ಮುಂಬೈ:ಬಣ್ಣಗಳ ಹಬ್ಬ ಹೋಳಿಯನ್ನು ಬಾಲಿವುಡ್ ಮಂದಿ ಕುಟುಂಬ, ಸ್ನೇಹಿತರ ಜೊತೆ ಅದ್ಧೂರಿಯಾಗಿ ಆಚರಣೆ ಮಾಡಿ ಸಂಭ್ರಮಿಸಿದ್ದಾರೆ. ಇತ್ತ ನಟಿ ತನೀಷಾ ಮುಖರ್ಜಿ ಅವರು ಮಾಧ್ಯಮಗಳೊಂದಿಗೆ ಹೋಳಿ ಆಚರಿಸಿ ಗಮನ ಸೆಳೆದಿದ್ದಾರೆ.
ಹೋಳಿ ಹಬ್ಬದವನ್ನು ಉತ್ತರ ಭಾರತದಲ್ಲಿ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಬಾಲಿವುಡ್ ಅನೇಕ ನಟ, ನಟಿಯವರು ತಮ್ಮ ಮನೆಯಲ್ಲಿ ಹೋಳಿ ಹಬ್ಬವನ್ನು ಆಚರಿಸಿದ್ದು, ಸಂಭ್ರಮದ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದರ ನಡುವೆ ರಾಣಿ ಮುಖರ್ಜಿ ಸಹೋದರಿ, ನಟಿ ತನೀಷಾ ಮುಖರ್ಜಿಯವರು ಮಾಧ್ಯಮದವರಿಗೆ ಬಣ್ಣ ಹಚ್ಚಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.