ಪಾಕ್ ಮೂಲದ ಹಾಡುಗಾರ ಅದ್ನಾನ್ ಸಮಿ ಈಗ ಭಾರತೀಯ. ಭಾರತದ ಪೌರತ್ವ ಪಡೆದು ಇಲ್ಲಿಯೇ ನೆಲೆಸಿದ್ದಾರೆ. ಈ ದೇಶದ ಮೇಲೆ ಗೌರವ-ಪ್ರೀತಿ ಹೊಂದಿರುವ ಸಮಿ, ಸದಾ ಭಾರತದ ಪರವಾಗಿಯೇ ಇದ್ದಾರೆ. ಆದರೆ, ಇದು ಆಗಾಗ ಪಾಕಿಗಳ ಹೊಟ್ಟೆ ಉರಿಗೆ ಕಾರಣವಾಗುತ್ತಿರುತ್ತದೆ.
ಇದೇ 14 ರಂದು ಪಾಕಿಸ್ತಾನದ ನೆಟ್ಟಿಗರು ಅದ್ನಾನ್ ಸಮಿ ದೇಶಪ್ರೇಮ ಕೆಣಕಿ, ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡಿದ್ದಾರೆ. ಅಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸಿಕೊಂಡ ಪಾಕ್, ಟ್ವಿಟ್ಟರ್ಲ್ಲಿ ಸಮಿ ಅವರನ್ನು ಎಳೆದು ತಂದಿತ್ತು. 'ಪಾಕ್ ಸ್ವಾತಂತ್ರ್ಯೋತ್ಸವದ ಬಗ್ಗೆ ನೀವ್ಯಾಕೆ ಟ್ವೀಟ್ ಮಾಡುವುದಿಲ್ಲ' ಎಂದು ಪ್ರಶ್ನಿಸಿತ್ತು.
ಅಂದೇ ಪಾಕಿಗಳ ಈ ಛೇಡಿತನದ ಪ್ರಶ್ನೆಗೆ ಜಬರ್ದಸ್ತ್ ಉತ್ತರ ಕೊಟ್ಟಿರುವ ಸಮಿ, 'I will..Tomorrow!' ಎಂದಿದ್ದಾರೆ. ( ಆಗಸ್ಟ್ 15 ರಂದು ಭಾರತದ ಸ್ವಾತಂತ್ರ್ಯೋತ್ಸವ) ನಾಳೆ ಖಂಡಿತ ಕಾಮೆಂಟ್ ಮಾಡುತ್ತೇನೆ ಎಂದು ಪಾಕಿಗಳಿಗೆ ತಿರುಗೇಟು ಕೊಟ್ಟಿದ್ದಾರೆ.
ಇನ್ನು ಕಳೆದ ಕೆಲ ದಿನಗಳ ಹಿಂದೆ ಪಾಕ್ ಮೇಲೆ ಭಾರತೀಯ ವಾಯುಸೇನೆ ನಡೆಸಿದ್ದ ಏರ್ಸ್ಟ್ರೈಕ್ಗೆ ಅಭಿನಂದಿಸಿದ್ದ ಸಮಿ, 'ಭಾರತ ವಾಯು ದಳದ ಬಗ್ಗೆ ತುಂಬಾ ಹೆಮ್ಮೆ ಅನ್ನಿಸುತ್ತಿದೆ. ಉಗ್ರವಾದವನ್ನು ನಿಲ್ಲಿಸಿ. ಜೈ ಹಿಂದ್' ಎಂದು ಟ್ವೀಟ್ ಮಾಡಿದ್ದರು. ಇದರಿಂದ ಪಾಕಿಸ್ತಾನಿಯರು ಗರಂ ಆಗಿದ್ದರು. ಪಾಕಿಸ್ತಾನದಲ್ಲಿ ಹುಟ್ಟಿ, ಭಾರತವನ್ನು ಬೆಂಬಲಿಸುತ್ತೀರಾ ಎಂದು ಹಲವು ಪಾಕ್ ಟ್ರೋಲಿಗರು ಸಮಿ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು.
ಇದಕ್ಕೆ ಅದ್ನಾನ್ ಸಮಿ ಟ್ವಿಟರ್‌ನಲ್ಲಿ ದಿಟ್ಟ ಉತ್ತರ ನೀಡಿದ್ದರು. 'ಡಿಯರ್ ಪಾಕ್ ಟ್ರೋಲ್ಸ್, ಇಲ್ಲಿ ನಿಮ್ಮ ಇಗೋ ಸಂಗತಿ ಅಲ್ಲ. ನೀವು ಶತ್ರುಗಳಾಗಿ ಭಾವಿಸುತ್ತಿರುವ ಉಗ್ರರನ್ನು ಹೊಡೆದುರುಳಿಸಿವುದು ಇಲ್ಲಿನ ಸಂಗತಿ. ನಿಮ್ಮ ನೀಚ ಮೆಂಟಾಲಿಟಿ ಬಗ್ಗೆ ನಗು ಬರುತ್ತಿದೆ. ನೀವು ಆಡುವ ಮಾತುಗಳೇ ನಿಮ್ಮ ವ್ಯಕ್ತಿತ್ವವನ್ನು ತೋರಿಸುತ್ತವೆ' ಎಂದಿದ್ದರು.