ಕರ್ನಾಟಕ

karnataka

ETV Bharat / sitara

ಅಕ್ಷಯ್​ ಕುಮಾರ್​ ಬೆನ್ನಲ್ಲೇ 45 ಸಹ ಕಲಾವಿದರಿಗೂ ವಕ್ಕರಿಸಿತು ಮಹಾಮಾರಿ ಕೊರೊನಾ!

ಬಾಲಿವುಡ್ ನಟ ಅಕ್ಷಯ್ ಕುಮಾರ್​ ನಟನೆಯ ಹೊಸ ಚಿತ್ರ 'ರಾಮಸೇತು'ದಲ್ಲಿ ಭಾಗಿಯಾಗಿರುವ 45 ಸಹ ಕಲಾವಿದರಿಗೆ ಇದೀಗ ಕೋವಿಡ್​ ಸೋಂಕು ದೃಢಪಟ್ಟಿದೆ.

By

Published : Apr 5, 2021, 5:22 PM IST

After Akshay
After Akshay

ಮುಂಬೈ: ಬಾಲಿವುಡ್​ ಮಂದಿಗೆ ಮಹಾಮಾರಿ ಕೊರೊನಾ ವೈರಸ್ ಬೆನ್ನು ಬಿದ್ದ ಬೇತಾಳನಂತೆ​ ಕಾಡುತ್ತಿದ್ದು, ಅಕ್ಷಯ್​ ಕುಮಾರ್​ಗೆ ಸೋಂಕು ಕಾಣಿಸಿಕೊಂಡಿರುವ ಬೆನ್ನಲ್ಲೇ ಇದೀಗ 45 ಕಿರಿಯ ಕಲಾವಿದರಿಗೂ ವೈರಸ್​ ದೃಢಪಟ್ಟಿದೆ.

ಅಕ್ಷಯ್​ ಕುಮಾರ್​​​ 'ರಾಮಸೇತು' ಚಿತ್ರದ 45 ಸಹ ಕಲಾವಿದರಿಗೆ ಕೊರೊನಾ ಸೋಂಕು ದೃಢಗೊಂಡಿರುವ ಬಗ್ಗೆ ಇದೀಗ ಮಾಹಿತಿ ಲಭ್ಯವಾಗಿದ್ದು, ಮುಂಬೈನಲ್ಲಿರುವ ಮಧ್​​ ಐಲೆಂಡ್​​ನಲ್ಲಿ 100 ಮಂದಿ ಸಹ ಕಲಾವಿದರೊಂದಿಗೆ ನಟ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಇದರಲ್ಲಿ ಭಾಗಿಯಾಗಿದ್ದ ನಿರ್ದೇಶಕ ವಿಕ್ರಂ ಮಲ್ಹೋತ್ರಾ ಸೇರಿದಂತೆ ಎಲ್ಲರಿಗೂ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿತ್ತು. ಹೀಗಾಗಿ ಸೆಟ್​​ನಲ್ಲಿದ್ದ 100 ಜನರು ಪರೀಕ್ಷೆಗೆ ಒಳಪಟ್ಟಿದ್ದು, ಇದೀಗ 45 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಇದನ್ನೂ ಓದಿ:ಕೋವಿಡ್​​​​​-19 ದೃಢ: ಆಸ್ಪತ್ರೆಗೆ ದಾಖಲಾದ ನಟ ಅಕ್ಷಯ್​ ಕುಮಾರ್​

ಕಳೆದ ಭಾನುವಾರ ಮಹಾಮಾರಿ ಕೊರೊನಾ ಸೋಂಕಿಗೊಳಗಾಗಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್​ ಇಂದು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ABOUT THE AUTHOR

...view details