ಲಂಡನ್:ಇದೇ ಮೊದಲ ಬಾರಿಗೆ ನಡೆದ ಱಂಕಿಂಗ್ ಪ್ರಕ್ರಿಯೆಯೊಂದರಲ್ಲಿ, ಕೋವಿಡ್-19 ಅವಧಿಯಲ್ಲಿ ಜನರಿಗೆ ಸಹಾಯಹಸ್ತ ಚಾಚಿದ ನಟ ಸೋನು ಸೂದ್ ದಕ್ಷಿಣ ಏಷ್ಯಾದ ನಂಬರ್ ಒನ್ ಸೆಲೆಬ್ರಿಟಿ ಎಂದು ಹೆಸರಿಸಲ್ಪಟ್ಟಿದ್ದಾರೆಂದು ನಿನ್ನೆ ಬಿಡುಗಡೆಯಾಗಿರುವ ಪಟ್ಟಿಯಿಂದ ತಿಳಿದುಬಂದಿದೆ.
ಸೋನು ಸೂದ್ 'ವಿಶ್ವದ 50 ಏಷ್ಯನ್ ಸೆಲೆಬ್ರಿಟಿಗಳ ಪಟ್ಟಿ'ಯಲ್ಲಿ ಅಗ್ರಸ್ಥಾನದಲ್ಲಿದ್ದು, ಇದನ್ನು 'ಈಸ್ಟರ್ನ್ ಐ' ವಾರಪತ್ರಿಕೆ ಪ್ರಕಟಿಸಿದೆ.
"ಕೋವಿಡ್-19 ಸಾಂಕ್ರಾಮಿಕ ರೋಗ ಪ್ರಾರಂಭವಾದಂತೆ, ನನ್ನ ದೇಶವಾಸಿಗಳಿಗೆ ಸಹಾಯ ಮಾಡುವುದು ನನ್ನ ಕರ್ತವ್ಯವೆಂದು ನಾನು ಅರಿತುಕೊಂಡೆ." ಎಂದು ಹೇಳಿದ ಸೋನು ಸೂದ್, ತಮಗೆ ಸಂದ ಗೌರವಕ್ಕಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.
"ಇದು ಭಾರತೀಯನಾಗಿ ನನ್ನ ಜವಾಬ್ದಾರಿಯಾಗಿದೆ, ಅದನ್ನು ನಾನು ಮಾಡಿದ್ದೇನೆ. ಜನರ ಪ್ರೀತಿ ಮತ್ತು ಪ್ರಾರ್ಥನೆಗಳು ನನಗೆ ಸಿಕ್ಕಿದೆ ಎಂದು ಸೂದ್ ಹೇಳಿದರು.
ಇದನ್ನೂ ಓದಿ: ಬಡವರಿಗಾಗಿ ಪತ್ನಿ ಸೋನಾಲಿ ಆಸ್ತಿಯನ್ನು ಒತ್ತೆ ಇಟ್ರಾ ಸೋನು ಸೂದ್....?
ಈಸ್ಟರ್ನ್ ಐ ಮನರಂಜನಾ ಸಂಪಾದಕ ಅಸ್ಜಾದ್ ನಜೀರ್ ಈ ಪಟ್ಟಿಯನ್ನು ಸಂಗ್ರಹಿಸಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಯಾವುದೇ ಇತರ ಪ್ರಸಿದ್ಧ ವ್ಯಕ್ತಿಗಳು ಜನರಿಗೆ ಹೆಚ್ಚು ಸಹಾಯ ಮಾಡದ ಕಾರಣ ಸೂದ್ ಅರ್ಹ ವಿಜೇತ ಎಂದು ಅವರು ಹೇಳಿದರು.
ಕೆನಡಾದ ಯೂಟ್ಯೂಬರ್, ಸೋಷಿಯಲ್ ಮೀಡಿಯಾ ತಾರೆ ಮತ್ತು ಹಾಸ್ಯನಟಿ ಲಿಲ್ಲಿ ಸಿಂಗ್ ಪ್ರೇಕ್ಷಕರಿಗೆ ಅಗತ್ಯವಿರುವಾಗ ಮನರಂಜನೆ ನೀಡಿದ್ದಕ್ಕಾಗಿ ಎರಡನೇ ಸ್ಥಾನ ಪಡೆದಿದ್ದಾರೆ.
ಹಾಫ್-ಇಂಡಿಯನ್ ಬ್ರಿಟಿಷ್ ಪಾಪ್ ಸೂಪರ್ ಸ್ಟಾರ್, ಚಾರ್ಲಿ ಎಕ್ಸ್‌ಸಿಎಕ್ಸ್, ತನ್ನ ಮಾಸ್ಟರ್‌ಪೀಸ್ ಮರ್ಕ್ಯುರಿ ಮ್ಯೂಸಿಕ್ ಪ್ರೈಜ್ ನಾಮನಿರ್ದೇಶಿತ ಆಲ್ಬಂ 'ಹೌ ಐ ಆಮ್ ಫೀಲಿಂಗ್ ನೌ' ಅನ್ನು ಸಂಪೂರ್ಣವಾಗಿ ಲಾಕ್‌ಡೌನ್ ಸಮಯದಲ್ಲಿ ರಚಿಸಿ ಮೂರನೇ ಸ್ಥಾನದಲ್ಲಿದ್ದು, ಬ್ರಿಟಿಷ್ ಇಂಡಿಯನ್ ನಟ ದೇವ್ ಪಟೇಲ್ "ದಿ ಪರ್ಸನಲ್ ಹಿಸ್ಟರಿ ಆಫ್ ಡೇವಿಡ್ ಕಾಪರ್ಫೀಲ್ಡ್" ಮತ್ತು"ದಿ ಗ್ರೀನ್ ನೈಟ್"ನಲ್ಲಿ ನಿರ್ವಹಿಸಿದ ಪಾತ್ರಗಳಿಗಾಗಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಭಾರತೀಯ ಗಾಯಕ ಅರ್ಮಾನ್ ಮಲಿಕ್ ತಮ್ಮ ಅಪಾರ ಸಂಗೀತ ಉತ್ಪಾದನೆಗೆ ಐದನೇ ಸ್ಥಾನ ಪಡೆದಿದ್ದಾರೆ.
ಟಾಪ್ 10 ಲಿಸ್ಟ್ನಲ್ಲಿ ಪ್ರಿಯಾಂಕಾ ಚೋಪ್ರಾ ಜೊನಸ್ (6), ಪ್ಯಾನ್-ಇಂಡಿಯನ್ ಸ್ಟಾರ್ ಪ್ರಭಾಸ್ (7), ಹಾಲಿವುಡ್ ಪವರ್ ಪ್ಲೇಯರ್ ಮಿಂಡಿ ಕಾಲಿಂಗ್ (8), ಭಾರತೀಯ ಟಿವಿ ತಾರೆ ಸುರ್ಬಿ ಚಾಂದನಾ (9) ಮತ್ತು ಪಾಕಿಸ್ತಾನ ಮೂಲದ ಹಾಲಿವುಡ್ ಹೆವಿವೇಯ್ಟ್ ಕುಮೈಲ್ ನಂಜಿಯಾನಿ (10) ಇದ್ದಾರೆ.
ನೆಟ್‌ಫ್ಲಿಕ್ಸ್ ಸೀರೀಸ್ 'ನೆವರ್ ಹ್ಯಾವ್ ಐ ಎವರ್'ನಲ್ಲಿ ನಟಿಸಿದ 18 ವರ್ಷದ ಮೈತ್ರೇಯಿ ರಾಮಕೃಷ್ಣನ್ (22) ಹಾಗೂ ಕೋವಿಡ್-19ಗೆ ತುತ್ತಾಗಿ, ಚೇತರಿಸಿಕೊಂಡ 78 ವರ್ಷದ ಅಮಿತಾಬ್ ಬಚ್ಚನ್ (20) ಕೂಡಾ ಈ ಪಟ್ಟಿಯಲ್ಲಿದ್ದಾರೆ.