ಹೈದರಾಬಾದ್: ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ತಮ್ಮ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ಸದ್ಯ ಟ್ರೋಲ್ಗೆ ಗುರಿಯಾಗಿದ್ದಾರೆ. ಗೆಳೆಯ ನೂಪುರ್ ಶಿಖಾರೆ ಜೊತೆ ತೆರಳಿದ್ದ ಸಂದರ್ಭದ ಫೋಟೋವನ್ನು ಶೇರ್ ಮಾಡಿದ್ದಾರೆ.
ಟ್ರೋಲ್ಗೆ ಆಹಾರವಾದ ಅಮೀರ್ ಖಾನ್ ಪುತ್ರಿ ಇರಾ ಖಾನ್ ಫೋಟೋ! - ಅಮೀರ್ ಖಾನ್ ಪುತ್ರಿ ಇರಾ ಖಾನ್ ಸುದ್ದಿ
ಅಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ತಮ್ಮ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋದಲ್ಲಿ ಸಿಗರೇಟ್ ಪ್ಯಾಕೆಟ್ ಕಂಡು ಬಂದಿದ್ದು, ಇದನ್ನು ನೆಟಿಜನ್ಸ್ ಟ್ರೋಲ್ ಮಾಡಿದ್ದಾರೆ.
ಇರಾ ಖಾನ್ ಫೋಟೋ
ಫೋಟೋದಲ್ಲಿ ಇರಾ ಕುಳಿತಿದ್ದು, ಅವರ ಪಕ್ಕದಲ್ಲಿ ಸಿಗರೇಟ್ ಪ್ಯಾಕೆಟ್ ಕಂಡು ಬಂದಿದೆ. ಇದಕ್ಕೆ ನೆಟ್ಟಿಗರು ಪ್ರಶ್ನೆ ಮಾಡಿದ್ದು, "ಯಾವ ಸಿಗರೇಟ್ ಬಳಸುತ್ತೀರಾ?" ಎಂದು ಕೇಳಿದ್ದಾರೆ. ಇನ್ನೊಬ್ಬರು "ಸೆಲೆಬ್ರಿಟಿಗಳ ಮಕ್ಕಳು ಏಕೆ ಸರಿಯಾದ ಬಟ್ಟೆ ಧರಿಸುವುದಿಲ್ಲ" ಎಂದು ಪ್ರಶ್ನಿಸಿದ್ದಾರೆ.
ಕೆಲ ದಿನಗಳ ಹಿಂದೆ ಇರಾ ಖಾನ್ ಅಗಾಟ್ಸು ಫೌಂಡೇಶನ್ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದರು. ಮಾನಸಿಕ ಆರೋಗ್ಯ ಬೆಂಬಲ, ದೇಹದ ಜಾಗೃತಿ ಕಾರ್ಯಕ್ರಮಗಳನ್ನು ಮತ್ತು ಸ್ವಯಂ ವಾಸ್ತವೀಕರಣವನ್ನು ಉತ್ತೇಜಿಸುವ ತರಬೇತಿಯನ್ನು ನೀಡಲು ಈ ಫೌಂಡೇಶನ್ ನಡೆಸುವುದಾಗಿ ತಿಳಿಸಿದ್ದರು.