ಕರ್ನಾಟಕ

karnataka

ETV Bharat / science-and-technology

Twitter New Rule: ಖಾತೆ ಇಲ್ಲದೇ ಇನ್ಮುಂದೆ ಟ್ವಿಟರ್​ ಜಾಲಾಡಲು ಸಾಧ್ಯವಿಲ್ಲ; ಹೊಸ ನಿಯಮ ತಂದ ಮಸ್ಕ್​

ಈ ಹಿಂದೆ ಟ್ವೀಟ್​​ಗಳನ್ನು ನೋಡಲು ನೀವು ಅಧಿಕೃತ ಟ್ವಿಟರ್​​ ಖಾತೆ ಹೊಂದಿರ ಬೇಕಾಗಿರಲಿಲ್ಲ. ಆದರೆ, ಇನ್ಮುಂದೆ ಸ್ವಂತ ಖಾತೆ ಇಲ್ಲದೆ ಯಾವುದೇ ಟ್ವೀಟ್​ ನೋಡಲು ಸಾಧ್ಯವಾಗದು.

You can no longer browse Twitter without an account; Musk brought a new rule
You can no longer browse Twitter without an account; Musk brought a new rule

By

Published : Jul 1, 2023, 12:36 PM IST

ನವದೆಹಲಿ:ತಮ್ಮದೇ ಆದ ಅಧಿಕೃತ ಟ್ವಿಟರ್​ ಖಾತೆ ಇಲ್ಲದೆಯೇ ಬೇರೆಯವರ ಟ್ವಿಟರ್​​ ಅಕೌಂಟ್​ ಜಾಲಾಡುತ್ತಿದ್ದ ಅನೇಕ ಸಾಮಾಜಿಕ ಜಾಲತಾಣ ಪ್ರಿಯರಿಗೆ ಎಲಾನ್​ ಮಸ್ಕ್​ ಶಾಕ್​ ನೀಡಿದ್ದಾರೆ. ಇನ್ಮುಂದೆ ಖಾತೆ ತೆರೆಯದೇ ಸುಖಾ ಸುಮ್ಮನೆ ಜನಪ್ರಿಯ ಸಾಮಾಜಿಕ ಜಾಲತಾಣವಾದ ಟ್ವಿಟರ್​ನಲ್ಲಿ ಬೇರೆಯವರ ಟ್ವೀಟ್​ಗಳನ್ನು ಪರಿಶೀಲನೆ ಮಾಡದಂತೆ ನಿರ್ಬಂಧ ಹೇರಿದ್ದಾರೆ. ಈ ಮೂಲಕ ಯಾವುದೇ ಟ್ವೀಟ್​ ಅನ್ನು ಓದಬೇಕು ಎಂದರೂ ನಿಮ್ಮ ಟ್ವಿಟರ್​ ಖಾತೆಯಿಂದ ಲಾಗಿನ್​ ಆಗುವುದು ಕಡ್ಡಾಯವಾಗಲಿದೆ. ಟ್ವಿಟರ್​​ ಡೇಟಾವನ್ನು ಕದಿಯುವುದನ್ನು ತಡೆಯುವ ಉದ್ದೇಶದಿಂದ ಈ ಕ್ರಮಕ್ಕೆ ವಿಶ್ವದ ಶ್ರೀಮಂತ ಮುಂದಾಗಿದ್ದಾರೆ. ಜೊತೆಗೆ ಬಳಕೆದಾರರ ಖಾತೆಯ ರಕ್ಷಣೆಗೆ ಇದು ಅಗತ್ಯವಾಗಿದೆ ಎಂದಿದ್ದಾರೆ. ಇದರಿಂದ ಸಾರ್ವಜನಿಕವಾಗಿ ಹಾಗೆಯೇ ಟ್ವೀಟ್​ಗಳನ್ನು ನೋಡಲು ಸಾಧ್ಯವಾಗದು.

ಡೇಟಾ ಕಳವು ತಪ್ಪಿಸಲು ಕ್ರಮ ಈ ಕುರಿತು ಮಾತನಾಡಿರುವ ಮಸ್ಕ್​ ಇದು ತಾತ್ಕಾಲಿಕವಾದ ತುರ್ತು ಕ್ರಮವಾಗಿದೆ. ಸಾರ್ವಜನಿಕವಾಗಿ ಟ್ವೀಟ್​ಗಳನ್ನು ಓದಲು ಸಾಧ್ಯವಿದ್ದ ಹಿನ್ನೆಲೆ ಡೇಟಾಗಳು ಕಳವು ಆಗುತ್ತಿದ್ದು, ಇದು ನಮ್ಮ ಸಾಮಾನ್ಯ ಬಳಕೆದಾರರ ಸೇವೆಯನ್ನು ಕೀಳಾಗಿಸುತ್ತಿತ್ತು. ಇದೀಗ ಪ್ರತಿಯೊಂದು ಕಂಪನಿಯೂ ಎಐ ಬಳಕೆ ಮಾಡುತ್ತಿದೆ. ಸ್ಟಾರ್ಟ್​ಅಪ್​ಗಳಿಂದ ಜಗತ್ತಿನ ಕೆಲವು ಅತಿ ದೊಡ್ಡ ಕಾರ್ಪೊರೇಷನ್​ಗಳವರೆಗೆ, ದತ್ತಾಂಶಗಳನ್ನು ಸ್ಕ್ರಾಪ್​ ಮಾಡುತ್ತಿದೆ ಎಂದು ಮಸ್ಕ್​ ವಾದಿಸಿದ್ದಾರೆ.

ಮಸ್ಕ್​ ಈ ನಿಯಮವನ್ನು ಜಾರಿಗೆ ತರಲು ಪ್ರಮುಖ ಕಾರಣ ಎಐ ಸಾಧನಗಳು ಟ್ವಿಟರ್​ ಸರ್ಚಿಂಗ್​ ಅನ್ನು ತಡೆಯುವುದಾಗಿದೆ. ಎಐ ಸ್ಟಾರ್ಟ್‌ಅಪ್‌ ಸೇರಿದಂತೆ ಪ್ರಮುಖ ಸಂಸ್ಥೆಗಳ ವಿರುದ್ಧ ಅಸಮಾಧಾನ ಹೊರ ಹಾಕಿರುವ ಮಸ್ಕ್​, ಕೆಲವು ಸಂಸ್ಥೆಗಳು ದೊಡ್ಡ ಭಾಷೆಯ ಮಾದರಿಗಳಿಗೆ ತರಬೇತಿ ನೀಡಲು ಟ್ವಿಟರ್​​ ದತ್ತಾಂಶವನ್ನು ಬಳಕೆ ಮಾಡುತ್ತಿದ್ದಾರೆ. ಈ ಹಿನ್ನೆಲೆ ಈ ಕ್ರಮ ವಹಿಸಲಾಗಿದೆ ಎಂದು ತಮ್ಮ ಹೊಸ ನಿಯಮವನ್ನು ಸಮರ್ಥಿಸಿಕೊಂಡಿದ್ದಾರೆ. ಈ ಹಿಂದೆ ಯಾವುದಾದರೂ ಸಾರ್ವಜನಿಕ ಟ್ವೀಟ್​​ಗಳನ್ನು ಖಾತೆ ಹೊಂದಿಲ್ಲದೆ, ಬಳಕೆದಾರರು ಪರಿಶೀಲಿಸಬಹುದಿತ್ತು. ಆದರೆ, ಇದೀಗ ಅದು ಸಾಧ್ಯವಾಗುವುದಿಲ್ಲ. ಟ್ವಿಟರ್​ನ ಈ ಹೊಸ ಬದಲಾವಣೆ ಸುಲಭವಾಗಿ ಹಿಮ್ಮೆಟ್ಟಿಸಬಹುದಾಗಿದೆ. ಇನ್ನು ಈ ದತ್ತಾಂಶಗಳ ಲಾಕ್​ ಮಾಡುವ ತಂತ್ರ ಇಂದಿನಿಂದ ಇನ್ನು ಎರಡು ಮೂರು ವರ್ಷ ನಡೆಯಲಿದೆ ಎಂದು ಮಸ್ಕ್​ ಟ್ವೀಟ್​ ಮಾಡಿದ್ದಾರೆ.

ಬಳಕೆದಾರರ ಮೇಲೆ ಪರಿಣಾಮ: ಟ್ವಿಟರ್​​ ತನ್ನ ದತ್ತಾಂಶವನ್ನು ಉಚಿತವಾಗಿ ನೀಡದೆ ಸುರಕ್ಷಿತಗೊಳಿಸಲು ಮುಂದಾಗಿದೆ ಎಂಬುದನ್ನು ಅರ್ಥೈಸಿಕೊಳ್ಳಬಹುದಾಗಿದೆ. ಇದರಿಂದ ಟ್ವಿಟರ್​ ರೀಚ್​ ನಿಸ್ಸಂಶಯವಾಗಿ ಕಡಿಮೆಯಗಲಿದೆ. ಟ್ವಿಟ್​​ಗಳ ಎಕ್ಸ್​ಟ್ರಾನಲ್​ ಲಿಂಕ್​, ಎಂಬೆಡ್​​ಗಳು ಕೂಡ ಕಡಿಮೆಯಾಗಲಿದೆ. ಜೊತೆಗೆ ಇದು ಗೌಪ್ಯತೆಯ ಕಾಳಜಿಯನ್ನು ಕೂಡ ಇದು ಹೆಚ್ಚಿಸುತ್ತದೆ. ದೀರ್ಘ ಕಾಲಕ್ಕೆ ಉತ್ತಮ ಪರಿಹಾರ ಪತ್ತೆ ಮಾಡುವ ಆಸೆ ಇದೆ ಎಂದು ಕೂಡ ತಿಳಿಸಲಾಗಿದೆ.

ಇನ್ನು, ಈ ಹೊಸ ಬದಲಾವಣೆಯಿಂದಾಗಿ ಇನ್ಮುಂದೆ ಟ್ವೀಟ್​ಗಳನ್ನು ಓದುವ ಸಲುವಾಗಿ ಅನೇಕ ಮಂದಿ ಟ್ವಿಟರ್​ ಖಾತೆಯನ್ನು ತೆರೆಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಈ ಬದಲಾವಣೆಯು ಸರ್ಚ್ ಇಂಜಿನ್‌ಗಳಲ್ಲಿನ ಟ್ವೀಟ್‌ಗಳ ಶ್ರೇಯಾಂಕದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ:ಇಂಟರ್​ನೆಟ್​ನಿಂದ ಡೇಟಾ ಕದ್ದ ಆರೋಪ: Open AI ವಿರುದ್ಧ ಯುಎಸ್​ನಲ್ಲಿ ಮೊಕದ್ದಮೆ

ABOUT THE AUTHOR

...view details