ಕರ್ನಾಟಕ

karnataka

ETV Bharat / sitara

International Emmy Awards: ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆಯುವಲ್ಲಿ ಭಾರತದ ನಟರು ವಿಫಲ - ಭಾರತದ ನಟರಿಗಿಲ್ಲ ಎಮ್ಮಿ ಪ್ರಶಸ್ತಿ

International Emmy awards: ಅಂತಾರಾಷ್ಟ್ರೀಯ ಎಮ್ಮಿ ಅವಾರ್ಡ್​ನಲ್ಲಿ ಭಾರತ ಪ್ರಶಸ್ತಿ ಗಳಿಸುವ ಭರವಸೆ ಮೂಡಿಸಿತ್ತು. ಆದರೆ, ಸೋಮವಾರ ಮುಕ್ತಾಯಗೊಂಡ ಈ ಕಾರ್ಯಕ್ರಮದಲ್ಲಿ ಯಾವುದೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳದೇ ನಮ್ಮ ದೇಶದ ನಟರು ನಿರಾಸೆ ಮೂಡಿಸಿದ್ದಾರೆ.

international emmy awards
ಅಂತಾರಾಷ್ಟ್ರೀಯ ಎಮ್ಮಿ ಪ್ರಶಸ್ತಿ

By

Published : Nov 23, 2021, 4:47 PM IST

ನ್ಯೂಯಾರ್ಕ್​:ಈ ಬಾರಿಯ ಅಂತಾರಾಷ್ಟ್ರೀಯ ಎಮ್ಮಿ ಅವಾರ್ಡ್​ನಲ್ಲಿ ಭಾರತ ಪ್ರಶಸ್ತಿ ಗಳಿಸುವ ಭರವಸೆ ಮೂಡಿಸಿತ್ತು. ಆದರೆ, ಸೋಮವಾರ ಮುಕ್ತಾಯಗೊಂಡ ಎಮ್ಮಿ ಅವಾರ್ಡ್​ ಕಾರ್ಯಕ್ರಮದಲ್ಲಿ ಯಾವುದೇ ಪ್ರಶಸ್ತಿ ಗಳಿಸದೇ ಭಾರತದ ನಟರು ನಿರಾಸೆ ಮೂಡಿಸಿದ್ದಾರೆ.

ಎಮ್ಮಿ ಅವಾರ್ಡ್​ಗಾಗಿ ಭಾರತದಿಂದ ಉತ್ತಮ ನಟ ವಿಭಾಗಕ್ಕೆ ನವಾಜುದ್ದೀನ್​ ಸಿದ್ಧಿಕಿ, ಅತ್ಯುತ್ತಮ ಹಾಸ್ಯ ಕಾರ್ಯಕ್ರಮ ವಿಭಾಗಕ್ಕೆ ವೀರ್ ದಾಸ್​ ಫಾರ್​ ಇಂಡಿಯಾ, ಉತ್ತಮ ಧಾರಾವಾಹಿ ವಿಭಾಗಕ್ಕೆ ಸುಶ್ಮಿತಾ ಸೇನ್​ ಅವರ ಆರ್ಯ ಧಾರಾವಾಹಿ ಸರಣಿ ನಾಮಾಂಕಿಗೊಂಡಿದ್ದವು. ಆದರೆ, ಮೂರು ವಿಭಾಗಗಳಲ್ಲೂ ಭಾರತಕ್ಕೆ ಪ್ರಶಸ್ತಿ ಬಂದಿಲ್ಲ.

ಅತ್ಯುತ್ತಮ ನಟ ವಿಭಾಗದಲ್ಲಿ ನವಾಜುದ್ದೀನ್ ಸಿದ್ಧಿಕಿ ಅವರು ಖ್ಯಾತ ಬ್ರಿಟಿಷ್ ನಟ ಡೇವಿಡ್ ಟೆನೆಂಟ್ ಅವರೆದುದು ಪ್ರಶಸ್ತಿ ಕಳೆದುಕೊಂಡರೆ, ವೀರ್ ದಾಸ್, ಜನಪ್ರಿಯ 'ಕಾಲ್ ಮೈ ಏಜೆಂಟ್' ಹಾಸ್ಯ ಕಾರ್ಯಕ್ರಮದೆದುರು ಪ್ರಶಸ್ತಿಯಿಂದ ವಂಚಿತರಾದರು.

ಪ್ರಶಸ್ತಿ ದೊರೆಯದೇ ಹೋದರೂ ಮೂರು ವಿಭಾಗಗಳಲ್ಲಿ ಭಾರತೀಯರು ನಾಮಾಂಕಿತಗೊಂಡಿದ್ದು ಇದೇ ಮೊದಲು. ಈ ಮೂಲಕ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತವು ಗಮನ ಸೆಳೆದಿದೆ.

Emmy Awardees list -2021

ಅತ್ಯುತ್ತಮ ನಟಿ: ಹೈಲೇ ಸ್ಕೈರೀಸ್​(ಇಂಗ್ಲೆಂಡ್​)

ಅತ್ಯುತ್ತಮ ನಟ: ಡೇವಿಡ್ ಟೆನಂಟ್(ಇಂಗ್ಲೆಂಡ್​)​

ಉತ್ತಮ ಹಾಸ್ಯ ಧಾರಾವಾಹಿ ಸರಣಿ: ಕಾಲ್​ ಮೈ ಏಜೆಂಟ್​ ಸೀಸನ್​(ಫ್ರಾನ್ಸ್​)

ಉತ್ತಮ ಸಾಕ್ಷ್ಯಚಿತ್ರ: ಹೋಪ್ ಫ್ರೋಜನ್: ಎ ಕ್ವೆಸ್ಟ್ ಟು ಲೈವ್ ಟ್ವೈಸ್(ಥೈಲ್ಯಾಂಡ್)

ನಾಟಕ ಸರಣಿ - ಟೆಹ್ರಾನ್ (ಇಸ್ರೇಲ್)

ಉತ್ತಮ ಕಿರು ರೂಪದ ಸರಣಿ: ಇನ್​ಸೈಡ್​(ನ್ಯೂಜಿಲೆಂಡ್)

ABOUT THE AUTHOR

...view details