ಹೈದರಾಬಾದ್ :ಕರಣ್ ಜೋಹರ್ ಅವರ 'ಕಭಿ ಖುಷಿ ಕಭಿ ಗಮ್' ಚಿತ್ರ ತೆರೆಕಂಡು 20 ವರ್ಷ ತುಂಬಿದೆ. ಈ ಚಿತ್ರವು 2001ರ ಡಿಸೆಂಬರ್ 14ರಂದು ಬಿಡುಗಡೆಯಾಗಿ ಭಾರಿ ಯಶಸ್ಸು ಕಂಡಿತ್ತು.
ಚಿತ್ರದ 20 ವರ್ಷಗಳ ಈ ಸಂದರ್ಭದಲ್ಲಿ ಚಿತ್ರನಟರು ಆಯಾ ದೃಶ್ಯಗಳನ್ನ ರಿ ಕ್ರಿಯೇಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಚಿತ್ರದಲ್ಲಿ ನಟಿಸದ ಜಾನ್ವಿ ಕಪೂರ್ ಕೂಡ ಚಿತ್ರಕ್ಕೆ ಸಂಬಂಧಿಸಿದ ಕರೀನಾ ಕಪೂರ್ ಖಾನ್ ಅವ್ರ 'ಪೂ' ಪಾತ್ರದ ದೃಶ್ಯವನ್ನು ಮರುಸೃಷ್ಟಿಸುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.
'ಪೂ' ಆಗಿ ಜಾನ್ವಿ ಕಪೂರ್ :'ಕಭಿ ಖುಷಿ ಕಭಿ ಗಮ್' ಚಿತ್ರದ ಪ್ರತಿ ಪಾತ್ರವೂ ಸೂಪರ್ ಹಿಟ್ ಆಗಿತ್ತು. ಅದರಲ್ಲೂ ಕರೀನಾ ಕಪೂರ್ ಖಾನ್ ಅವರ 'ಪೂ' ಪಾತ್ರವು ಅತ್ಯಂತ ವಿಭಿನ್ನ ಎನಿಸಿತ್ತು. ಇದೀಗ ಜಾನ್ವಿ ಪೂ ಆಗುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ.
ಜಾನ್ವಿ ಕಪೂರ್ ಕರೀನಾ ಕಪೂರ್ ಅವರ 'ಪೂ' ಪಾತ್ರವನ್ನು ಮರು ಸೃಷ್ಟಿಸಿದ್ದಾರೆ. ಜೊತೆಗೆ ಪೂ ಪಾತ್ರವನ್ನು ಹಾಡಿ ಹೊಗಳಿದ್ದಾರೆ. ಬಾಲಿವುಡ್ ತಾರೆಯರು ಸೇರಿದಂತೆ ಅಭಿಮಾನಿಗಳು ಜಾನ್ವಿ ಅವರ ಈ ಶೈಲಿಯನ್ನು ಇಷ್ಟಪಡುತ್ತಿದ್ದಾರೆ.