ಕರ್ನಾಟಕ

karnataka

ETV Bharat / sitara

'ನಾನು ಭಾರತದಲ್ಲಿ ಬೆಳೆದಿರುವೆ ಆದರೆ, ಪಾಕಿಸ್ತಾನವೇ ನನ್ನ ಮನೆ': ಇದು ಯಾರ ಹೇಳಿಕೆ ಗೊತ್ತೆ? - news kannada

ಜನಪ್ರಿಯ ಗಾಯಕ ಅದ್ನಾನ್ ಸಮಿ ಅವರ ಪುತ್ರ ಅಝಾನ್ ಸಮಿ ಖಾನ್ ತನ್ನ ತಂದೆ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾನೆ. ಸಂದರ್ಶನವೊಂದರಲ್ಲಿ ಆಡಿದ ಮಾತುಗಳು ಇದೀಗ ರಿವೀಲ್​ ಆಗಿವೆ. ತಮ್ಮ ತಂದೆ ಭಾರತೀಯ ಪೌರತ್ವ ಪಡೆದಿದ್ದಾರೆ. ಆದರೆ, ನಾನು ಪಾಕ್​ ಪ್ರಜೆ ಎಂದು ಇದೇ ವೇಳೆ ತಮ್ಮ ಮನದ ಇಂಗಿತ ಸಹ ವ್ಯಕ್ತಪಡಿಸಿದ್ದಾರೆ.

ಜನಪ್ರಿಯ ಗಾಯಕ ಅದ್ನಾನ್ ಸಮಿ ಹಾಗೂ ಅವರ ಪುತ್ರ ಅಜಾನ್ ಸಮಿ ಖಾನ್

By

Published : Sep 4, 2019, 8:05 PM IST

Updated : Sep 5, 2019, 12:11 PM IST

ನನ್ನ ಹದಿಹರೆಯದ ದಿನಗಳನ್ನು ನಾನು ಭಾರತದಲ್ಲಿ ಕಳೆದಿದ್ದರೂ, ಪಾಕಿಸ್ತಾನವೇ ನನ್ನ ಮನೆ ಎಂದು ಜನಪ್ರಿಯ ಗಾಯಕ ಅದ್ನಾನ್ ಸಮಿ ಅವರ ಪುತ್ರ ಅಜಾನ್ ಸಮಿ ಖಾನ್ ರಿವೀಲ್​ ಮಾಡಿದ್ದಾರೆ. ನನ್ನ ತಂದೆ ಅದ್ನಾನ್​ ಸಮಿ ಭಾರತೀಯ ಪೌರತ್ವ ಪಡೆದಿರಬಹುದು. ನಾನು ಅವರ ಮಗ. ನನ್ನ ಹದಿಹರೆಯದ ದಿನಗಳನ್ನು ನಾನು ಭಾರತದಲ್ಲಿ ಕಳೆದಿದ್ದೇನೆ. ಆದರೆ, ಪಾಕಿಸ್ತಾನವೇ ತನ್ನ ಮನೆ ಎಂದು ಸಂದರ್ಶನವೊಂದರಲ್ಲಿ ಅಝಾನ್ ಬಹಿರಂಗಪಡಿಸಿದ್ದಾರೆ.

ದೇಶಪ್ರೇಮ ಕೆಣಕಿದ ಪಾಕಿಗಳಿಗೆ ಸಿಂಗರ್​ ಅದ್ನಾನ್​ ದಿಟ್ಟ ಉತ್ತರವಿದು!

ನಾನು ನನ್ನ ತಂದೆಯನ್ನು ಪ್ರೀತಿಸುತ್ತೇನೆ. ಅವರ ಮೇಲೆ ಅಪಾರ ಗೌರವವಿದೆ. ಹಾಗಾಗಿ ಇಲ್ಲಿಯವರೆಗೆ ನಾನು ಈ ಬಗ್ಗೆ ಎಲ್ಲಿಯೂ ಹೇಳಿಕೆ ನೀಡರಲಿಲ್ಲ. ಭಾರತದಲ್ಲಿ ವಾಸಿಸುವ ಬಗ್ಗೆ ಅವರು ತಮ್ಮ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ನಾನು ಸಹ ಅದನ್ನು ಗೌರವಿಸುತ್ತೇನೆ. ಆದರೆ, ನಾನು ಈಗ ಎಲ್ಲಿ ವಾಸಿಸಬೇಕು ಅನ್ನೋದರ ಬಗ್ಗೆ ನಿರ್ಧಾರ ಮಾಡಿಕೊಳ್ಳುವ ಸಮಯ ಬಂದಿದೆ. ಹಾಗಾಗಿ ಪಾಕಿಸ್ತಾನವದಲ್ಲಿಯೇ ವಾಸಿಸಬೇಕು ಎಂದು ಅಂದುಕೊಂಡಿದ್ದೇನೆ. ಅದುವೇ ನನ್ನ ಮನೆ ಎಂದು ಮಾಧ್ಯಮ ಕೇಳಿದ ಕೆಲವು ಪ್ರಶ್ನೆಗಳಿಗೆ ಅಝಾನ್ ಸಮಿ ಖಾನ್ ಉತ್ತರ ನೀಡಿದ್ದಾರೆ.

ನನಗೆ ಅಲ್ಲಿ (ಭಾರತದಲ್ಲಿ) ಒಳ್ಳೆಯ ಗೆಳೆಯರಿದ್ದಾರೆ. ನಾನು ನನ್ನ ಜೀವನದ ಬಹುಭಾಗವನ್ನು ಭಾರತದಲ್ಲಿಯೇ ಕಳೆದಿದ್ದೇನೆ. ವಿಶೇಷವಾಗಿ ನನ್ನ ಹದಿಹರೆಯದ ದಿನಗಳು. ಪಾಕಿಸ್ತಾನದಲ್ಲಿ ನನ್ನ ಕುಟುಂಬದವರು ಇದ್ದಾರೆ. ಹಾಗಾಗಿ ಪಾಕಿಸ್ತಾನವೇ ನನ್ನ ಮನೆ ಎಂದು ಅವರು ಬಹಿರಂಗಪಡಿಸಿದ್ದಾರೆ.

ಗಾಯಕ ಅದ್ನಾನ್ ಸಮಿಯ ಮೊದಲ ಪತ್ನಿ ಜೆಬಾ ಬಕ್ತಾರ್​ ಓರ್ವ ನಟಿಯಾಗಿದ್ದು ಪಾಕ್​ನಲ್ಲಿಯೇ ನೆಲೆಯೂರಿದ್ದಾರೆ. ಅಝಾನ್ ಇವರ ಮಗ. ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಬಗ್ಗೆ ಹಾಗೂ ಕಾಶ್ಮೀರ ವಿಷಯದ ಬಗ್ಗೆ ಸಮಿ ಕೆಲವು ಹೇಳಿಕೆ ನೀಡಿದ್ದರು. ಈ ಬಗ್ಗೆ ಮಾಧ್ಯಮವೊಂದು ಇದೀಗ ಅವರ ಮಗನ ಸಂದರ್ಶನ ಮಾಡಿತ್ತು. ಇದೇ ವೇಳೆ, ತನ್ನ ತಂದೆ "ಸಂಗೀತದ ದಂತಕಥೆ" ಎಂದಿರುವ ಅಝಾನ್, ಅವರು ಅತ್ಯುತ್ತಮ ವಿಮರ್ಶಕರಲ್ಲಿ ಒಬ್ಬರು ಎಂದು ಹೆಮ್ಮೆಯ ಮಾತುಗಳನ್ನೂ ಆಡಿದ್ದಾರೆ.

ಅದ್ನಾನ್ ಸಮಿ ಅವರ ಪುತ್ರ ಅಝಾನ್ ಸಮಿ ಖಾನ್


ಅಝಾನ್​ ಈ ಹೇಳಿಕೆ ಈಗ ತೀವ್ರ ಕುತೂಹಲ ಕೆರಳಿಸಿದೆ. ಭಾರತ ಪಾಕಿಸ್ತಾನದ ನಡುವೆ ಪರಿಸ್ಥಿತಿ ಹದಗೆಟ್ಟಿರುವ ಈ ಸಂದರ್ಭದಲ್ಲಿ ಆತನ ಹೇಳಿಕೆ ಬಂದಿರುವುದು ಈ ಕುತೂಹಲಕ್ಕೆ ಕಾರಣವಾಗಿದೆ.

Last Updated : Sep 5, 2019, 12:11 PM IST

ABOUT THE AUTHOR

...view details