ಕರ್ನಾಟಕ

karnataka

ETV Bharat / sitara

ಅಜ್ಜ ಹರಿವಂಶ್​ ರಾಯ್ ಅವರ  ಜನ್ಮದಿನದ ನೆನಪಲ್ಲಿ ಮೊಮ್ಮಗ ಅಭಿಷೇಕ್ ಬಚ್ಚನ್ - ನಟ ನೀತು ಕಪೂರ್

ಅಜ್ಜನ ಜನ್ಮದಿನದ ನೆನಪಿನಲ್ಲಿ ನಟ ಅಭಿಷೇಕ್​ ಬಚ್ಚನ್ ತಮ್ಮ ಭಾವನೆಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

mumbai
ಅಜ್ಜನ ನೆನಪಿನಲ್ಲಿ ಅಭಿಷೇಕ್ ಬಚ್ಚನ್

By

Published : Nov 28, 2019, 10:11 AM IST

ಮುಂಬೈ:ನಟ ಅಭಿಷೇಕ್​ ಬಚ್ಚನ್ ತಮ್ಮ ಅಜ್ಜ ಹರಿವಂಶ್​ ರಾಯ್ ಅವರ 112 ನೇ ಜನ್ಮದಿನವನ್ನು ನೆನಪಿಸಿಕೊಂಡಿದ್ದಾರೆ. ಅಜ್ಜನೊಂದಿಗಿನ ನೆನಪಿನಂಗಳದ ಚಿತ್ರವೊಂದನ್ನು ಅಭಿಷೇಕ್ ಹಂಚಿಕೊಂಡಿದ್ದಾರೆ. ತಮ್ಮ ಇನ್​ಸ್ಟಾಗ್ರಾಂನಲ್ಲಿ ಫೋಟೊವೊಂದನ್ನು ಹಂಚಿಕೊಂಡಿರುವ ಅವರು, ಇಂದು ನನ್ನಜ್ಜನಿದ್ದರೆ 112ನೇ ಜನ್ಮ ದಿನವಾಗುತ್ತಿತ್ತು. ಆದರೆ, ಅದು ತಪ್ಪಿ ಹೋಗಿದೆ ಎಂದು ಬರೆದುಕೊಂಡಿದ್ದಾರೆ.

ಹರಿವಂಶ್​ ರಾಯ್ ಅವರ ಸಾಹಿತ್ಯ ರಚನೆಯಲ್ಲಿ ಮಧುಶಾಲಾದ ಸಾಹಿತ್ಯವನ್ನು ಹೆಚ್ಚಾಗಿ ಸ್ಮರಿಸಲಾಗುತ್ತದೆ. ಅಕುಲ್ ಅಂಟಾರ್, ಏಕಾಂತ್ ಸಂಗೀತ, ಸೂತ್ ಕಿ ಮಾಲಾ, ಆರತಿ ಅಂಗಾರ್ ಅಂಗಾರೆ ಮತ್ತು ಬಹುತ್ ದಿನ್ ಬೀಟೆ ಕವನಗಳ ಸಾಹಿತ್ಯ ಅತ್ಯಂತ ಹೆಸರು ವಾಸಿಯಾಗಿವೆ.

ಅಭಿಷೇಕ್​ ಅವರ ಅಜ್ಜನ ನೆನಪಿಗೆ ಹಿರಿಯ ನಟ ನೀತು ಕಪೂರ್ ಕೂಡ ಕಮೆಂಟ್ ವಿಭಾಗದಲ್ಲಿ ಹರಿವಂಶ್​ ರಾಯ್ ಅವರಿಗೆ ಗೌರವ ಸಲ್ಲಿಸಿದ್ದಾರೆ.

ABOUT THE AUTHOR

...view details