ಕರ್ನಾಟಕ

karnataka

ETV Bharat / sitara

ಬಾಲಿವುಡ್​​ ಬಿಗ್​​ ಬಜೆಟ್​ ಸಿನಿಮಾ ಕಥೆ ಬರೆಯಲು ಸ್ಟಾರ್​ ನಟನಿಂದ ವಿಜಯೇಂದ್ರ ಪ್ರಸಾದ್​​​ಗೆ ಆಹ್ವಾನ...! - Vijayendra Prasad is Rajamouli father

ಬಾಲಿವುಡ್ ನಟ ಆಮೀರ್ ಖಾನ್ ಮಹಾಭಾರತ ಚಿತ್ರ ಮಾಡಲು ಪ್ಲ್ಯಾನ್ ಮಾಡುತ್ತಿದ್ದು ಈ ಸಿನಿಮಾಗೆ ಕಥೆ ಬರೆಯಲು ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್​​​ಗೆ ಆಹ್ವಾನ ನೀಡಿದ್ದಾರೆ. ಆದರೆ ಆಮಿರ್ ಖಾನ್ ಆಹ್ವಾನವನ್ನು ವಿಜಯೇಂದ್ರ ಪ್ರಸಾದ್​ ಇನ್ನೂ ಒಪ್ಪಿಕೊಂಡಿಲ್ಲ ಎನ್ನಲಾಗಿದೆ.

Aamir khan invited Vijayendra Prasad
ವಿಜಯೇಂದ್ರ ಪ್ರಸಾದ್

By

Published : Jun 15, 2020, 12:11 PM IST

ಸ್ಟಾರ್ ನಿರ್ದೇಶಕನಾಗಿ ಹೆಸರು ಮಾಡಿರುವ ಎಸ್​​.ಎಸ್. ರಾಜಮೌಳಿ ಚಿತ್ರಗಳಲ್ಲಿ ಏನಾದರೊಂದು ವಿಶೇಷತೆ ಇದ್ದೇ ಇರುತ್ತದೆ. ಆದರೆ ರಾಜಮೌಳಿ ಅವರಿಗೆ ಈ ಹೆಸರು ಬರಲು ಕಾರಣ ಅವರ ತಂದೆ ವಿಜಯೇಂದ್ರ ಪ್ರಸಾದ್. ಮನೆಯೇ ಮೊದಲ ಪಾಠಶಾಲೆ ಎನ್ನುವಂತೆ ರಾಜಮೌಳಿ, ಬಾಲ್ಯದಿಂದಲೂ ಸಿನಿಮಾ ವಿಚಾರದಲ್ಲಿ ತಂದೆ ಬಳಿ ಪಳಗಿದವರು.

ಆಮೀರ್ ಖಾನ್

ಕೆ.ವಿ. ವಿಜಯೇಂದ್ರ ಪ್ರಸಾದ್ ಅವರು ತೆಲುಗು, ಹಿಂದಿ, ಕನ್ನಡ ಸಿನಿಮಾಗಳಲ್ಲಿ ನಿರ್ದೇಶಕ ಹಾಗೂ ಬರಹಗಾರನಾಗಿ ಹೆಸರು ಮಾಡಿದವರು. ಬಾಹುಬಲಿ, ಭಜರಂಗಿ ಭಾಯ್​ಜಾನ್, ತಲೈವಿ, ಮಣಿಕರ್ಣಿಕಾ, ಮಗಧೀರ, ವಿಕ್ರಮಾರ್ಕುಡು, ಸಿಂಹಾದ್ರಿ, ಪಾಂಡುರಂಗ ವಿಠ್ಠಲ, ಕುರುಬನ ರಾಣಿ ಸೇರಿ ಅನೇಕ ಸಿನಿಮಾಗಳಿಗೆ ಕಥೆ, ಚಿತ್ರಕಥೆ ಬರೆದಿದ್ದರೆ ಶ್ರೀವಳ್ಳಿ, ರಾಜಣ್ಣ, ಶ್ರೀಕೃಷ್ಣ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ತಂದೆ-ಮಗ ಇಬ್ಬರೂ ಚಿತ್ರರಂಗದಲ್ಲಿ ಬಹಳ ಬೇಡಿಕೆ ಇರುವವರು. ರಾಜಮೌಳಿ ಸದ್ಯಕ್ಕೆ ನಿರ್ದೇಶಿಸುತ್ತಿರುವ ಆರ್​ಆರ್​​ಆರ್ ಚಿತ್ರಕ್ಕೆ ಕೂಡಾ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದಾರೆ.

ಇದೀಗ ಬಾಲಿವುಡ್​​​​​​​ನ ಸ್ಟಾರ್ ನಟನಿಂದ ವಿಜಯೇಂದ್ರ ಪ್ರಸಾದ್ ಅವರಿಗೆ ಬುಲಾವ್ ಬಂದಿದೆ. ಖ್ಯಾತ ನಟ ಆಮೀರ್ ಖಾನ್ ವಿಜಯೇಂದ್ರ ಪ್ರಸಾದ್ ಅವರಿಗೆ ಕರೆ ಮಾಡಿ 'ಮಹಾಭಾರತ' ಸಿನಿಮಾ ಮಾಡಲು ಚಿತ್ರಕಥೆ ಬರೆದುಕೊಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಆಮೀರ್ ಖಾನ್ ಅವರ ಆಹ್ವಾನಕ್ಕೆ ವಿಜಯೇಂದ್ರ ಪ್ರಸಾದ್ ಇನ್ನೂ ಒಪ್ಪಿಗೆ ನೀಡಿಲ್ಲ. ಏಕೆಂದರೆ ರಾಜಮೌಳಿ ಕೂಡಾ ಮಹಾಭಾರತ ಕುರಿತ ಸಿನಿಮಾ ಮಾಡಲಿದ್ದು ವಿಜಯೇಂದ್ರ ಪ್ರಸಾದ್ ಅವರ ಮೊದಲ ಆದ್ಯತೆ ಪುತ್ರನ ಸಿನಿಮಾಗಳಿಗೆ ಇದೆ.

ವಿಜಯೇಂದ್ರ ಪ್ರಸಾದ್

ಆಮೀರ್ ಖಾನ್ ಮಹಾಭಾರತ ಸಿನಿಮಾದ ಕಥೆ, ಚಿತ್ರಕಥೆ ಎಲ್ಲವನ್ನೂ ಸಿದ್ಧಪಡಿಸಿಕೊಂಡ ನಂತರ ಸಿನಿಮಾ ಸೆಟ್ಟೇರುವ ದಿನಾಂಕವನ್ನು ಪ್ರಕಟಿಸಲಿದ್ದಾರೆ. ಒಂದು ವೇಳೆ ಆಮೀರ್ ಖಾನ್ ನಿರ್ಮಾಣ ಹಾಗೂ ನಟನೆ ಬಗ್ಗೆ ಗಮನ ನೀಡಿ ರಾಜಮೌಳಿ ಅವರನ್ನು ನಿರ್ದೇಶನಕ್ಕೆ ಆಹ್ವಾನ ನೀಡಿದರೆ ವಿಜಯೇಂದ್ರ ಪ್ರಸಾದ್ ಇದಕ್ಕೆ ಒಪ್ಪಿಗೆ ನೀಡಬಹುದು ಎನ್ನಲಾಗುತ್ತಿದೆ. ಆದರೆ ರಾಜಮೌಳಿ ಯಾವ ನಟರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮಹಾಭಾರತ ಸಿನಿಮಾ ಮಾಡಬೇಕೆಂದಿದ್ದಾರೋ ಗೊತ್ತಿಲ್ಲ.

ABOUT THE AUTHOR

...view details