ಕರ್ನಾಟಕ

karnataka

ETV Bharat / sitara

ಕಚ್ಚಾ ಬಾದಾಮ್​ ಹಾಡಿಗೆ ಹೆಜ್ಜೆ ಹಾಕಿದ ಮಗಳ ವಿಡಿಯೋ ಹಂಚಿಕೊಂಡ ನಟ ಅಲ್ಲು ಅರ್ಜುನ್​ - ಅಲ್ಲು ಅರ್ಜುನ್​ ಮಗಳ ಹಾಡಿನ ವಿಡಿಯೋ ವೈರಲ್​

ಕಚ್ಚಾ ಬಾದಾಮ್​ ಹಾಡಿಗೆ ಅಲ್ಲು ಅರ್ಜುನ್ ಅವರ ಮಗಳು ಅರ್ಹಾ ಕೂಡ ಹೆಜ್ಜೆ ಹಾಕಿದ್ದು, ಆ ವಿಡಿಯೋವನ್ನು ನಟ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ, 'ಮೇರಿ ಚೋಟಿ ಬಾದಾಮ್​ ಅರ್ಹಾ' ಎಂದು ಬರೆದುಕೊಂಡಿದ್ದಾರೆ.

Kacha Badam
ಕಚ್ಚಾ ಬಾದಾಮ್

By

Published : Feb 10, 2022, 5:08 PM IST

ಹೈದರಾಬಾದ್​:ಟಾಲಿವುಡ್​ ನಟ ಅಲ್ಲು ಅರ್ಜುನ್​ ಅಭಿನಯದ ಪುಷ್ಪ ಸಿನಿಮಾದ ಶ್ರೀವಲ್ಲಿ, ಊ ಅಂಟಾವಾ, ಸಾಮಿ ಹಾಡುಗಳು ಎಲ್ಲರ ಬಾಯಲ್ಲಿ ಗುನುಗುತ್ತಿರುತ್ತಿವೆ. ಸೋಷಿಯಲ್​ ಮೀಡಿಯಾದಲ್ಲಂತೂ ಭಾರೀ ವೈರಲ್​ ಆಗಿವೆ. ಈ ಮಧ್ಯೆಯೇ 'ಕಚ್ಚಾ ಬಾದಾಮ್​' ಹಾಡು ಕೂಡ ಹೊಸ ಟ್ರೆಂಡ್ ಸೃಷ್ಟಿಸಿದೆ.

ಕಚ್ಚಾ ಬಾದಾಮ್​ ಹಾಡಿಗೆ ಅಲ್ಲು ಅರ್ಜುನ್ ಅವರ ಮಗಳು ಅರ್ಹಾ ಕೂಡ ಹೆಜ್ಜೆ ಹಾಕಿದ್ದು, ಆ ವಿಡಿಯೋವನ್ನು ನಟ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ, 'ಮೇರಿ ಚೋಟಿ ಬಾದಾಮ್​ ಅರ್ಹಾ' ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ಸಾಕಷ್ಟು ಅಭಿಮಾನಿಗಳು ಕಮೆಂಟ್​ ಮಾಡಿದ್ದರೆ, 22 ಲಕ್ಷಕ್ಕೂ ಅಧಿಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟಿ ಸಂಯಕ್ತಾ ಹೆಗಡೆ ಈ ವಿಡಿಯೋಗೆ 'ತುಂಬಾ ಮುದ್ದಾಗಿದೆ' ಎಂದು ಕಮೆಂಟ್​ ಮಾಡಿ ಹಾರ್ಟ್​ ಸಿಂಬಲ್​ ಹಾಕಿದ್ದಾರೆ. ಇದಲ್ಲದೇ, ನಟ ಅಲ್ಲು ಅರ್ಜುನ್​ ಅವರು, ತಮ್ಮ ಮಗಳು ಕುಟುಂಬದೊಂದಿಗೆ 16 ದಿನಗಳ ವಿದೇಶ ಪ್ರವಾಸ ಮುಗಿಸಿ ವಾಪಸ್​ ಆಗುತ್ತಿರುವ ಹಿನ್ನೆಲೆ ಭಾರತಕ್ಕೆ ಸ್ವಾಗತಿಸುತ್ತಿರುವ ಪೋಸ್ಟ್​ ಕೂಡ ಹಾಕಿದ್ದಾರೆ.

ನಟ ಅಲ್ಲು ಅರ್ಜುನ್ ಅವರ ಪುಷ್ಪ ಸಿನಿಮಾದ ಮೊದಲ ಭಾಗ ದೇಶಾದ್ಯಂತ ಪ್ರದರ್ಶನ ಕಂಡು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೇ, ಚಿತ್ರದಲ್ಲಿನ ಅಲ್ಲು ನಟನೆ ಮತ್ತು ನೃತ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಸಿನಿಮಾ ನೂರು ಕೋಟಿ ಕ್ಲಬ್​ಗೆ ಸೇರಿದೆ.

ಓದಿ:ಯೋಗರಾಜ್ ಭಟ್ಟರ 'ಗರಡಿ'ಯಿಂದ ಹೊರಬಂದ ರಚಿತಾ ರಾಮ್​... ಡಿಂಪಲ್​ ಕ್ವೀನ್ ಜಾಗಕ್ಕೆ ಸೋನಾಲ್​!

ABOUT THE AUTHOR

...view details