ಕರ್ನಾಟಕ

karnataka

ETV Bharat / science-and-technology

AIನಿಂದ ಬದಲಿಸಲಾದ/ಸೃಷ್ಟಿಸಲಾದ ವಿಡಿಯೋ ತೆಗೆದುಹಾಕಲಿದೆ ಯೂಟ್ಯೂಬ್ - ಈಟಿವಿ ಭಾರತ ಕನ್ನಡ

ಎಐನಿಂದ ರಚಿಸಲಾದ ಅಥವಾ ಮಾರ್ಪಡಿಸಿದ ವಿಡಿಯೋಗಳನ್ನು ಲೇಬಲ್ ಮಾಡುವ ಅಥವಾ ತೆಗೆದುಹಾಕುವ ಸಲುವಾಗಿ ಯೂಟ್ಯೂಬ್ ಹೊಸ ನಿಯಮಗಳನ್ನು ಜಾರಿ ಮಾಡಲಿದೆ.

YouTube to crack down on AI-generated videos via labels, removals
YouTube to crack down on AI-generated videos via labels, removals

By ETV Bharat Karnataka Team

Published : Nov 15, 2023, 12:31 PM IST

ಸ್ಯಾನ್ ಫ್ರಾನ್ಸಿಸ್ಕೊ : ಎಐನ (ಕೃತ ಬುದ್ಧಿಮತ್ತೆ) ಜನರೇಟಿವ್ ಸಾಧನಗಳನ್ನು ಅಥವಾ ಇನ್ನಾವುದೇ ಸಾಧನಗಳನ್ನು ಬಳಸಿ ನೈಜವಾಗಿ ಕಾಣುವ ಆದರೆ ನೈಜವಲ್ಲದ ವಿಡಿಯೋ ಅಥವಾ ಕಂಟೆಂಟ್​ ಅನ್ನು ರಚಿಸಿ ಅದನ್ನು ಯೂಟ್ಯೂಬ್​ಗೆ ಅಪ್ಲೋಡ್ ಮಾಡುವ ಕ್ರಿಯೇಟರ್​ಗಳು ಈ ಬಗ್ಗೆ ಮಾಹಿತಿ ಬಹಿರಂಗಪಡಿಸುವುದನ್ನು ಕಡ್ಡಾಯಗೊಳಿಸಿ ಗೂಗಲ್ ಒಡೆತನದ ಯೂಟ್ಯೂಬ್ ಶೀಘ್ರದಲ್ಲೇ ನಿಯಮ ಜಾರಿ ಮಾಡಲಿದೆ. ಕ್ರಿಯೇಟರ್​ಗಳು ವಿಡಿಯೋ ಅಪ್ಲೋಡ್ ಮಾಡುವಾಗ ಅದು ನಕಲಿ ಅಥವಾ ನೈಜವಾಗಿ ಕಾಣುವಂತೆ ಮಾರ್ಪಡಿಸಲಾದ ಕಂಟೆಂಟ್​ ಅನ್ನು ಒಳಗೊಂಡಿದೆಯಾ ಎಂಬ ಬಗ್ಗೆ ಮಾಹಿತಿ ಸಲ್ಲಿಸುವಂತೆ ಅವರಿಗೆ ಆಯ್ಕೆಗಳು ಕಾಣಿಸಲಿವೆ.

"ಉದಾಹರಣೆಗೆ, ಇದು ವಾಸ್ತವದಲ್ಲಿ ನಡೆಯದ ಘಟನೆಯನ್ನು ನಡೆದಿದೆ ಎಂದು ಚಿತ್ರಿಸುವ ಎಐನಿಂದ ಸೃಷ್ಟಿಸಲಾದ ವಿಡಿಯೋವಾಗಿರಬಹುದು ಅಥವಾ ಯಾರಾದರೂ ವಾಸ್ತವದಲ್ಲಿ ಹೇಳದ್ದನ್ನು ಅಥವಾ ಮಾಡದೆ ಇರುವುದನ್ನು ಹೇಳಿದ್ದಾರೆ ಅಥವಾ ಮಾಡಿದ್ದಾರೆ ಎಂದು ತೋರಿಸುವ ಕಂಟೆಂಟ್ ಆಗಿರಬಹುದು" ಎಂದು ಕಂಪನಿ ಹೇಳಿದೆ. ಚುನಾವಣೆಗಳು, ವಿಶ್ವದಲ್ಲಿ ನಡೆಯುತ್ತಿರುವ ಯುದ್ಧಗಳು, ಸಾರ್ವಜನಿಕ ಆರೋಗ್ಯ ಸಮಸ್ಯೆಗಳು ಅಥವಾ ಸರ್ಕಾರಿ ಅಧಿಕಾರಿಗಳ ಬಗೆಗಿನ ವಿಷಯಗಳ ಸಂದರ್ಭದಲ್ಲಿ ಈ ವಿಷಯ ಪ್ರಾಮುಖ್ಯತೆ ಪಡೆದಿದೆ.

ನಕಲಿ ಅಥವಾ ಮಾರ್ಪಡಿಸಿದ ಕಂಟೆಂಟ್​ ಬಗೆಗಿನ ಮಾಹಿತಿಯನ್ನು ಬಹಿರಂಗಪಡಿಸದೆ ಪದೇ ಪದೆ ನಿಯಮ ಉಲ್ಲಂಘಿಸಿದರೆ ಅಂಥ ಕಂಟೆಂಟ್​ ಅನ್ನು ಡಿಲೀಟ್ ಮಾಡಬಹುದು ಅಥವಾ ಆ ಕಂಟೆಂಟ್​ ಕ್ರಿಯೇಟರ್​ಗಳನ್ನು ಯೂಟ್ಯೂಬ್ ಪಾರ್ಟನರ್ ಪ್ರೊಗ್ರಾಮ್​ನಿಂದ ಹೊರಹಾಕಬಹುದು ಅಥವಾ ಇನ್ನೂ ಬೇರೆ ರೀತಿಯ ದಂಡನೆಯ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಕಂಪನಿ ಎಚ್ಚರಿಸಿದೆ.

ಹೊಸ ನಿಯಮಗಳನ್ನು ಸಂಪೂರ್ಣವಾಗಿ ಜಾರಿ ಮಾಡುವ ಮುನ್ನ ನಾವು ಕಂಟೆಂಟ್ ಕ್ರಿಯೇಟರ್​ಗಳಿಗೆ ಈ ಬಗ್ಗೆ ತಿಳುವಳಿಕೆ ನೀಡಲಿದ್ದೇವೆ. ಇನ್ನು ವೀಕ್ಷಕರು ನೋಡುತ್ತಿರುವ ಕಂಟೆಂಟ್​ ನಕಲಿ ಆಗಿರಬಹುದು ಅಥವಾ ಮಾರ್ಪಡಿಸಿರಬಹುದು ಎಂಬುದನ್ನು ಎರಡು ರೀತಿಯಲ್ಲಿ ಅವರಿಗೆ ಮಾಹಿತಿ ನೀಡಲಾಗುವುದು ಎಂದು ಯೂಟ್ಯೂಬ್ ಹೇಳಿದೆ.

ಕೆಲ ವಿಷಯವನ್ನು ಬದಲಾಯಿಸಲಾಗಿದೆ ಅಥವಾ ಮಾರ್ಪಡಿಸಲಾಗಿದೆ ಎಂದು ಸೂಚಿಸುವ ಸಲುವಾಗಿ ಹೊಸ ಲೇಬಲ್ ವೈಶಿಷ್ಟ್ಯವನ್ನು ಸೇರಿಸಲಾಗುತ್ತದೆ ಮತ್ತು ಸೂಕ್ಷ್ಮ ವಿಷಯಗಳ ಬಗ್ಗೆ ಕೆಲ ರೀತಿಯ ವಿಷಯಗಳಿಗೆ ನಾವು ವೀಡಿಯೊ ಪ್ಲೇಯರ್ ಗೆ ಮತ್ತಷ್ಟು ಲೇಬಲ್​ಗಳನ್ನು ಅನ್ವಯಿಸುತ್ತೇವೆ. ಹಾಗೆಯೇ ಯೂಟ್ಯೂಬ್​ನ ಜನರೇಟಿವ್ ಎಐ ಉತ್ಪನ್ನಗಳು ಮತ್ತು ವೈಶಿಷ್ಟ್ಯಗಳಿಂದ ರಚಿಸಲಾದ ಕಂಟೆಂಟ್​ ಅನ್ನು ಬದಲಾದ ಅಥವಾ ಸಂಶ್ಲೇಷಿತ ಎಂದು ಸ್ಪಷ್ಟವಾಗಿ ಲೇಬಲ್ ಮಾಡಲಾಗುತ್ತದೆ.

ಇದನ್ನೂ ಓದಿ: ಮಧುಮೇಹದಿಂದ ಪ್ರಜ್ಞೆ ತಪ್ಪಿದವನ ಜೀವ ಉಳಿಸಿದ ಆ್ಯಪಲ್ ವಾಚ್!

ABOUT THE AUTHOR

...view details