ಮುಂಬೈ: ಬಹುಭಾಷಾ ನಟ ಸೋನು ಸೂದ್ಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ವೈದ್ಯರ ಸಲಹೆ ಮೇರೆಗೆ ಸ್ವತಃ ಹೋಂ ಕ್ವಾರಂಟೈನ್ ಆಗಿದ್ದಾರೆ.
ಬಹುಭಾಷಾ ನಟ ಸೋನು ಸೂದ್ಗೆ ಕೊರೊನಾ ಪಾಸಿಟಿವ್ - ಬಾಲಿವುಡ್ ನಟ ಸೋನು ಸೂದ್ ಸುದ್ದಿಗಳು
ಬಾಲಿವುಡ್ ನಟ ಸೋನು ಸೂದ್ಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಸ್ವತಃ ಹೋಂ ಕ್ವಾರಂಟೈನ್ಗೆ ಒಳಗಾಗಿದ್ದಾರೆ.
ಬಾಲಿವುಡ್ ನಟ ಸೋನು ಸೂದ್
ಸೋನು ಸೂದ್ ಇತ್ತೀಚೆಗೆ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಜಾಗೃತಿ ಸಂದೇಶ ಮೆರೆದಿದ್ದರು. ವಿಶ್ವ ಆರೋಗ್ಯ ದಿನದ ಸಂದರ್ಭ ಬೆಳಗ್ಗೆ ಇಲ್ಲಿನ ಅಪೋಲೋ ಆಸ್ಪತ್ರೆಗೆ ತೆರಳಿದ್ದ ಅವರು ಚುಚ್ಚುಮದ್ದು ಹಾಕಿಸಿಕೊಂಡಿದ್ದರು. ಬಳಿಕ ಎಂದಿನಂತೆ ತಮ್ಮ ಪಾಜೆಕ್ಟ್ನಲ್ಲಿ ಬ್ಯೂಸಿ ಆಗಿದ್ದರು.
ಆದರೆ, ಇಂದು ಟೆಸ್ಟ್ ಮಾಡಿಸಿಕೊಂಡಿದ್ದು, ವರದಿಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ. ಇನ್ನು ಈ ಬಗ್ಗೆ ಸುದ್ದಿ ಸಂಸ್ಥೆವೊಂದು ಟ್ವೀಟ್ ಮಾಡಿ ಖಚಿಪಡಿಸಿದೆ.