ಹೈದರಾಬಾದ್ : ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅಭಿಯನಯದ 'ದಾಸ್ವಿ' ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ. ದಿನೇಶ್ ವಿಜನ್ ಮತ್ತು ಜಿಯೋ ಸ್ಟುಡಿಯೋ ನಿರ್ಮಾಣದಲ್ಲಿ ತುಷಾರ್ ಜಲೋಟ ನಿರ್ದೇಶನ ಮಾಡಲಿದ್ದಾರೆ.
ಅಭಿಷೇಕ್ 'ದಸ್ವಿ' ಚಿತ್ರೀಕರಣ ಪ್ರಾರಂಭ.. ಫಸ್ಟ್ ಲುಕ್ ಫೋಟೋ ಶೇರ್ ಮಾಡಿದ ಜ್ಯೂನಿಯರ್ ಬಚ್ಚನ್.. - abhishke yami film
ಭ್ರಷ್ಟ ರಾಜಕಾರಣಿಯನ್ನು ಪರದೆ ಮೇಲೆ ತೋರಿಸಲು ಅಭಿಷೇಕ್ ಮುಂದಾಗಿದ್ದಾರೆ. ಚಿತ್ರದಲ್ಲಿ ಯಾಮಿ ಗೌತಮ್ ಮತ್ತು ನಿಮ್ರತ್ ಕೌರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ..
ದಾಸ್ವಿ
ಚಿತ್ರೀಕರಣ ಕುರಿತು ಮಾಹಿತಿ ನೀಡಿರುವ ಅಭಿಷೇಕ್ ಬಚ್ಚನ್ 'ದಾಸ್ವಿ' ಚಿತ್ರದಲ್ಲಿನ ತಮ್ಮ ಲುಕ್‌ನ ಹಂಚಿಕೊಂಡಿದ್ದಾರೆ. "ಮೀಟ್ ಗಂಗಾ ರಾಮ್ ಚೌಧರಿ # ದಾಸ್ವಿ ಶೂಟ್ ಬಿಗಿನ್ಸ್..." ಎಂದು ಟ್ಟೀಟ್ ಮಾಡಿದ್ದಾರೆ.
ಚಿತ್ರದಲ್ಲಿ 10ನೇ ತರಗತಿ ಫೇಲ್ ಆದ ವ್ಯಕ್ತಿ ಮುಖ್ಯಮಂತ್ರಿಯಾಗುತ್ತಾನೆ. ಇಂದಿನ ಸಮಾಜದಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಸಂದೇಶ ಹೊಂದಿರುವ ರಾಜಕೀಯ ಹಾಸ್ಯ ಚಿತ್ರ 'ದಸ್ವಿ'. ಭ್ರಷ್ಟ ರಾಜಕಾರಣಿಯನ್ನು ಪರದೆ ಮೇಲೆ ತೋರಿಸಲು ಅಭಿಷೇಕ್ ಮುಂದಾಗಿದ್ದಾರೆ. ಚಿತ್ರದಲ್ಲಿ ಯಾಮಿ ಗೌತಮ್ ಮತ್ತು ನಿಮ್ರತ್ ಕೌರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.