ಕರ್ನಾಟಕ

karnataka

ETV Bharat / sitara

Aditya-Anushka Wedding: ಆದಿತ್ಯ-ಅನುಷ್ಕಾ ಮದುವೆಯಲ್ಲಿ ಆಲಿಯಾ, ರಿಯಾ ಸೇರಿ ಬಿ-ಟೌನ್​ ತಾರೆಯರು ಮಿಂಚಿಂಗ್​​ - Rhea Chakraborty

ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಬಾಲಿವುಡ್ ತಾರೆಯರಾದ ಆದಿತ್ಯ ಸೀಲ್-ಅನುಷ್ಕಾ ರಂಜನ್ ವೈವಾಹಿಕ(Aditya-Anushka Wedding) ಜೀವನಕ್ಕೆ ಕಾಲಿಟ್ಟಿದ್ದಾರೆ.

Aditya-Anushka Wedding
Aditya-Anushka Wedding

By

Published : Nov 22, 2021, 12:07 PM IST

ಮುಂಬೈ(ಮಹಾರಾಷ್ಟ್ರ): ಬಾಲಿವುಡ್​ ನಟ ಆದಿತ್ಯ ಸೀಲ್ ಅವರು ತಮ್ಮ ಪ್ರೇಯಸಿ, ನಟಿ ಅನುಷ್ಕಾ ರಂಜನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು(Aditya Seal-Anushka Ranjan Wedding), ವಿವಾಹ ಸಂಭ್ರಮದಲ್ಲಿ ಆಲಿಯಾ ಭಟ್​, ಆಥಿಯಾ ಶೆಟ್ಟಿ, ವಾಣಿ ಕಪೂರ್​, ರಿಯಾ ಚರ್ಕವರ್ತಿ, ನಟಿ ಭೂಮಿ ಪೆಡ್ನೇಕರ್, ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಸೇರಿ ಅನೇಕ ಬಿ-ಟೌನ್​ ತಾರೆಯರು ಪಾಲ್ಗೊಂಡಿದ್ದರು.

ಅನುಷ್ಕಾ ರಂಜನ್ -ಆದಿತ್ಯ ಸೀಲ್

ತಿಳಿ ನೇರಳೆ ಬಣ್ಣದ ಲೆಹೆಂಗಾದಲ್ಲಿ ವಧು ಅನುಷ್ಕಾ ರಂಜನ್, ಬಳಿ-ಹಳದಿ ಮಿಶ್ರಿತ ಶೆರ್ವಾನಿ ಧರಿಸಿ, ಬಿಳಿ ಪೇಟ ತೊಟ್ಟು ವರ ಆದಿತ್ಯ ಸೀಲ್ ಯಾವ ರಾಜಕುಮಾರನಿಗೂ ಕಮ್ಮಿ ಇಲ್ಲ ಎಂಬಂತೆ ರೆಡಿಯಾಗಿದ್ದರು.

ಆಲಿಯಾ ಭಟ್

ವಧು ಅನುಷ್ಕಾ ರಂಜನ್​ರ ಆಪ್ತ ಸ್ನೇಹಿತೆಯಾಗಿರುವ ನಟಿ ಆಲಿಯಾ ಭಟ್​ ಹಳದಿ ಸೀರೆ ಹಾಗೂ ಹಳದಿ ಲೆಹೆಂಗಾದಲ್ಲಿ ಗೊಂಬೆಯಂತೆ ಕಾಣುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋಗಳು ಸಖತ್​ ಸದ್ದು ಮಾಡುತ್ತಿವೆ.

ಆಲಿಯಾ ಭಟ್

ನಟ ಸುನಿಲ್​ ಶೆಟ್ಟಿ ಮಗಳು, ನಟಿ ಆಥಿಯಾ ಶೆಟ್ಟಿ ಗುಲಾಬಿ ಬಣ್ಣದ ಲೆಹೆಂಗಾವನ್ನು ಧರಿಸಿದ್ದು, ನಟಿ ವಾಣಿ ಕಪೂರ್ ಬಿಳಿ ಬಣ್ಣದ ಲೆಹೆಂಗಾದಲ್ಲಿ ಮಿಂಚಿದರು.

ರಿಯಾ ಚರ್ಕವರ್ತಿ

ಸುಶಾಂತ್​ ಸಿಂಗ್​ ಡೆತ್ ಕೇಸ್​ ಸಂಬಂಧದ ಡ್ರಗ್​ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ನಟಿ ರಿಯಾ ಚರ್ಕವರ್ತಿ ಕೂಡ ತಿಳಿ ಹಳದಿ ಲೆಹೆಂಗಾ ಧರಿಸಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ಗಮನ ಸೆಳೆದರು.

ಭೂಮಿ ಪಡ್ನೇಕರ್​-ಸಮೀಕ್ಷಾ ಪಡ್ನೇಕರ್​ ಜೊತೆ ಮನೀಶ್ ಮಲ್ಹೋತ್ರಾ

ಆದಿತ್ಯ ಮತ್ತು ಅನುಷ್ಕಾ ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. 'ವೆಡ್ಡಿಂಗ್ ಪುಲಾವ್'​, 'ಬಟ್ಟಿ ಗುಲ್ ಮೀಟರ್ ಚಾಲು' ಚಿತ್ರಗಳಲ್ಲಿ ಅನುಷ್ಕಾ ನಟಿಸಿದ್ದರು.

ಆಥಿಯಾ ಶೆಟ್ಟಿ

'ತುಮ್ ಬಿನ್ 2', 'ಸ್ಟೂಡೆಂಟ್ ಆಫ್ ದಿ ಇಯರ್ 2' ಸಿನಿಮಾಗಳಲ್ಲಿ ಆದಿತ್ಯ ನಟಿಸಿದ್ದಾರೆ. ಇವರಿಬ್ಬರೂ ಫಿಟ್ರಾತ್​​ (Fittrat) ಎಂಬ ವೆಬ್​ ಶೋನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.

ವಾಣಿ ಕಪೂರ್

ABOUT THE AUTHOR

...view details