ಕರ್ನಾಟಕ

karnataka

ETV Bharat / sitara

ಹುಟ್ಟು ಹಬ್ಬದ ಸಂಭ್ರಮದಲ್ಲಿ ಮಾದಕ ಲೋಕದ ಚೆಲುವೆ... ಸನ್ನಿ ಲಿಯೋನ್​​ಗೆ ಶುಭಾಶಯಗಳ ಮಹಾಪೂರ! - ಸನ್ನಿ ಲಿಯೊನ್​​ ಹುಟ್ಟುಹಬ್ಬ

ಬಾಲಿವುಡ್‌ ಸುಂದರಿ, ನೀಲಿ ತಾರೆ ಸನ್ನಿ ಲಿಯೋನ್​ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದು, ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ.

unny Leone
unny Leone

By

Published : May 13, 2020, 1:12 PM IST

Updated : May 13, 2020, 1:26 PM IST

ಮಾದಕ ಚೆಲುವೆ, ಬಾಲಿವುಡ್​ ಸುಂದರಿ ಸನ್ನಿ ಲಿಯೋನ್​​​​​ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಅವರಿಗೆ ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. ಬಾಲಿವುಡ್ ಬೇಬಿ ಡಾಲ್​ ಎಂದೇ ಹೆಸರು ಪಡೆದಿರುವ ಸನ್ನಿ ಲಿಯೋನ್​​ಗೆ ಕೋಟ್ಯಂತರ ಮಂದಿ ಅಭಿಮಾನಿಗಳಿದ್ದಾರೆ. ಕಡಿಮೆ ಅವಧಿಯಲ್ಲಿ ಇಡೀ ಜಗತ್ತು ಹಿಂತಿರುಗಿ ನೋಡುವಂತೆ ಮಾಡಿದ ಸನ್ನಿ 1981ರ ಮೇ 13ರಂದು ಜನಸಿದ್ದಾರೆ.

ಸನ್ನಿ ಲಿಯೋನ್​ ಬರ್ತಡೇ

40 ವರ್ಷದ ನಟಿ 2012ರಲ್ಲಿ ಬಾಲಿವುಡ್​​ಗೆ ಎಂಟ್ರಿ ಕೊಟ್ಟಿದ್ದು, ಜಿಸ್ಮ-2 ಚಿತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಾರೆ. ಬಾಲಿವುಡ್​ನ ಕಿಂಗ್​ ಶಾರೂಖ್​ ಖಾನ್​ ಅವರ ಚಿತ್ರದಲ್ಲೂ ಲೈಲಾ ಓ ಲೈಲಾ ಹಾಡಿಗೆ ಹೆಜ್ಜೆ ಹಾಕಿರುವ ನಟಿ ಅನೇಕ ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ. ಮೇಲಿಂದ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಪಡ್ಡೆ ಹುಡುಗರ ಎದೆಗೆ ಕಾವು ನೀಡುತ್ತಲೇ ಇರುತ್ತಾರೆ. ಕಳೆದ ಕೆಲ ದಿನಗಳ ಹಿಂದೆ ಸ್ನಾನದ ದೃಶ್ಯ ಶೇರ್​ ಮಾಡಿದ್ದರು. ಸನ್ನಿ ಲಿಯೋನ್​ ಮೂರು ಮಕ್ಕಳ ದತ್ತು ಪಡೆದುಕೊಂಡಿದ್ದಾರೆ. ಅಂದ ಹಾಗೆ ಇವರ ಪತಿ ಡೇನಿಯಲ್​​​​.

ಮಾದಕ ಲೋಕದ ಚೆಲುವೆ

ದೇಶದಲ್ಲಿ ಲಾಕ್​ಡೌನ್​ ಜಾರಿಯಲ್ಲಿದ್ದು, ಇದರ ಮದ್ಯೆ ಬಾಲಿವುಡ್‌ ಸುಂದರಿ, ನೀಲಿ ತಾರೆ ತಮ್ಮ ಕುಟುಂಬದವರ ಜೊತೆ ಲಾಸ್‌ಏಂಜಲೀಸ್​​​​​​ಗೆ ವಿಮಾನದಲ್ಲಿ ಹಾರಿದ್ದಾರೆ ಎಂಬ ಮಾತು ಕೇಳಿ ಬಂದಿವೆ.

Last Updated : May 13, 2020, 1:26 PM IST

ABOUT THE AUTHOR

...view details