ಕರ್ನಾಟಕ

karnataka

ETV Bharat / sitara

ವಂಚನೆ ಪ್ರಕರಣ: ಇಡಿ ವಿಚಾರಣೆಗೆ ಹಾಜರಾದ ನಟಿ ಜಾಕ್ವೆಲಿನ್ ಫರ್ನಾಂಡಿಸ್ - ಇಡಿ ಕಚೇರಿಗೆ ಬಾಲಿವುಡ್‌ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಹಾಜರು

ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಗಂಭೀರ ಆರೋಪ ಎದುರಿಸುತ್ತಿರುವ ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡಿಸ್ ವಿಚಾರಣೆಗಾಗಿ ದೆಹಲಿಯಲ್ಲಿನ ಜಾರಿ ನಿರ್ದೇಶನಾಲಯ (ಇಡಿ) ಕಚೇರಿಗೆ ಇಂದು ಹಾಜರಾದರು.

Actor Jacqueline Fernandez appears before Enforcement Directorate (ED) at its office in Delhi
ವಂಚನೆ ಪ್ರಕರಣ; ದೆಹಲಿಯ ಇಡಿ ಕಚೇರಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಹಾಜರು

By

Published : Dec 8, 2021, 11:51 AM IST

ನವದೆಹಲಿ:ವಂಚಕ ಸುಕೇಶ್ ಚಂದ್ರಶೇಖರ್ ನಡೆಸಿದ್ದಾನೆ ಎನ್ನಲಾದ 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಸಿಲುಕಿರುವ ಬಾಲಿವುಡ್‌ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಗೆ ಹಾಜರಾದರು. ಈ ಪ್ರಕರಣ ಸಂಬಂಧ ವಿಚಾರಣೆಗೆ ಆಗಮಿಸುವಂತೆ ಅಧಿಕಾರಿಗಳು ನಟಿಗೆ ನೋಟಿಸ್‌ ನೀಡಿದ್ದರು.

ಇದೇ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಜಾಕ್ವೆಲಿನ್‌ಗೆ ಲುಕ್‌ಔಟ್‌ ನೋಟಿಸ್‌​ ಕೂಡಾ ಹೊರಡಿಸಿತ್ತು. ಕಳೆದ ಭಾನುವಾರ ವಿದೇಶಕ್ಕೆ ತೆರಳಲು ಮುಂದಾಗಿದ್ದ ಇವರನ್ನು ಮುಂಬೈ ವಿಮಾನದಲ್ಲಿ ವಲಸೆ ವಿಭಾಗದ ಅಧಿಕಾರಿಗಳು ತಡೆದು ವಾಪಸ್‌ ಕಳುಹಿಸಿದ್ದರು.

ಮುಂಬೈ ವಿಮಾನ ನಿಲ್ದಾಣದ ಟರ್ಮಿನಲ್ 2ರಿಂದ ನಿರ್ಗಮನ ಗೇಟ್ ಸಂಖ್ಯೆ 3ರ ಮೂಲಕ ಅಂದು ಸಂಜೆ 5:30ಕ್ಕೆ ಇವರು ಮಸ್ಕತ್​ಗೆ ತೆರಳುತ್ತಿದ್ದರು. ಆದ್ರೆ ವಂಚನೆ ಪ್ರಕರಣದ ತನಿಖೆ ನಡೆಯುತ್ತಿದ್ದು, ಭಾರತ ಬಿಟ್ಟು ಹೋಗಲು ಅನುಮತಿ ನೀಡಬಾರದು ಎಂಬ ನಿರ್ದೇಶನದೊಂದಿಗೆ ಲುಕ್‌ಔಟ್‌ ನೋಟಿಸ್‌ ನೀಡಲಾಗಿತ್ತು.

ಇದನ್ನೂ ಓದಿ:ಬಹುಕೋಟಿ ಸುಲಿಗೆ ಪ್ರಕರಣ: ಬಾಲಿವುಡ್‌ ನಟಿ ಜಾಕ್ವೆಲಿನ್‌ ವಿದೇಶ ಪ್ರಯಾಣಕ್ಕೆ ನಿರ್ಬಂಧ

ABOUT THE AUTHOR

...view details