ಮುಂಬೈ :ಬಾಲಿವುಡ್ ಸೂಪರ್‌ಸ್ಟಾರ್ ಅಮೀರ್ ಖಾನ್ ಮತ್ತು ನಿರ್ಮಾಪಕಿ ಕಿರಣ್ ರಾವ್ ತಮ್ಮ ದಾಂಪತ್ಯ ಜೀವನಕ್ಕೆ ಪೂರ್ಣ ವಿರಾಮ ಹೇಳಿದ್ದರೂ ಕೂಡ ಬಹಳ ಆತ್ಮೀಯರಾಗಿಯೇ ಇದ್ದಾರೆ. ನಿನ್ನೆ ಮುಂಬೈನ ರೆಸ್ಟೋರೆಂಟ್ನಿಂದ ಮಗ ಆಜಾದ್ ರಾವ್ ಖಾನ್ ಜೊತೆ ಹೊರ ಬರುತ್ತಿದ್ದ ವಿಚ್ಛೇದಿತ ದಂಪತಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ.
ಕಳೆದ ತಿಂಗಳೂ ಕೂಡ ಲಡಾಖ್ನಲ್ಲಿ 'ಲಾಲ್ ಸಿಂಗ್ ಚಡ್ಡಾ' ಸಿನಿಮಾ ಚಿತ್ರೀಕರಣ ಮುಗಿಸಿ ಹಿಂದಿರುಗಿದ್ದ ಅಮೀರ್ ಖಾನ್ ಮತ್ತು ಮತ್ತು ಪುತ್ರ ಆಜಾದ್ನನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಕಿರಣ್ ಬರಮಾಡಿಕೊಂಡಿದ್ದರು. ಇಬ್ಬರೂ ಕೂಡ 'ಲಾಲ್ ಸಿಂಗ್ ಚಡ್ಡಾ' ಸೇರಿ ಅನೇಕ ಸಿನಿಮಾ ಪ್ರಾಜೆಕ್ಟ್ಗಳಲ್ಲಿ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ.