ಹೈದರಾಬಾದ್: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಚಲನಚಿತ್ರ ನಿರ್ಮಾಪಕ ದಿನೇಶ್ ವಿಜನ್ ಬಂಡವಾಳ ಹೂಡುತ್ತಿರುವ ಮುಂಬರುವ ಚಿತ್ರದಲ್ಲಿ ರಾಜಕಾರಣಿಯ ಪಾತ್ರವನ್ನು ನಿರ್ವಹಿಸಲು ಸಜ್ಜಾಗಿದ್ದಾರೆ.
ದಸ್ವಿಯಲ್ಲಿ ರಾಜಕಾರಣಿಯಾಗಲಿದ್ದಾರಂತೆ ಅಭಿಷೇಕ್ ಬಚ್ಚನ್!
ಇತ್ತೀಚೆಗೆ ಸುಜಯ್ ಘೋಷ್ ಅವರ ಚಿತ್ರ ಬಾಬ್ ಬಿಸ್ವಾಸ್ ಚಿತ್ರದ ಚಿತ್ರೀಕರಣ ಮುಗಿಸಿದ ಅಭಿಷೇಕ್ ಬಚ್ಚನ್ ಈಗ ದಿನೇಶ್ ವಿಜನ್ ನಿರ್ಮಾಣದ ದಸ್ವಿ ಫೆಬ್ರವರಿ 22 ರಿಂದ ಚಿತ್ರೀಕರಣಕ್ಕೆ ಸಿದ್ಧರಾಗಿದ್ದಾರೆ.
ಅಂದ ಹಾಗೇ ಈ ಸಿನಿಮಾ ಹೆಸರು ದಸ್ವಿ, ಚಿತ್ರದಲ್ಲಿ ಜೂನಿಯರ್ ಬಚ್ಚನ್ 10ನೇ ವಿಫಲ ಮುಖ್ಯಮಂತ್ರಿಯಾಗಿ ನಟಿಸಲಿದ್ದಾರಂತೆ. ವರದಿಗಳ ಪ್ರಕಾರ, ಅಭಿಷೇಕ್ ಆಗ್ರಾದಲ್ಲಿ ದಸ್ವಿ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ. ಚಿತ್ರಕ್ಕೆ ತುಷಾರ್ ಜಲೋಟಾ ಆ್ಯಕ್ಷನ್ ಕಟ್ ಹೇಳಲಿದ್ದು, ಸಮಾಜದಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಸಂದೇಶವನ್ನು ನೀಡುವ ಕಥೆ ಇದೆಯಂತೆ.
ಭ್ರಷ್ಟ ರಾಜಕಾರಣಿಯೊಬ್ಬರ ಪಾತ್ರವನ್ನು ಅಭಿಷೇಕ್ ನಿರ್ವಹಿಸಲಿದ್ದಾರೆ ಎಂಬ ಮಾತು ಬಾಲಿವುಡ್ನಲ್ಲಿ ಹರಿದಾಡುತ್ತಿದೆ. ಚಿತ್ರದಲ್ಲಿ ಯಾಮಿ ಗೌತಮ್ ಮತ್ತು ನಿಮ್ರತ್ ಕೌರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಹರ್ಯಾನ್ವಿ ಹುಡುಗಿಯ ಪಾತ್ರಕ್ಕಾಗಿ ಯಾಮಿ ಭರ್ಜರಿ ತಯಾರಿ ನಡೆಸಿದ್ದಾರಂತೆ.