ಕರ್ನಾಟಕ

karnataka

ETV Bharat / sitara

93ನೇ ಅಕಾಡೆಮಿ ಪ್ರಶಸ್ತಿ ಸಮಾರಂಭಕ್ಕೆ ಆಲಿಯಾ ಭಟ್, ಹೃತಿಕ್​ ರೋಷನ್​​ಗೆ ಆಹ್ವಾನ - ಎಎಂಪಿಎಎಸ್ ಕಾರ್ಯಕ್ರಮಕ್ಕೆ ಹೃತಿಕ್ ರೋಷನ್​​ಗೆ ಆಹ್ವಾನ

ಅಮೆರಿಕದ ಲಾಸ್ ಏಂಜಲೀಸ್​​ನಲ್ಲಿ ನಡೆಯಲಿರುವ 93ನೇ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಲು ಭಾರತದ ಸೇರಿದಂತೆ 68 ದೇಶದ ಕಲಾವಿದರನ್ನು ಆಹ್ವಾನಿಸಲಾಗಿದೆ. ಬಾಲಿವುಡ್​​ನಿಂದ ಹೃತಿಕ್ ರೋಷನ್, ಆಲಿಯಾ ಭಟ್ ಹಾಗೂ ಇನ್ನಿತರರನ್ನು ಆಹ್ವಾನಿಸಲಾಗಿದೆ.

93rd Academy Awards
93ನೇ ಅಕಾಡೆಮಿ ಪ್ರಶಸ್ತಿ

By

Published : Jul 1, 2020, 1:04 PM IST

ಲಾಸ್ ಏಂಜಲೀಸ್: ಕೆನಡಾದ ಟೊರಾಂಟೋದಲ್ಲಿ ನಡೆಯಲಿರುವ ಟಿಐಎಫ್​ಎಫ್​​​-2020 ಚಿತ್ರೋತ್ಸವದಲ್ಲಿ ಭಾಗಿಯಾಗಲು ಇತ್ತೀಚೆಗೆ ಭಾರತ ಚಿತ್ರರಂಗದಿಂದ ಪ್ರಿಯಾಂಕ ಛೋಪ್ರಾ ಹಾಗೂ ನಿರ್ಮಾಪಕ ಅನುರಾಗ್ ಕಶ್ಯಪ್ ಅವರಿಗೆ ಆಹ್ವಾನ ನೀಡಲಾಗಿತ್ತು. ಇದೀಗ ಲಾಸ್​ ಏಂಜಲೀಸ್​​ನಲ್ಲಿ ನಡೆಯಲಿರುವ 93ನೇ ಅಕಾಡೆಮಿ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಾಲಿವುಡ್​​ನ ಕೆಲವು ಸ್ಟಾರ್​​​ಗಳನ್ನು ಆಹ್ವಾನಿಸಲಾಗಿದೆ.

ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್​ ಆ್ಯಂಡ್ ಸೈನ್ಸ್​ (ಎಎಂಪಿಎಎಸ್​​​​) ಕಾರ್ಯಕ್ರಮದಲ್ಲಿ ಭಾಗವಹಿಸುವ 819 ಕಲಾವಿದರು ಹಾಗೂ ಕಾರ್ಯನಿರ್ವಾಹಕರಲ್ಲಿ ಬಾಲಿವುಡ್ ತಾರೆಗಳಾದ ಹೃತಿಕ್ ರೋಷನ್, ಆಲಿಯಾ ಭಟ್ ಹಾಗೂ ಕಾಸ್ಟ್ಯೂಮ್​ ಡಿಸೈನರ್ ನೀತಾ ಲುಲ್ಲಾ ಸೇರಿದ್ದಾರೆ. ಜೋಯಾ ಅಖ್ತರ್ ನಿರ್ದೇಶನದಲ್ಲಿ ಆಲಿಯಾ ಭಟ್ ಅಭಿನಯಿಸಿದ್ದ 'ಗಲ್ಲಿ ಬಾಯ್' ಸಿನಿಮಾ 2019 ರ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಅಂತಾರಾಷ್ಟ್ರೀಯ ವಿಭಾಗಕ್ಕೆ ಆಯ್ಕೆಯಾಗಿತ್ತಾದರೂ ಟಾಪ್ 5 ರ ಸ್ಥಾನ ತಲುಪುವಲ್ಲಿ ವಿಫಲವಾಗಿತ್ತು.

ಎಎಂಪಿಎಎಸ್ ಸಮಾರಂಭದಲ್ಲಿ ಭಾಗಿಯಾಗಲು ಸುಮಾರು 68 ದೇಶಗಳ ಕಲಾವಿದರನ್ನು ಆಹ್ವಾನಿಸಲಾಗಿದೆ. ಆಲಿಯಾ, ಹೃತಿಕ್ ಹಾಗೂ ನೀತಾ ಅವರೊಂದಿಗೆ ಭಾರತದಿಂದ ಕಾಸ್ಟಿಂಗ್ ಡೈರೆಕ್ಟರ್ ನಂದಿನಿ ಶ್ರೀಕಾಂತ್, ಸಾಕ್ಷ್ಯಚಿತ್ರ ನಿರ್ಮಾಪಕರಾದ ನಿಷ್ಠಾ ಜೈನ್, ಅಮಿತ್ ಮಾಧೆಶಿಯಾ ಹಾಗೂ ವಿಶ್ಯುವಲ್ ಎಫೆಕ್ಟ್ ಮೇಲ್ವಿಚಾರಕರಾದ ವಿಶಾಲ್ ಆನಂದ್ ಹಾಗೂ ಸಂದೀಪ್ ಕಮಲ್ ಕೂಡಾ ಸೇರಿದ್ದಾರೆ. ಪ್ರಶಸ್ತಿ ಸಮಾರಂಭಕ್ಕೆ ಆಹ್ವಾನಿಸಿದ ಸೆಲಬ್ರಿಟಿಗಳು 25 ಏಪ್ರಿಲ್​ 2021 ರಂದು ಮತದಾನ ಮಾಡಬೇಕಿದೆ.

'ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಲು ಆಯ್ಕೆ ಆಗಿರುವವರನ್ನು ಸ್ವಾಗತಿಸಲು ನಾವು ಬಹಳ ಉತ್ಸುಕರಾಗಿದ್ದೇವೆ. ಜಾಗತಿಕ ಚಲನಚಿತ್ರ ಸಮುದಾಯದ ಶ್ರೀಮಂತ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಅಸಾಧಾರಣ ಪ್ರತಿಭೆಗಳಿಗೆ ಎಂದಿಗೂ ನಮ್ಮ ಪ್ರೋತ್ಸಾಹ ಇರುತ್ತದೆ' ಎಂದು ಅಕಾಡೆಮಿ ಅಧ್ಯಕ್ಷ ಡೇವಿಡ್ ರೂಬಿನ್ ಹೇಳಿದ್ದಾರೆ.

2019 ರಲ್ಲಿ ನಡೆದ ಸಮಾರಂಭಕ್ಕೆ ವಿಶ್ವಾದ್ಯಂತ 842 ಅತಿಥಿಗಳನ್ನು ಆಹ್ವಾನಿಸಲಾಗಿತ್ತು. 2016 ರಲ್ಲಿ ಆಯ್ಕೆ ವಿಚಾರದಲ್ಲಿ ಉಂಟಾದ ವಿವಾದ ಮತ್ತೆ ಮರುಕಳಿಸದಂತೆ ಈ ಬಾರಿ ಎಚ್ಚರಿಕೆ ವಹಿಸಲಾಗುವುದು ಎಂದು ಅಕಾಡೆಮಿ ಪ್ರಶಸ್ತಿ ಆಯೋಜಕರು ಹೇಳಿದ್ದಾರೆ.

ABOUT THE AUTHOR

...view details