ತೆರೆ ಮೇಲೆ ಖಳನಟನಾಗಿ ಮಿಂಚುವ ಸೋನು ಸೂದ್, ತೆರೆ ಹಿಂದೆ ತಮ್ಮ ಸಾಮಾಜಿಕ ಸೇವೆಗಳ ಮೂಲಕ ರಿಯಲ್ ಹೀರೋ ಆಗಿ ಜನರ ಮನಗೆದ್ದಿದ್ದಾರೆ. ನಟನೆ ಸಾಮಾಜಿಕ ಸೇವೆ ಜೊತೆ ಜೊತೆಗೆ ಫಿಟ್ನೆಸ್ಗೂ ಹೆಚ್ಚಿನ ಪ್ರಾಮುಖ್ಯತೆ ಕೊಡುವ ಈ ಖ್ಯಾತ ನಟ ಜಿಮ್ನಲ್ಲಿ ಸಕತ್ ಡೇಂಜರಸ್ ವರ್ಕೌಟ್ ವೊಂದನ್ನು ಮಾಡಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜಿಮ್ನಲ್ಲಿ ನಟ ಸೋನು ಸೂದ್ ಡೇಂಜರಸ್ ವರ್ಕೌಟ್ ಮಾಡಿರುವ ವಿಡಿಯೋವನ್ನು ಅಭಿಮಾನಿಗಳು ಕಂಡು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಈ ವರ್ಕೌಟ್ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಅದು ನೆಟ್‌ಫ್ಲಿಕ್ಸ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. "ಇದೊಂದು ಅಪಾಯಕಾರಿ ಸಾಹಸ. ಸರಿಯಾದ ತರಬೇತಿ ಇಲ್ಲದೆ ಪ್ರಯತ್ನಿಸಬೇಡಿ" ಎಂದು ಸೋನು ಎಚ್ಚರಿಸಿದ್ದಾರೆ.