ಬಾಲಿವುಡ್ ನಟಿ, ರಾಜಕಾರಣಿ ಉರ್ಮಿಳಾ ಮಾತೋಂಡ್ಕರ್ ವಿರುದ್ಧ ಅಶ್ಲೀಲ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನ ಮೇಲೆ ಕೇಸ್ ಹಾಕಲಾಗಿದೆ.
ನಟಿ,ರಾಜಕಾರಣಿ ಉರ್ಮಿಳಾ ವಿರುದ್ಧ ಅಶ್ಲೀಲ ಪೋಸ್ಟ್! ಪ್ರಕರಣ ದಾಖಲು - ಅಶ್ಲೀಲ ಪೋಸ್ಟ್
ಬಾಲಿವುಡ್ ನಟಿ, ರಾಜಕಾರಣಿ ಉರ್ಮಿಳಾ ಮಾತೋಂಡ್ಕರ್ ವಿರುದ್ಧ ಅಶ್ಲೀಲ ಪೋಸ್ಟ್ ಮಾಡಿದ ಹಿನ್ನೆಲೆ ವ್ಯಕ್ತಿಯೋರ್ವನ ಮೇಲೆ ಪ್ರಕರಣ ದಾಖಲಾಗಿದೆ.
57 ವರ್ಷ ವಯಸ್ಸಿನ, ಪುಣೆ ಮೂಲದ ಧನಂಜಯ್ ಕುಡ್ತಾರ್ಕರ್, ಉರ್ಮಿಳಾ ಅವರನ್ನು ಗುರಿಯಾಗಿಸಿಕೊಂಡು ತನ್ನ ಸೋಷಿಯಲ್ ಮೀಡಿಯಾ ಅಕೌಂಟ್ನಲ್ಲಿ ಅಸಂಬದ್ಧ ಪೋಸ್ಟ್ ಮಾಡಿದ್ದ. ಜತೆಗೆ ಅಶ್ಲೀಲವಾಗಿ ಟೀಕೆ ಮಾಡಿದ್ದ. ಈ ಬಗ್ಗೆ ಮುಂಬೈನ ವಿಶ್ರಂಬರ್ಗ್ ಪೊಲೀಸರು 354(A)1(4) ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಆದರೆ, ಇದುವರೆಗೆ ಆತನ ಬಂಧನವಾಗಿಲ್ಲ ಎಂದು ತಿಳಿದು ಬಂದಿದೆ.
ಮೊನ್ನೆಯಷ್ಟೆ ಜರುಗಿದ ಲೋಕಸಭೆ ಚುನಾವಣೆಯಲ್ಲಿ ಉರ್ಮಿಳಾ ಸ್ಪರ್ಧಿಸಿದ್ದರು. ಮುಂಬೈನ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಇವರು ಬಿಜೆಪಿಯ ಗೋಪಾಲ ಶೆಟ್ಟಿ ವಿರುದ್ಧ ಸೋಲು ಕಂಡಿದ್ದಾರೆ.