ಕರ್ನಾಟಕ

karnataka

ETV Bharat / science-and-technology

ಎಕ್ಸ್​ನಲ್ಲೂ ಬರಲಿದೆ ಆಡಿಯೊ, ವಿಡಿಯೊ ಕಾಲ್ ಸೌಲಭ್ಯ - ಎಕ್ಸ್​ನಲ್ಲಿನ ಡೋಜ್ ಡಿಸೈನರ್ ಹೆಸರಿನ ಹ್ಯಾಂಡಲ್​ನ

ಎಕ್ಸ್​ ಅಥವಾ ಈ ಹಿಂದಿನ ಟ್ವಿಟರ್​, ವಾಟ್ಸ್​ಆ್ಯಪ್ ಮಾದರಿಯಲ್ಲಿ ಆಡಿಯೊ ಮತ್ತು ವಿಡಿಯೊ ಕರೆ ಸೌಲಭ್ಯವನ್ನು ಆರಂಭಿಸುತ್ತಿದೆ.

X takes on WhatsApp, rolls out audio and video calls
X takes on WhatsApp, rolls out audio and video calls

By ETV Bharat Karnataka Team

Published : Oct 26, 2023, 5:20 PM IST

ಹೈದರಾಬಾದ್:ಎಕ್ಸ್​ (X) ಅನ್ನು ಸರ್ವ ಉಪಯೋಗಿ ಆ್ಯಪ್ (everything app) ಮಾಡುವ ನಿಟ್ಟಿನಲ್ಲಿ ಈಗ ಎಕ್ಸ್​ ಕಾರ್ಪ್ ಆಡಿಯೊ ಮತ್ತು ವಿಡಿಯೊ ಕಾಲ್ ಫೀಚರ್​ ಅನ್ನು ಪರಿಚಯಿಸಲು ಪ್ರಾರಂಭಿಸಿದೆ. ಮೆಟಾ ಒಡೆತನದ ವಾಟ್ಸ್​ಆ್ಯಪ್​ಗೆ ಪೈಪೋಟಿ ನೀಡುವ ಸಲುವಾಗಿ ಎಲೋನ್ ಮಸ್ಕ್ ಒಡೆತನದ ಎಕ್ಸ್ ಕಾರ್ಪ್ ಈ ವೈಶಿಷ್ಟ್ಯ ಅಳವಡಿಸಲು ಮುಂದಾಗಿದೆ ಎಂದು ತಂತ್ರಜ್ಞಾನ ವಿಶ್ಲೇಷಕರು ಹೇಳಿದ್ದಾರೆ.

ಎಕ್ಸ್​ನಲ್ಲಿನ ಡೋಜ್ ಡಿಸೈನರ್ ಹೆಸರಿನ ಹ್ಯಾಂಡಲ್​ನ ಪೋಸ್ಟ್​ಗೆ ಪ್ರತಿಕ್ರಿಯೆ ನೀಡಿದ ಎಲೋನ್ ಮಸ್ಕ್ ಹೊಸ ವೈಶಿಷ್ಟ್ಯವನ್ನು ಘೋಷಿಸಿದ್ದಾರೆ. "ಎಕ್ಸ್‌ನಲ್ಲಿ ವಿಡಿಯೊ ಮತ್ತು ಆಡಿಯೊ ಕರೆಗಳ ಆರಂಭಿಕ ಆವೃತ್ತಿ ಆರಂಭವಾಗಲಿದೆ" ಎಂದು ಮಸ್ಕ್ ಹೇಳಿದ್ದಾರೆ.

"ಆಡಿಯೊ ಮತ್ತು ವಿಡಿಯೊ ಕಾಲ್​ಗಳ ವೈಶಿಷ್ಟ್ಯ ಬಂದಿದೆ" ಎಂದು ಹಲವಾರು ಎಕ್ಸ್​ ಬಳಕೆದಾರರಿಗೆ ನೋಟಿಫಿಕೇಶನ್​ಗಳನ್ನು ಬರುತ್ತಿವೆ. ಎಕ್ಸ್​ನಲ್ಲಿನ ಸೆಟಿಂಗ್​ನಲ್ಲಿ Enable audio and video calling ಹಾಗೂ ಅದರ ನಂತರ turn the feature on and then select who you’re comfortable using it with ಅನ್ನು ಸೆಟಿಂಗ್ ಮಾಡುವ ಮೂಲಕ ಬಳಕೆದಾರರು ಈ ವೈಶಿಷ್ಟ್ಯವನ್ನು ಬಳಸಲಾರಂಭಿಸಬಹುದು.

ನಿಮ್ಮ ಅಡ್ರೆಸ್ ಬುಕ್​ನಲ್ಲಿರುವ ಜನ, ನೀವು ಫಾಲೋ ಮಾಡುವ ವ್ಯಕ್ತಿಗಳು, ವೆರಿಫೈ ಆದ ಬಳಕೆದಾರರು ಅಥವಾ ಆ ಎಲ್ಲ ಮೂರು ವರ್ಗದ ವ್ಯಕ್ತಿಗಳಿಗೆ ಆಡಿಯೊ ಮತ್ತು ವಿಡಿಯೊ ಕರೆಗಳನ್ನು ಮಾಡಬಹುದು. "ಎವೆರಿಥಿಂಗ್ ಅಪ್ಲಿಕೇಶನ್" ಆಗಿ ಪರಿವರ್ತನೆಯ ಭಾಗವಾಗಿ ಪ್ಲಾಟ್​ಫಾರ್ಮ್ ವೀಡಿಯೊ ಕರೆಗಳನ್ನು ಆರಂಭಿಸುತ್ತಿದೆ ಎಂದು ಎಕ್ಸ್ ಸಿಇಒ ಲಿಂಡಾ ಯಾಕರಿನೊ ಕಳೆದ ತಿಂಗಳು ಹೇಳಿದ್ದರು.

ಎಕ್ಸ್ (ಹಿಂದೆ ಟ್ವಿಟರ್) ಇದೊಂದು ಆನ್​ಲೈನ್ ಸುದ್ದಿ ಮತ್ತು ಸಾಮಾಜಿಕ ನೆಟ್ವರ್ಕಿಂಗ್ ಸೈಟ್ ಆಗಿದ್ದು, ಇದರಲ್ಲಿ ಜನ ಕಿರು ಸಂದೇಶಗಳ ಮೂಲಕ ಸಂವಹನ ನಡೆಸಬಹುದು. X ಇದು ಮೈಕ್ರೋಬ್ಲಾಗಿಂಗ್ ಪ್ಲಾಟ್ ಫಾರ್ಮ್ ಆಗಿದೆ. ಎಕ್ಸ್​ನಲ್ಲಿರುವ ನೂರಾರು ಬಳಕೆದಾರರ ಪೋಸ್ಟ್​ಗಳನ್ನು ಅತ್ಯಂತ ತ್ವರಿತವಾಗಿ ನೀವು ನೋಡಬಹುದು.

ಅಲ್ಲದೆ ಕೆಲವೇ ನಿಮಿಷಗಳಲ್ಲಿ ನೂರಾರು ಫೀಡ್​ಗಳನ್ನು ಸ್ಕ್ರೋಲ್ ಮಾಡಬಹುದು. X ಅನ್ನು ನೀವು ಪೋಸ್ಟ್ ಮಾಡಲು ಅಥವಾ ರೀಡರ್ ಆಗಿ ಬಳಸಬಹುದು. ಇದರಲ್ಲಿ ಉಚಿತವಾಗಿ ಖಾತೆ ಆರಂಭಿಸಿ ಯೂಸರ್ ನೇಮ್ ಪಡೆಯಬಹುದು. ನಿಮ್ಮನ್ನು ಫಾಲೋ ಮಾಡುವವರು ಹಾಗೂ ಫಾಲೋ ಮಾಡದೆ ಇರುವವರು ಕೂಡ ನಿಮ್ಮ ಪೋಸ್ಟ್ ಅನ್ನು ಓದಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಇನ್ನು ಈ ಫೋನ್​ಗಳಲ್ಲಿ ಕೆಲಸ ಮಾಡಲ್ಲ ವಾಟ್ಸ್​ಆ್ಯಪ್! ನಿಮ್ಮದು ಯಾವ ವರ್ಷನ್ ನೋಡಿಕೊಳ್ಳಿ..

ABOUT THE AUTHOR

...view details