ಚಂಡೀಗಢ:ಲುಧಿಯಾನದಲ್ಲಿ ವೆಬ್ ಸಿರೀಸ್ ಚಿತ್ರೀಕರಣದ ವೇಳೆ ಕೋವಿಡ್ ಕರ್ಫ್ಯೂ ಉಲ್ಲಂಘಿಸಿದ್ದಕ್ಕಾಗಿ ನಟ ಜಿಮ್ಮಿ ಶೆರ್ಗಿಲ್, ನಿರ್ದೇಶಕ ಈಶ್ವರ್ ನಿವಾಸ್ ಮತ್ತು ಇತರ 35 ಮಂದಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶೂಟಿಂಗ್ ವೇಳೆ ಕೋವಿಡ್ ನಿಯಮ ಉಲ್ಲಂಘನೆ: ನಟ ಜಿಮ್ಮಿ ಶೆರ್ಗಿಲ್ ವಿರುದ್ಧ ಕೇಸ್ - ಲುಧಿಯಾನದಲ್ಲಿ ವೆಬ್ ಸಿರೀಸ್ ಚಿತ್ರೀಕರಣದ ವೇಳೆ ಕೋವಿಡ್ ಕರ್ಫ್ಯೂ ಉಲ್ಲಂಘನೆ
ಲುಧಿಯಾನದಲ್ಲಿ ವೆಬ್ ಸಿರೀಸ್ ಚಿತ್ರೀಕರಣದ ವೇಳೆ ಕೋವಿಡ್ ಕರ್ಫ್ಯೂ ಉಲ್ಲಂಘಿಸಿದ್ದಕ್ಕಾಗಿ ನಟ ಜಿಮ್ಮಿ ಶೆರ್ಗಿಲ್, ನಿರ್ದೇಶಕ ಈಶ್ವರ್ ನಿವಾಸ್ ಮತ್ತು ಇತರ 35 ಮಂದಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಇಸ್ರೇಲಿ ವೆಬ್ ಶೋನ ರೀಮೇಕ್ ಆದ 'ಯುವರ್ ಹಾನರ್' ಎಂಬ ವೆಬ್ ಸರಣಿ ಚಿತ್ರೀಕರಣಕ್ಕಾಗಿ ಅವರು ಖಾಸಗಿ ಶಾಲೆಯಲ್ಲಿ ಅನುಮತಿಯಿಲ್ಲದೆ ಮತ್ತು ಕೋವಿಡ್ ನಿಯಮಾವಳಿ ಪಾಲಿಸದೇ ಶೂಟಿಂಗ್ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಈ ಹಿನ್ನೆಲೆ ಮಂಗಳವಾರ ರಾತ್ರಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಭಾರತೀಯ ದಂಡ ಸಂಹಿತೆ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯ ಸೆಕ್ಷನ್ 188 ಮತ್ತು 269 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 150 ಮಂದಿ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡು ರಾತ್ರಿ 8 ಗಂಟೆ ಸುಮಾರಿಗೆ ಒಂದು ಸೆಟ್‌ನಲ್ಲಿ ಗುಂಡು ಹಾರಿಸುತ್ತಿದ್ದರು, ಈ ವೇಳೆ ಪೊಲೀಸರು ಶೂಟಿಂಗ್ ಸ್ಥಳದ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ನಿವಾಸ್ ಮತ್ತು ಇತರ ಇಬ್ಬರು ಬಂಧಿಸಲ್ಪಟ್ಟಿದ್ದರೂ ನಂತರ ಜಾಮೀನು ಪಡೆದು ಬಿಡುಗಡೆಯಾದರು.