ಕರ್ನಾಟಕ

karnataka

ETV Bharat / sitara

ಹೌದು; ನಾನು ಆ ಚಿತ್ರಗಳನ್ನು ನೋಡ್ತಿದ್ದೆ: ಕದ್ದುಮುಚ್ಚಿ ನೋಡಿದ್ದನ್ನು ಬಿಚ್ಚಿಟ್ಟ ನಟಿ - ಬಿಟೌನ್​​

ಬೋಲ್ಡ್ ಬ್ಯೂಟಿ ರೆಜಿನಾ ಟೀನೇಜ್​ಲ್ಲಿ ಅಡಲ್ಟ್ ಚಿತ್ರಗಳನ್ನು ನೋಡಿರುವುದಾಗಿ ಒಪ್ಪಿಕೊಂಡಿದ್ದಾರೆ. ವಯಸ್ಕರ ಚಿತ್ರಗಳನ್ನು ನೋಡುವುದು ಕಾಮನ್ ಎಂದಿದ್ದಾರೆ.

ಚಿತ್ರಕೃಪೆ : ಇನ್​ಸ್ಟಾಗ್ರಾಂ

By

Published : Jun 18, 2019, 7:26 PM IST

ಬಾಲಿವುಡ್ ನಟಿ ರೆಜಿನಾ ಸಿಕ್ಕಾಪಟ್ಟೆ ಬೋಲ್ಡ್​. ಯಾವುದನ್ನು ಮುಚ್ಚು ಮರೆಯಿಲ್ಲದೇ ಮಾತಾಡೋ ಮಾತಿನ ಮಲ್ಲಿ. ಸದ್ಯ ಬಿಟೌನ್​​ಲ್ಲಿ ಸಕ್ಸಸ್​ ಜರ್ನಿ ಶುರು ಮಾಡಿರೋ ಈ ಚೆಂದುಳ್ಳಿ ಚೆಲುವೆ ತಮ್ಮ ಸೀಕ್ರೆಟ್​ವೊಂದನ್ನು ಕೊನೆಗೂ ಬಿಚ್ಚಿಟ್ಟಿದ್ದಾರೆ.

ಇತ್ತೀಚೆಗೆ ಮಾಧ್ಯಮಗೋಷ್ಟಿಗೆ ಹಾಜರಾಗಿದ್ದ ರೆಜಿನಾ, ಸಂದರ್ಶಕ ಕೇಳಿದ ಪ್ರಶ್ನೆಗೆ ಹಿಂದೆ-ಮುಂದೆ ನೋಡದೆ ಉತ್ತರ ನೀಡಿದ್ದಾರೆ. ಅಷ್ಟಕ್ಕೂ ರೆಜಿನಾ ಬಿಚ್ಚಿಟ್ಟ ಕಹಾನಿ ಏನು ಅಂತೀರಾ?

28ರ ಹರೆಯದ ಈ ಮುದ್ದು ಮುಖದ ಹುಡುಗಿ ಟೀನೇಜ್​​ಲ್ಲಿ ಅಡಲ್ಟ್​ ಸಿನಿಮಾ ನೋಡಿದ್ದನ್ನು ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಬಹುತೇಕ ಹುಡುಗ-ಹುಡುಗಿಯರು ಅಂತಹ ಸಿನಿಮಾಗಳನ್ನು ನೋಡುತ್ತಾರೆ. ಅದು ಕಾಮನ್ ಆಗಿಬಿಟ್ಟಿದೆ. ಆದರೆ, ಯಾರೂ ಕೂಡ ಈ ಬಗ್ಗೆ ಹೇಳಿಕೊಳ್ಳುವುದಿಲ್ಲ. ಆದ್ರೆ ನಾನು ಮಾತ್ರ ಅದನ್ನು ಬಚ್ಚಿಡುವುದಿಲ್ಲ ಎಂದಿದ್ದಾರೆ.

ಇನ್ನು ಟಾಲಿವುಡ್​ನ ಕೆಲ ಚಿತ್ರಗಳಲ್ಲಿ ನಟಿಸಿರುವ ರೆಜಿನಾ, ಸೋನಮ್ ಕಪೂರ್ ಜತೆ ‘Ek Ladki Ko Dekha Toh Aisa Laga’ ಚಿತ್ರದಲ್ಲಿ ಲೆಸ್ಬಿಯನ್ ಪಾತ್ರ ನಿಭಾಯಿಸಿದ್ದರು. ಈ ಮೂಲಕ ಬಾಲಿವುಡ್​​ಗೆ ಪ್ರವೇಶಿಸಿದ್ದ ಅವರು, ಸದ್ಯ ಬಿಟೌನ್​ಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

ABOUT THE AUTHOR

...view details