ಕರ್ನಾಟಕ

karnataka

ETV Bharat / sitara

ಅರ್ಜುನ್ ರಾಂಪಾಲ್ ಜತೆ ಆತನ ಗರ್ಲ್​ಫ್ರೆಂಡ್​ಗೂ ಜಾರಿಯಾಯ್ತು ಸಮನ್ಸ್​! - ಬಾಲಿವುಡ್​ ನಟ ಅರ್ಜುನ್​ ರಾಂಪಾಲ್​ಗೆ ಬಿಸಿ ಮುಟ್ಟಿಸಿದ ಎನ್​ಸಿಬಿ

ಬಾಲಿವುಡ್​ನಲ್ಲಿನ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ನಟ - ನಟಿಯರ ವಿಚಾರಣೆ ನಡೆಸುತ್ತಿರುವ ಎನ್​ಸಿಬಿ ಇದೀಗ ಅರ್ಜುಲ್​ ರಾಂಪಾಲ್​ಗೆ ಬಿಸಿ ಮುಟ್ಟಿಸಿದೆ.

Actor Arjun Rampal
Actor Arjun Rampal

By

Published : Nov 9, 2020, 4:52 PM IST

ಮುಂಬೈ:ಬಾಲಿವುಡ್​ನ ಖ್ಯಾತ ನಟ ಅರ್ಜುನ್​ ರಾಂಪಾಲ್​ ಮನೆ ಹಾಗೂ ಕಚೇರಿ ಮೇಲೆ ಎನ್​ಸಿಬಿ ದಿಢೀರ್ ದಾಳಿ ನಡೆಸಿದ್ದು, ಆತನ ಕಾರ್​ ಡ್ರೈವರ್​ನನ್ನ ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.

ಅರ್ಜುನ್​ ರಾಂಪಾಲ್​ ಹಾಗೂ ಬ್ರಾಬಿಯೆಲ್​

ಬೆಳಗ್ಗೆ ಅವರ ಕಚೇರಿ ಹಾಗೂ ನಿವಾಸದ ಮೇಲೆ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳು ದಾಳಿ ನಡೆಸಿ, ಮಹತ್ವದ ದಾಖಲೆ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದ್ದು, ಇದರ ಮಧ್ಯೆ ನವೆಂಬರ್​​ 11ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ಜಾರಿ ಮಾಡಿದೆ.

ಇದೀಗ ರಾಂಪಾಲ್​ ಗರ್ಲ್​ಫ್ರೆಂಡ್​​ ಬ್ರಾಬಿಯೆಲ್​ ಡೆಮೆಟ್ರಿಯಾಡ್ಸ್​ಗೂ ಸಮನ್ಸ್ ಜಾರಿಯಾಗಿದ್ದು, ನವೆಂಬರ್​ 11ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ. ಕಳೆದ ಕೆಲ ದಿನಗಳ ಹಿಂದೆ ನಟಿ ದೀಪಿಕಾ ಪಡುಕೊಣೆ ಹಾಗೂ ಆಕೆಯ ಮ್ಯಾನೇಜರ್​ ಸೇರಿ ಅನೇಕರಿಗೆ ವಿಚಾರಣೆಗೋಸ್ಕರ ಸಮನ್ಸ್​ ಜಾರಿ ಮಾಡಿತ್ತು.

ABOUT THE AUTHOR

...view details