ಕಳೆದ ವರ್ಷ ಬಣ್ಣದ ಜಗತ್ತಿಗೆ ವಾಪಸ್ ಆಗಿರುವ ರಾಣಿ ಮುಖರ್ಜಿ ಹೊಸ ಸಿನಿಮಾವೊಂದಕ್ಕೆ ಸಹಿ ಹಾಕಿದ್ದಾರೆ.
ರಾಣಿ, ಕಳೆದ ವರ್ಷ ತೆರೆಕಂಡಿದ್ದ ಹಿಚ್ಕಿ ನಟಿಸಿದ್ದರು. ತದನಂತರ ಯಾವುದೇ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡಿರಲಿಲ್ಲ. ಇದೀಗ ಅಭಿಮಾನಿಗಳ ಒತ್ತಾಸೆಯೊಂದಿಗೆ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ.

'ಮರ್ದಾನಿ-2'ಚಿತ್ರದಲ್ಲಿ ನಾಯಕಿಯಾಗಿ ಫೋಷಾಕು ತೊಡಲಿರುವ ರಾಣಿ, ಚಿತ್ರಕ್ಕಾಗಿ ಬೇಕಾದ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಚಿತ್ರ ತಂಡ ಇಂದು ಫಸ್ಟ್ ಲುಕ್ ರಿಲೀಸ್ ಮಾಡಿದೆ. ಈ ಚಿತ್ರ ಪ್ರಿಕ್ವೆಲ್(ಮರ್ದಾನಿ)ನಷ್ಟೇ ಕುತೂಹಲಕಾರಿಯಾಗಿದೆ ಎಂದು ಚಿತ್ರದ ನಿರ್ದೇಶಕ ಗೋಪಿ ಪುತ್ರನ್ ಭರವಸೆ ನೀಡಿದ್ದಾರೆ. ಈ ವರ್ಷದ ಕೊನೆಯಲ್ಲಿ ಸಿನಿಮಾ ಬಿಡುಗೆಯಾಗಲಿದ್ದು ಯಶ್ ಚೋಪ್ರಾ ನಿರ್ಮಾಣ ಮಾಡಿದ್ದಾರೆ.
ತಮ್ಮ ಹೊಸ ಚಿತ್ರದ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ರಾಣಿ ಮುಖರ್ಜಿ, ಗೋಪಿ ಪುತ್ರನ್ ಓರ್ವ ಉತ್ತಮ ನಿರ್ದೇಶಕ. ಮೊದಲಬಾರಿಗೆ ನಿರ್ದೇಶ ಮಾಡುತ್ತಿದ್ದಾರೆ. ಉತ್ತಮ ಚಿತ್ರವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ.