ಕರ್ನಾಟಕ

karnataka

ETV Bharat / sitara

ಬಾಲಿವುಡ್​ ನಟ ಕಿರಣ್​ ಕುಮಾರ್​​ಗೆ ಕೊರೊನಾ ನೆಗೆಟಿವ್​: ನಿಟ್ಟುಸಿರು ಬಿಟ್ಟ ಕುಟುಂಬ - ಬಾಲಿವುಡ್​ ನಟ ಕಿರಣ್​ ಕುಮಾರ್

ಕೊರೊನಾ ಸೋಂಕಿಗೆ ಒಳಗಾಗಿದ್ದ ಬಾಲಿವುಡ್ ಹಿರಿಯ​ ನಟ ಕಿರಣ್​ ಕುಮಾರ್ ಮೂರನೇ ಬಾರಿ ನಡೆಸಿರುವ ಪರೀಕ್ಷೆಯ ವರದಿ ನೆಗೆಟಿವ್​ ಬಂದಿದ್ದು, ಕುಟುಂಬದ ಸದಸ್ಯರು ಸೆಲ್ಫ್​​ ಕ್ವಾರಂಟೈನ್​​ ಮುಂದುವರೆಸಿದ್ದಾರೆ ಎಂದು ನಟ ತಿಳಿಸಿದ್ದಾರೆ.

Actor Kiran Kumar
ಬಾಲಿವುಡ್​ ನಟ ಕಿರಣ್​ ಕುಮಾರ್

By

Published : May 27, 2020, 6:36 PM IST

ಮುಂಬೈ:ಕೊರೊನಾ ಸೋಂಕಿಗೆ ಒಳಗಾಗಿದ್ದ ಬಾಲಿವುಡ್ ಹಿರಿಯ​ ನಟ ಕಿರಣ್​ ಕುಮಾರ್ ವರದಿ ಇದೀಗ ನೆಗೆಟಿವ್​ ಬಂದಿದೆ.

ಮೇ 14 ರಂದು ನಡೆಸಿದ್ದ ನನ್ನ ಕೋವಿಡ್-19 ಪರೀಕ್ಷಾ ವರದಿ ಪಾಸಿಟಿವ್​ ಬಂದಿತ್ತು. ಆದರೆ, ಕಳೆದ ಹತ್ತು ದಿನಗಳಿಂದ ಜ್ವರ, ಕೆಮ್ಮು, ಶೀತದಂತಹ ರೋಗದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ನಾನು ಮತ್ತು ನನ್ನ ಕುಟುಂಬದವರು ಸೆಲ್ಫ್​​ ಕ್ವಾರಂಟೈನ್​​ನಲ್ಲಿದ್ದೇವೆ ಎಂದು ಕಿರಣ್​ ಕುಮಾರ್ ಮೇ 24 ರಂದು ಸ್ವತಃ ತಾವೇ ಹೇಳಿಕೊಂಡಿದ್ದರು.

ಇದೀಗ ಮೂರನೇ ಬಾರಿ ನಡೆಸಿರುವ ಪರೀಕ್ಷೆಯ ವರದಿ ನೆಗೆಟಿವ್​ ಬಂದಿದೆ. ಸದ್ಯ ನಾನು ಆರೋಗ್ಯವಾಗಿದ್ದೇನೆ. ಆದರೂ ಕುಟುಂಬದ ಸದಸ್ಯರು ಸೆಲ್ಫ್​​ ಕ್ವಾರಂಟೈನ್​​ ಮುಂದುವರೆಸಿದ್ದಾರೆ ಎಂದು ಕಿರಣ್​ ಕುಮಾರ್ ತಿಳಿಸಿದ್ದಾರೆ.

ದಡಕನ್, ಮುಜ್ಸೆ ದೋಸ್ತಿ ಕರೋಗೆ, ಪತ್ತರ್​ ಕೆ ಫೂಲ್​​ ಚಿತ್ರಗಳಲ್ಲಿ ನಟಿಸಿರುವ ಕಿರಣ್​ ಕುಮಾರ್, ಬಾಲಿವುಡ್​ನ ಖ್ಯಾತ ನಟ ಜೀವನ್​ ಅವರ ಮಗನಾಗಿದ್ದಾರೆ.

ABOUT THE AUTHOR

...view details