ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ): ಯೂಟ್ಯೂಬ್ ಹೊಸ ಪೀಚರ್ ಪರೀಕ್ಷಿಸಲು ಪ್ರಾರಂಭಿಸಿದೆ. ಇದು ಕ್ರಿಯೇಟರ್ಸ್ಗೆ ತಮ್ಮ ಪೋಸ್ಟ್‌ಗಳಲ್ಲಿ ಕ್ವಿಜ್ಗೆ ಅವಕಾಶ ಮಾಡಿಕೊಡುತ್ತದೆ. ಈ ಹೊಸ ಪೀಚರ್ ಬೀಟಾದಲ್ಲಿ ಲಭ್ಯ ಇದ್ದು, ಕಡಿಮೆ ಸಂಖ್ಯೆಯ ಕ್ರಿಯೇಟರ್ಸ್ಗೆ ಬಳಕೆಗೆ ಅವಕಾಶ ಸಿಗುತ್ತಿದೆ.
ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಆಗಿರುವ ಯೂಟ್ಯೂಬ್ ತನ್ನ ಕ್ರಿಯೇಟರ್ ಇನ್‌ಸೈಡರ್ ಚಾನಲ್‌ನಲ್ಲಿ ಹೊಸ ವಿಡಿಯೋದಲ್ಲಿ ವಿವರಗಳನ್ನು ಹಂಚಿಕೊಂಡಿದೆ. ಅದು ನಿಯಮಿತವಾಗಿ ಅಪ್ಡೇಟ್ಗಳನ್ನು ಕ್ರಿಯೇಟರ್ಸ್ಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ ಎಂದು ವರದಿಯಾಗಿದೆ.
ಇತ್ತೀಚಿನ ವಿಡಿಯೋದಲ್ಲಿ ತಮ್ಮ ಫಾಲೋವರ್ಸ್ಗೆ ವಿಶೇಷವಾಗಿ ಶೈಕ್ಷಣಿಕ ಚಾನಲ್‌ಗಳನ್ನು ಕಲಿಯಲು ಸಹಾಯ ಮಾಡಲು ಕ್ರಿಯೇಟರ್ಸ್ ಕ್ವಿಜ್ ಪೀಚರ್ ಹೇಗೆ ಬಳಸಬಹುದು ಎಂಬುದನ್ನೂ ವಿವರಿಸಲಾಗಿದೆ. ತಮ್ಮ ಫಾಲೋವರ್ಸ್ ಗಮನವನ್ನು ಸೆಳೆಯಲು ಮತ್ತು ಪೋಸ್ಟ್‌ಗಳೊಂದಿಗೆ ಆಳವಾದ ಚರ್ಚೆಯಲ್ಲಿ ತೊಡಗಿಸಿಕೊಳ್ಳಲು ಮತ್ತು ಅವರನ್ನು ಪ್ರೇರೇಪಿಸಲು ಬಯಸುವ ಕ್ರಿಯೇಟರ್ಸ್ಗೆ ಯೂಟ್ಯೂಬ್ನ ಕ್ವಿಜ್ ಪೀಚರ್ ಉತ್ತಮ ಸಾಧನವಾಗಿದೆ.
ಇದು ಫೋಟೋ ಎಡಿಟಿಂಗ್ ಟೂಲ್ಅನ್ನು ಪರೀಕ್ಷಿಸುತ್ತಿದ್ದು, ಈಗ ಆಪಲ್ ಐಫೋನ್ ಐಒಎಸ್ ಸಾಧನಗಳಲ್ಲಿ ಯೂಟ್ಯೂಬ್ ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತದೆ. ಪೋಸ್ಟ್‌ಗಳಲ್ಲಿ ಹಂಚಿಕೊಳ್ಳುವ ಚಿತ್ರಗಳಿಗೆ ಫಿಲ್ಟರ್‌ಗಳು, ಪಠ್ಯ ಮತ್ತು ಸ್ಟಿಕ್ಕರ್‌ಗಳನ್ನು ಬಳಸಲು ಕ್ರಿಯೇಟರ್ಸ್ಗೆ ಅವಕಾಶ ಇರುತ್ತದೆ. ಆಯ್ದ ಕ್ರಿಯೇಟರ್ಸ್ ಫೋಟೋ ಎಡಿಟಿಂಗ್ ಫೀಚರ್ ಬಳಕೆ ಮಾಡಬಹುದಾಗಿದೆ ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ:ಗ್ರೂಪ್ ಚಾಟ್ನಲ್ಲಿ ಇನ್ಮುಂದೆ ಪ್ರೊಫೈಲ್ ವೀಕ್ಷಣೆ: ವಾಟ್ಸ್ಆ್ಯಪ್ನಿಂದ ಹೊಸ ಫೀಚರ್