ಕರ್ನಾಟಕ

karnataka

ETV Bharat / sitara

ಸುಶಾಂತ್ ಅಗಲಿಕೆಯಿಂದ ಮಗುವೊಂದನ್ನು ಕಳೆದುಕೊಂಡಂತಾಗಿದೆ...ನಿರ್ದೇಶಕ ಅಭಿಷೇಕ್ ಕಪೂರ್​​​​​​​ - ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್

ಸುಶಾಂತ್​​ ಅವರನ್ನು ಕಳೆದುಕೊಂಡಿರುವುದು ನನಗೆ ಮಗುವೊಂದನ್ನು ಕಳೆದುಕೊಂಡಂತೆ ಆಗಿದೆ ಎಂದು ನಿರ್ದೇಶಕ ಅಭಿಷೇಕ್ ಕಪೂರ್ ಬೇಸರ ವ್ಯಕ್ತಪಡಿಸಿದ್ದಾರೆ. ಅಭಿಷೇಕ್ ಕಪೂರ್ ಸುಶಾಂತ್ ಅವರನ್ನು 'ಕೈ ಪೊ ಚೆ' ಚಿತ್ರದ ಮೂಲಕ ಬಾಲಿವುಡ್​​​ಗೆ ಪರಿಚಯಿಸಿದ್ದರು.

abhishek kapoor on sushant committing suicide
ಅಭಿಷೇಕ್ ಕಪೂರ್

By

Published : Jun 20, 2020, 4:15 PM IST

ಸುಶಾಂತ್ ಸಿಂಗ್ ರಜಪೂತ್ ಅವರನ್ನು 'ಕೈ ಪೊ ಚೆ' ಚಿತ್ರದ ಮೂಲಕ ಪರಿಚಯಿಸಿದ ಬಾಲಿವುಡ್ ನಿರ್ದೇಶಕ ಅಭಿಷೇಕ್ ಕಪೂರ್​​​​​​​​​​​​​​ ಸುಶಾಂತ್ ಅವರನ್ನು ಅಮೂಲ್ಯ ರತ್ನ, ಸೌಮ್ಯ ಸ್ವಭಾವದ ಹಾಗೂ ಕಾಳಜಿಯುಳ್ಳ ವ್ಯಕ್ತಿ ಎಂದು ಹೊಗಳಿದ್ದಾರೆ.

ಜೂನ್ 14 ರಂದು ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ನಂತರ ದೇಶಾದ್ಯಂತ ಅವರ ಸಾವಿನ ವಿಚಾರವೇ ಚರ್ಚೆ ನಡೆಯುತ್ತಿದೆ. ಮಾನಸಿಕ ಆರೋಗ್ಯ, ಬಾಲಿವುಡ್​​​ನಲ್ಲಿ ಸ್ವಜನ ಪಕ್ಷಪಾತದ ವಿಚಾರಕ್ಕೆ ಸಂಬಂಧಿಸಿದಂತೆ ಗಂಭೀರ ಚರ್ಚೆಗಳು ನಡೆಯುತ್ತಿವೆ.

'ನೀನು ಈಗಾಗಲೇ ಸ್ಟಾರ್ ಡಮ್​​ ಗಳಿಸಿರುವೆ, ಇತರರಿಂದ ನೀನು ಏನನ್ನೂ ನಿರೀಕ್ಷಿಸಬೇಡ' ಎಂದು ನಾನು ಸುಶಾಂತ್​​ಗೆ ಆಗ್ಗಾಗ್ಗೆ ಹೇಳುತ್ತಿದ್ದೆ. ಆದರೂ ಆತ ಇತರರ ಮೇಲೆ ಅವಲಂಬಿತರಾಗಿದ್ದರು. ನಾನು ಆತನೊಂದಿಗೆ ಸುಮಾರು ಒಂದೂವರೆ ವರ್ಷಗಳ ಕಾಲ ಮಾತು ಬಿಟ್ಟಿದ್ದೆ. ಸುಶಾಂತ್ ಆ ಸಮಯದಲ್ಲಿ ಸುಮಾರು 50 ಬಾರಿ ತಮ್ಮ ಮೊಬೈಲ್ ನಂಬರ್ ಬದಲಿಸಿದ್ದರು. 'ಕೇದಾರ್​ನಾಥ್' ಚಿತ್ರೀಕರಣದ ವೇಳೆ ಮಾಧ್ಯಮಗಳು ಸುಶಾಂತನ್ನು ನಿರ್ಲಕ್ಷಿಸಿ ಸಾರಾ ಅಲಿಖಾನ್ ಅವರನ್ನು ಸಂಪೂರ್ಣವಾಗಿ ಕೇಂದ್ರೀಕರಿಸಿದ್ದವು. ಆಗಲೂ ಸುಶಾಂತ್ ಬಹಳ ಬೇಸರದಲ್ಲಿದ್ದರು. ಈ ವೇಳೆ ನಾನು ಅವರಿಗೆ ಒಂದು ಮೆಸೇಜ್ ಮಾಡಿದ್ದೆ'.

'ಪ್ರೀತಿಯ ಸುಶಾಂತ್ ನಾನು ನಿನಗೆ ಕಾಲ್ ಮಾಡುತ್ತಿದ್ದೇನೆ ಆದರೆ ರೀಚ್ ಆಗುತ್ತಿಲ್ಲ. ನೀವು ಬ್ಯುಸಿ ಇದ್ದೀರ ಅಥವಾ ನನ್ನ ಮೇಲೆ ಕೋಪ ಮಾಡಿಕೊಂಡಿದ್ದೀರ ಏನು ಎಂಬುದು ತಿಳಿಯುತ್ತಿಲ್ಲ. ನಾವಿಬ್ಬರೂ ಜೊತೆ ಸೇರಿ ಮತ್ತೆ ಒಳ್ಳೆ ಸಿನಿಮಾ ಮಾಡಿದ್ದೇವೆ. ಆ ಸಂತೋಷವನ್ನು ಒಟ್ಟಿಗೆ ಆಚರಿಸಬೇಕಿದೆ. ಈಗ ಸೆಲಬ್ರೇಟ್ ಮಾಡದೆ ಯಾವಾಗಲೋ ಮಾಡಿದರೆ ಏನು ಪ್ರಯೋಜನ. ನಿನ್ನ ಕರೆಗಾಗಿ ಕಾಯುತ್ತಿದ್ದೇನೆ ಎಂದು ಸಂದೇಶ ಕಳಿಸಿದೆ. ಆದರೆ ಆತನಿಂದ ಏನೂ ರಿಪ್ಲೇ ಬರಲಿಲ್ಲ. ಆತನ ಬರ್ತಡೇಗೆ ವಿಶ್ ಮಾಡಿ ಮಾಡಿದ ಮೆಸೇಜ್​​​​ಗೆ ಕೂಡಾ ಪ್ರತಿಕ್ರಿಯೆ ಇಲ್ಲ'.

'ಕೆಲವರಿಗೆ ನಾವು ಏನೇ ಸಲಹೆ ನೀಡಿದರೂ ಅದು ಇಷ್ಟವಾಗದೆ ಇರಬಹುದು. ನಾನೇ ಸುಶಾಂತ್​​ಗೆ ಕರೆ ಮಾಡಬೇಕೆಂದು ಎಷ್ಟು ಬಾರಿ ಅಂದುಕೊಂಡಿದ್ದುಂಟು. ಆದರೆ ಆತ ನನ್ನ ಕಾಲ್ ರಿಸೀವ್ ಮಾಡದೆ ಇರಬಹುದು. ಒಂದು ವೇಳೆ ಆತನೇ ಕಾಲ್ ಮಾಡಿದರೆ ಆಗ ಮಾತನಾಡಿದರಾಯಿತು ಎಂದುಕೊಂಡು ಸುಮ್ಮನಾದೆ. ಆದರೆ ಕೊನೆಗೂ ಆತ ನನಗೆ ಕರೆ ಮಾಡಲೇ ಇಲ್ಲ' ಎಂದು ಅಭಿಷೇಕ್ ಕಪೂರ್ ಬೇಸರ ವ್ಯಕ್ತಪಡಿಸಿದ್ದಾರೆ.

'ಸುಶಾಂತ್ ಬಹಳ ದುರ್ಬಲ ವ್ಯಕ್ತಿಯಾಗಿದ್ದರು, ಆದರೂ ಆತ ಬಹಳ ಬುದ್ಧಿವಂತ. ಸುಶಾಂತ್​​​​​​​​​​​​ನನ್ನು ಕಳೆದುಕೊಂಡಿರುವುದು ನನಗೆ ಮಗುವೊಂದನ್ನು ಕಳೆದುಕೊಂಡಂತಾಗಿದೆ' ಎಂದು ಅಭಿಷೇಕ್ ಸಿಂಗ್ ಕಂಬನಿ ಮಿಡಿದಿದ್ದಾರೆ.

ABOUT THE AUTHOR

...view details