ಕರ್ನಾಟಕ

karnataka

ETV Bharat / sitara

ಎಲ್ಲಾ ತಣ್ಣಗಾಗಿರುವ ಸಮಯದಲ್ಲಿ ಮತ್ತೆ ಕಾಸ್ಟಿಂಗ್ ಕೌಚ್ ಬಗ್ಗೆ ತುಟಿ ಬಿಚ್ಚಿದ ನಟಿ - ಪದ್ಮಾವತ್ ನಟಿ ಅದಿತಿ ರಾವ್ ಹೈದರಿ

ಬಾಲಿವುಡ್ ನಟಿ ಅದಿತಿ ರಾವ್ ಹೈದರಿ ಕಾಸ್ಟಿಂಗ್ ಕೌಚ್ ವಿಚಾರವಾಗಿ ಮಾತನಾಡಿದ್ಧಾರೆ. ತಾನೂ ಕೂಡಾ ಸುಮಾರು 8 ತಿಂಗಳ ಕಾಲ ಈ ಸಮಸ್ಯೆಯ ಸುಳಿಯಲ್ಲಿ ಸಿಲುಕಿ ನಂತರ ಹೊರಬಂದಿದ್ದೇನೆ ಎಂದು ಅದಿತಿ ಹೇಳಿಕೊಂಡಿದ್ದಾರೆ.

aditi rao hydari on casting couch
ಅದಿತಿ ರಾವ್ ಹೈದರಿ

By

Published : Jul 7, 2020, 6:15 PM IST

ಮುಂಬೈ: ಕಳೆದ 2 ವರ್ಷಗಳಿಂದ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ವಿಚಾರ ಎಂದರೆ ಕಾಸ್ಟಿಂಗ್ ಕೌಚ್​​. ಸ್ಯಾಂಡಲ್​ವುಡ್​​ನಲ್ಲಿ ಕೂಡಾ ಈ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಈಗ ಈ ವಿವಾದ ತಣ್ಣಗಾಗಿದ್ದರೂ ಅಲ್ಲೋ ಇಲ್ಲೋ ಎಂಬಂತೆ ಕೆಲವು ನಟಿಯರು ಮತ್ತೆ ಇದೇ ವಿಚಾರವಾಗಿ ಮಾತನಾಡುತ್ತಿದ್ದಾರೆ.

ಬಾಲಿವುಡ್ ನಟಿ ಅದಿತಿ ರಾವ್ ಹೈದರಿ ಕೂಡಾ ಕಾಸ್ಟಿಂಗ್ ಕೌಚ್ ಬಗ್ಗೆ ಇತ್ತೀಚೆಗೆ ಮಾತನಾಡಿದ್ದಾರೆ. ಕಾಸ್ಟಿಂಗ್ ಕೌಚ್ ಎನ್ನುವುದು ಇಂದು ನಿನ್ನೆಯ ವಿಚಾರವಲ್ಲ. ದಶಕಗಳಿಂದಲೂ ಇದು ನಡೆದುಕೊಂಡು ಬಂದಿದೆ. ನನಗೆ ಮಾತ್ರವಲ್ಲ ಚಿತ್ರರಂಗದಲ್ಲಿ ಬಹುತೇಕ ಎಲ್ಲರಿಗೂ ಈ ಅನುಭವ ಆಗಿರುತ್ತದೆ. ಆದರೆ ಕೆಲವರು ಇದನ್ನು ಧೈರ್ಯವಾಗಿ ಎದುರಿಸಿ ಈ ತೊಂದರೆಯಿಂದ ಹೊರಬಂದಿದ್ದಾರೆ. ಆದರೆ ಮತ್ತೆ ಕೆಲವರು ಇದರ ವಿರುದ್ಧ ಧ್ವನಿ ಎತ್ತದೆ ಸುಮ್ಮನಿದ್ದಾರೆ.

ಕೆಲವರು ಆ ಸಮಸ್ಯೆಯಿಂದ ಹೊರ ಬಂದರೂ ಕೂಡಾ ಒಂದಲ್ಲಾ ಒಂದು ರೀತಿಯಲ್ಲಿ ಹಿಂಸೆ ಅನುಭವಿಸುತ್ತಿರುತ್ತಾರೆ. ನಾನೂ ಕೂಡಾ ಸುಮಾರು 8 ತಿಂಗಳ ಕಾಲ ಏನೂ ಕೆಲಸ ಇಲ್ಲದೆ ಈ ಸಮಸ್ಯೆ ಅನುಭವಿಸಿದ್ದೇನೆ ಎಂದು ಅದಿತಿ ಹೇಳಿಕೊಂಡಿದ್ದಾರೆ.

ಅದಿತಿ ಕರಿಯರ್ ವಿಚಾರಕ್ಕೆ ಬರುವುದಾದರೆ ಅವರ 'ದಿ ಟ್ರೈನ್' ಸಿನಿಮಾ ಬಿಡುಗಡೆಯಾಗಬೇಕಿದೆ. ಪರಿಣಿತಿ ಛೋಪ್ರಾ, ಕೀರ್ತಿ ಕಲ್ಹಾರಿ ಕೂಡಾ ಚಿತ್ರದಲ್ಲಿ ಅಭಿನಯಿಸಿದ್ದು ಈ ಥ್ರಿಲ್ಲರ್ ಚಿತ್ರವನ್ನು ರಿಭು ದಾಸ್​​ಗುಪ್ತಾ ನಿರ್ದೇಶಿಸಿದ್ದಾರೆ. ರಿಲಾಯನ್ಸ್ ಎಂಟರ್​​​ಟೈನ್ಮೆಂಟ್ ಈ ಚಿತ್ರವನ್ನು ನಿರ್ಮಿಸಿದೆ.

2016 ರಲ್ಲಿ ಬಿಡುಗಡೆಯಾದ 'ದಿ ಟ್ರೈನ್' ಹಾಲಿವುಡ್ ಚಿತ್ರದ ರೀಮೇಕ್ ಆಗಿದೆ. ಈ ಚಿತ್ರಕ್ಕೆ ಅಸಲಿ ಚಿತ್ರದ ಟೈಟಲ್ ಬಳಸಿಕೊಳ್ಳಲಾಗಿದೆ. ಈ ಹಾಲಿವುಡ್ ಚಿತ್ರ ಕೂಡಾ ಬ್ರಿಟಿಷ್ ಲೇಖಕ ಪೌಲ್​ ಹಾಕಿನ್ಸ್ ಬರೆದ 'ದಿ ಟ್ರೈನ್' ಪುಸ್ತಕ ಆಧರಿಸಿ ತಯಾರಿಸಿದ ಸಿನಿಮಾವಾಗಿದೆ.

ABOUT THE AUTHOR

...view details