ಒಂದು ರಾತ್ರಿ ಕಳೆದು ಬೆಳಕು ಹರಿಯೋವಷ್ಟರಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಯಾರು ಬೇಕಾದರೂ ಸೆಲಬ್ರಿಟಿಗಳಾಗಬಹುದು. ಅದರಲ್ಲೂ ತಾರೆಯರು ಹಾಗೂ ಅವರ ಮಕ್ಕಳಂತೂ ಸೋಷಿಯಲ್ ಮೀಡಿಯಾಗಳಲ್ಲಿ ಎವರ್ಗ್ರೀನ್ ಸೆಲಬ್ರಿಟಿಗಳಂತಾಗಿ ಬಿಡುತ್ತಾರೆ.
ಸದ್ಯಕ್ಕೆ ಬಾಲಿವುಡ್ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಮಗಳು ಇರಾ ಖಾನ್ ಟ್ರೆಂಡಿಂಗ್ನಲ್ಲಿದ್ದಾರೆ. ಇನ್ನೂ ಬಾಲಿವುಡ್ ಅಂಗಳಕ್ಕೆ ಕಾಲಿಡದ ಈ 21ರ ಚೆಲುವೆ, ಈಗಾಗಲೇ ಎಲ್ಲರ ಅಟೆನ್ಷನ್ ಗ್ರ್ಯಾಬ್ ಮಾಡ್ತಿದ್ದಾರೆ. ತಮ್ಮಇನ್ಸ್ಟಾಗ್ರಾಂನಲ್ಲಿ ಕಲರ್ಫುಲ್ ಫೋಟೋಗಳನ್ನು ಹರಿಬಿಟ್ಟು ಅಭಿಮಾನಿಗಳನ್ನು ಸಂಪಾದಿಸುತ್ತಿದ್ದಾರೆ.
ಆಮೀರ್ ಖಾನ್ಗೆ ತನ್ನ ಮಗಳನ್ನು ಬಣ್ಣದ ಲೋಕಕ್ಕೆ ಕರೆತರುವ ಇರಾದೆ ಇದ್ದಂತೆ ಕಾಣಿಸುತ್ತಿಲ್ಲ. ಆದರೆ, ಇರಾ ಮಾತ್ರ ಅಪ್ಪನಂತೆ ಮುಖಕ್ಕೆ ಬಣ್ಣ ಹಚ್ಚಿಕೊಂಡು ರಜತ ಪರದೆ ಮೇಲೆ ಮಿಂಚಲು ಹವಣಿಸುತ್ತಿದ್ದಾರೆ. ಇದಕ್ಕಾಗಿ ಸೋಷಿಯಲ್ ಮೀಡಿಯಾವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ.
ಇತ್ತೀಚಿಗಷ್ಟೆ ತನ್ನ ಬಾಯ್ಫ್ರೆಂಡ್ ಮಿಶಾಲ್ ಕಿರ್ಪಾಲಾನಿ ಜತೆಗಿನ ಫೋಟೋಗಳನ್ನು ಹರಿಬಿಟ್ಟು ಸುದ್ದಿಯಾಗಿದ್ದಇರಾ, ಈಗ ಮತ್ತೆರಡು ಲುಕ್ಗಳನ್ನು ಹೊರಚೆಲ್ಲಿದ್ದಾರೆ. ಒಂದರಲ್ಲಿ ತಮ್ಮ ಕೈ ಮೇಲಿನ ಟ್ಯಾಟೋ ಪ್ರದರ್ಶನ ಮಾಡಿದ್ದಾರೆ. ಮತ್ತೊಂದರಲ್ಲಿ ತಮ್ಮ ಹೊಕ್ಕಳಿನಲ್ಲಿರುವ ರಿಂಗ್ ಅಭಿಮಾನಿಗಳಿಗೆ ತೋರಿಸಿದ್ದಾರೆ.