ಮುಂಬೈ: 100ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ನಟನೆ ಮಾಡಿದ್ದ ಬಾಲಿವುಡ್ನ ಹಿರಿಯ ನಟಿ ಕುಂಕುಮ್ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಕಳೆದ ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಮುಂಬೈನ ಬಾಂದ್ರಾ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಪ್ರಮುಖವಾಗಿ 'ಮದರ್ ಇಂಡಿಯಾ', 'ಕೊಹಿನೂರ್' ಮತ್ತು 'ಉಜಾಲಾ’ ಸೇರಿದಂತೆ ಕುಂಕುಮ್ 100ಕ್ಕೂ ಅಧಿಕ ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಕೊನೆಯ ಬಾರಿಗೆ ಪ್ರಕಾಶ್ ಮೆಹ್ರಾ ನಿರ್ದೇಶನದ ಏಕ್ ಕುನ್ವಾರಿ ಏಕ್ ಕುನ್ವಾರಾ ಚಿತ್ರದಲ್ಲಿ ಕಾಣಿಸಿಕೊಂಡರು. ಭೋಜ್‌ಪುರಿಯ 'ಗಂಗಾ ಮಾಯಾ ತೋಹೆ ಪಿಯಾರಿ ಚಾಧೈಬೊ' ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದರು.
ಇದರ ಮಧ್ಯೆ ಕಭಿ ಹಾರ್, ಕಭಿ ಪಾರ್ ಮತ್ತು ಮೇರೆ ಮೆಹಬೂಬ್ ಕಯಾಮತ್ ಹೋಗಿ ಎಂಬ ಹಾಡುಗಳಿಂದ ಫೇಮಸ್ ಆಗಿದ್ದರು.