ಕರ್ನಾಟಕ

karnataka

ETV Bharat / sitara

ಲಾಲ್ ಸಿಂಗ್ ಚಡ್ಡಾ ಶೂಟಿಂಗ್ ಶುರು.. ಟರ್ಕಿಯಲ್ಲಿ ಅಮಿರ್ ಖಾನ್ - ಕೊರೊನಾ

ನಾಲ್ಕು ತಿಂಗಳಿನಿಂದ ಸ್ಥಗಿತಗೊಂಡಿದ್ದ ಸಿನಿಮಾ ಚಿತ್ರೀಕರಣ ಇದೀಗ ಶುರುವಾಗಿದೆ. ಅಮಿರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಚಿತ್ರ ತಂಡ ಈಗಾಗಲೇ ಟರ್ಕಿಗೆ ಪ್ರಯಾಣ ಬೆಳೆಸಿದೆ..

ಟರ್ಕಿಯಲ್ಲಿ ಅಮಿರ್ ಖಾನ್
ಟರ್ಕಿಯಲ್ಲಿ ಅಮಿರ್ ಖಾನ್

By

Published : Aug 9, 2020, 7:38 PM IST

Updated : Aug 9, 2020, 9:36 PM IST

ಮುಂಬೈ :ಕೊರೊನಾದಿಂದ ಸ್ಥಗಿತಗೊಂಡಿದ್ದ ಸಿನಿಮಾಗಳ ಚಿತ್ರೀಕರಣ ಇದೀಗ ಒಂದೊಂದಾಗಿ ಆರಂಭವಾಗುತ್ತಿವೆ. ಹಾಗಾಗಿ ನಟ ಅಮಿರ್ ಖಾನ್ ಕೂಡ ಶೂಟಿಂಗ್​ಗಾಗಿ ಟರ್ಕಿಗೆ ತೆರಳಿದ್ದಾರೆ.

ಟರ್ಕಿಯಲ್ಲಿ ಅಮಿರ್ ಖಾನ್

ಬಹು ನಿರೀಕ್ಷಿತ ಲಾಲ್ ಸಿಂಗ್ ಚಡ್ಡಾ ಚಿತ್ರದ ಶೂಟಿಂಗ್​ಗಾಗಿ ಅಮಿರ್ ಖಾನ್ ಟರ್ಕಿಗೆ ತೆರಳಿದ್ದಾರೆ. ಕೋವಿಡ್ ನಂತರ ಇದೇ ಮೊದಲ ಬಾರಿಗೆ ಶೂಟಿಂಗ್​ಗೆ ರೆಡಿಯಾಗಿರುವ ಅಮಿರ್ ಖಾನ್ ಅವರು ಟರ್ಕಿಗೆ ತೆರಳಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಟರ್ಕಿಯಲ್ಲಿ ಅಮಿರ್ ಖಾನ್

ಕೋವಿಡ್​ನಿಂದಾಗಿ ಈ ಮೊದಲು ಚಿತ್ರದ ದೆಹಲಿ ಶೆಡ್ಯೂಲ್​ ಶೂಟಿಂಗ್ ಮುಂದೂಡಲಾಗಿತ್ತು. ಈ ಸಲ ಕ್ರಿಸ್ತ್​ಮಸ್ ಹಬ್ಬಕ್ಕೆ ಚಿತ್ರವನ್ನು ರಿಲೀಸ್ ಮಾಡಲು ಈ ಮೊದಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಕೊರೊನಾದಿಂದ ನಾಲ್ಕು ತಿಂಗಳ ಶೂಟಿಂಗ್ ಸ್ಥಗಿತಗೊಂಡಿದ್ದರಿಂದ ರಿಲೀಸ್ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.

ಟರ್ಕಿಯಲ್ಲಿ ಅಮಿರ್ ಖಾನ್

ಚಿತ್ರವನ್ನು ಅದ್ವೈತ್ ನಿರ್ದೇಶಿಸುತ್ತಿದ್ದು, ನಟಿ ಕರೀನಾ ಕಪೂರ್ ಖಾನ್ ಹಾಗೂ ಮೊನಾ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Last Updated : Aug 9, 2020, 9:36 PM IST

ABOUT THE AUTHOR

...view details