ಬೆಂಗಳೂರು:ಕೊರೊನಾದಿಂದ ಕನ್ನಡ ಚಿತ್ರರಂಗ ಸ್ಥಗಿತ ಆಗಿರುವ ಕಾರಣ, ಸಿನಿಮಾ ಕಾರ್ಮಿಕರು ಸೇರಿದಂತೆ ಸಾಕಷ್ಟು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಇಂಥ ಸಮಯದಲ್ಲಿ ಕಳೆದ ಒಂದು ವಾರದಿಂದ, ರಿಯಲ್ ಸ್ಟಾರ್ ಉಪೇಂದ್ರ ಅವರು ಚಿತ್ರರಂಗದ ಸ್ನೇಹಿತರು ಹಾಗೂ ದಾನಿಗಳ ಸಹಾಯದಿಂದ, ಕಷ್ಟದಲ್ಲಿರುವ ಕಾರ್ಮಿಕರ ಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್‌ಗಳನ್ನು ನೀಡುತ್ತಿದ್ದಾರೆ. ಇದೀಗ ಸಿನಿಮಾ ಕಾರ್ಮಿಕರ ಬಳಿಕ, ಉಪೇಂದ್ರ ರೈತರಿಗೂ ನೆರವಾಗಲು ನಿರ್ಧರಿಸಿದ್ದಾರೆ.
ಓದಿ: 75 ಪೈಸೆಗೂ ಮಾರಾಟವಾಗದ ಕೆಜಿ ಟೊಮ್ಯಾಟೊ.. ಬೀದಿಪಾಲಾಗಿದೆ ರೈತನ ಬದುಕು
ಲಾಕ್‌ಡೌನ್‌ನಿಂದಾಗಿ ಬೆಳೆದ ಬೆಳೆ ವ್ಯಾಪಾರವಾಗದೆ ಸಂಕಷ್ಟದಲ್ಲಿರುವ ರೈತರ ಬೆಳೆಯನ್ನು ಖರೀದಿ ಮಾಡಿ, ಅವಶ್ಯವಿರುವವರಿಗೆ ಹಂಚಲು ನಟ ಉಪೇಂದ್ರ ಮನಸ್ಸು ಮಾಡಿದ್ದಾರೆ. ಕೊರೊನಾ ಸಂಕಷ್ಟದಲ್ಲಿರುವವರಿಗೆ ಸಹಕಾರಿಯಾಗುವಂತೆ ದಿನಸಿ ಕಿಟ್‌ಗಳನ್ನು ಉಪೇಂದ್ರ ವಿತರಿಸುತ್ತಿದ್ದಾರೆ. ಇದರ ಜೊತೆಗೆ ರೈತಾಪಿ ವರ್ಗಕ್ಕೂ ಸಹಾಯವಾಗಲಿ ಎಂದು ರೈತರಿಂದ ನೇರವಾಗಿ ಬೆಳೆ ಖರೀದಿ ಮಾಡಿ, ಅದನ್ನು ದಿನಸಿ ಕಿಟ್ ಮೂಲಕ ವಿತರಿಸಲು ಉಪೇಂದ್ರ ಪ್ಲಾನ್ ಮಾಡಿದ್ದಾರೆ.