ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಜೊತೆ 'ನಿನ್ನಿಂದಲೆ' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಬಹುಭಾಷಾ ನಟಿ ಎರಿಕಾ ಫರ್ನಾಂಡಿಸ್ ಇಂದು ತಮ್ಮ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಕನ್ನಡ ಸೇರಿದಂತೆ ತಮಿಳು, ತೆಲುಗು ಮತ್ತು ಹಿಂದಿ ಚಲನಚಿತ್ರಗಳಲ್ಲಿ ನಟಿಸುವ ಮೂಲಕ ಅಪಾರ ತಮ್ಮದೇಯಾದ ಅಭಿಮಾನಿ ಬಳಗವನ್ನು ಕಟ್ಟಿಕೊಂಡಿದ್ದಾರೆ.
ರೂಪದರ್ಶಿಯೂ ಆಗಿರುವ ಎರಿಕಾ ಹಿಂದಿ ಸೇರಿದಂತೆ ಹಲವು ಧಾರವಾಹಿಯಲ್ಲಿ ಬಣ್ಣ ಹಚ್ಚಿದ್ದಾರೆ. ಎರಿಕಾ ಮೂಲತಃ ಜನಿಸಿದ್ದು ಕರ್ನಾಟಕದ ಕಡಲೂರು ಮಂಗಳೂರಿನಲ್ಲಾದರೂ ಬೆಳದದ್ದು ಮಾತ್ರ ಮುಂಬೈನಲ್ಲಿ. ತಂದೆ ರಾಲ್ಫ್ ಫರ್ನಾಂಡಿಸ್, ತಾಯಿ ಲವಿನ ಅವರ ಮಾರ್ಗದರ್ಶನದಂತೆ ಮುಂಬೈನಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿದ ಎರಿಕಾ, ನಂತರ ಮಾಡೆಲಿಂಗ್ಗೆ ಕಾಲಿಟ್ಟರು. 2011ರಲ್ಲಿ ಮಿಸ್ ಮಹಾರಾಷ್ಟ್ರ ಪ್ರಶಸ್ತಿಗೆ ಭಾಜನರಾದರು. ಬಳಿಕ ಎರಿಕಾ ಬಂದ ಅವಕಾಶಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಮೂಲಕ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡರು.