ, ಅವರನ್ನು ಕ್ವಾರಂಟೈನ್ ಮಾಡಿ ಅವರು ವಾಸವಾಗಿದ್ದ ನಾಲ್ಕು ಕಟ್ಟಡಗಳನ್ನು ಸೀಲ್ಡೌನ್ ಮಾಡಲಾಗಿತ್ತು.