ಕರ್ನಾಟಕ

karnataka

ETV Bharat / sitara

ಆ್ಯಕ್ಷನ್ ಪ್ಯಾಕ್ 'ಮುಂಬೈ ಸಾಗಾ' ಟ್ರೇಲರ್ ಬಿಡುಗಡೆ....ಶೀಘ್ರದಲ್ಲೇ ಸಿನಿಮಾ ತೆರೆಗೆ - Mumbai Saga trailer released

ಬಾಲಿವುಡ್ ಬಹುನಿರೀಕ್ಷಿತ 'ಮುಂಬೈ ಸಾಗಾ' ಟ್ರೇಲರ್ ಬಿಡುಗಡೆಯಾಗಿದೆ. ಸಿನಿಮಾ ಮಾರ್ಚ್ 19 ರಂದು ತೆರೆಗೆ ಬರುತ್ತಿದ್ದು ಚಿತ್ರದಲ್ಲಿ ಜಾನ್ ಅಬ್ರಹಾಂ, ಇಮ್ರಾನ್ ಹಶ್ಮಿ, ಕಾಜಲ್ ಅಗರ್​​ವಾಲ್, ಜಾಕಿಶ್ರಾಫ್, ಪ್ರತೀಕ್ ಬಬ್ಬರ್, ರೋಹಿತ್ ರಾಯ್, ಅಮೊಲ್ ಗುಪ್ತಾ ಹಾಗೂ ಇನ್ನಿತರರು ನಟಿಸಿದ್ದಾರೆ.

Saga trailer out
'ಮುಂಬೈ ಸಾಗಾ' ಟ್ರೇಲರ್ ಬಿಡುಗಡೆ

By

Published : Feb 26, 2021, 4:38 PM IST

ಜಾನ್ ಅಬ್ರಹಾಂ ಹಾಗೂ ಇಮ್ರಾನ್ ಹಶ್ಮಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಆ್ಯಕ್ಷನ್ ಪ್ಯಾಕ್ಡ್ 'ಮುಂಬೈ ಸಾಗಾ' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಪೂರ್ವ ಮುಂಬೈ ಸ್ಟೈಲ್​​​ನಲ್ಲಿ ಸಿನಿಮಾ ಮಾಡಲಾಗಿದ್ದು ಟ್ರೇಲರ್ ಬಿಡುಗಡೆಯಾಗಿ 2 ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಮಂದಿ ಟ್ರೇಲರ್ ವೀಕ್ಷಿಸಿದ್ದಾರೆ. ಜಾನ್ ಅಬ್ರಹಾಂ ಹಾಗೂ ಚಿತ್ರತಂಡದ ಸದಸ್ಯರು ಟ್ರೇಲರನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಅಣ್ಣಾವ್ರ ಯೋಗ ಪವರು, ಧ್ರುವ ಪೊಗರು.. ಡಾ. ರಾಜ್‌ರ‌ ಪ್ರತಿಭಾ ಸಾಗರದೊಳಗೆ ಒಂದಿಷ್ಟು ಕದ್ದ ಆ್ಯಕ್ಷನ್‌ ಪ್ರಿನ್ಸ್‌..

'ಮುಂಬೈ ಸಾಗಾ' ಚಿತ್ರದಲ್ಲಿ, ಅನಾಥನಾಗಿ ಬೆಳೆದು ಮುಂಬೈ ಸಿಟಿಗೆ ದೊರೆಯಾಗಿ ಬದುಕಲು ಕನಸು ಕಾಣುವ ಅಮಾರ್ತ್ಯ ರಾವ್ ಎಂಬ ಪಾತ್ರದಲ್ಲಿ ಜಾನ್ ಅಬ್ರಹಾಂನಟಿಸಿದ್ದಾರೆ. ಮುಂಬೈಯನ್ನು ಶಾಂತಿಯುತ ನಗರವನ್ನಾಗಿ ಮಾಡಲು ಶ್ರಮಿಸುವ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಇಮ್ರಾನ್ ಹಶ್ಮಿ ಕಾಣಿಸಿಕೊಂಡಿದ್ದಾರೆ. 80-90ರ ದಶಕದಲ್ಲಿ ನಡೆದ ನೈಜ ಘಟನೆ ಆಧಾರಿತ ಸಿನಿಮಾ ಇದಾಗಿದ್ದು ಚಿತ್ರದಲ್ಲಿ ಕಾಜಲ್ ಅಗರ್​​ವಾಲ್, ಜಾಕಿಶ್ರಾಫ್, ಪ್ರತೀಕ್ ಬಬ್ಬರ್, ರೋಹಿತ್ ರಾಯ್, ಅಮೊಲ್ ಗುಪ್ತಾ ಹಾಗೂ ಇನ್ನಿತರರು ನಟಿಸಿದ್ದಾರೆ. ಕಾಬಿಲ್​​​​​​​​​, ಶೂಟ್​​ಔಟ್​​ ಸಿನಿಮಾಗಳನ್ನು ನಿರ್ದೇಶಿಸಿದ್ದ ಸಂಜಯ್ ಗುಪ್ತ 'ಮುಂಬೈ ಸಾಗಾ' ಚಿತ್ರವನ್ನು ನಿರ್ದೇಶಿಸಿದ್ದಾರೆ. ಭೂಷಣ್ ಕುಮಾರ್, ಕೃಷ್ಣ ಕುಮಾರ್, ಅನುರಾಧ ಗುಪ್ತಾ, ಸಂಗೀತ್ ಅಹಿರ್​​​​ ಜೊತೆ ಸೇರಿ ಚಿತ್ರವನ್ನು ನಿರ್ಮಿಸಿದ್ದಾರೆ. ಮಾರ್ಚ್ 19 ರಂದು 'ಮುಂಬೈ ಸಾಗಾ' ದೇಶಾದ್ಯಂತ ಬಿಡುಗಡೆಯಾಗುತ್ತಿದೆ.

ABOUT THE AUTHOR

...view details