ಕರ್ನಾಟಕ

karnataka

ETV Bharat / science-and-technology

ವಿಶ್ವದ ಮೊದಲ 200 ಎಂಪಿ ಕ್ಯಾಮೆರಾ ಸಾಮರ್ಥ್ಯದ ಮೊಬೈಲ್​.. ಯಾವ ಕಂಪನಿಯದ್ದು ಗೊತ್ತೆ? - ಮೊಟೊರೋಲಾ ಮೊಬೈಲ್​ ಕಂಪನಿ

ಮೊಟೊರೋಲಾ ಮೊಬೈಲ್​ ತಯಾರಿಕಾ ಕಂಪನಿ ವಿಶ್ವದ ಮೊದಲ ಹೆಚ್ಚಿನ ಸಾಮರ್ಥ್ಯದ ಕ್ಯಾಮೆರಾ ಮೊಬೈಲ್​ ಅನ್ನು ಪರಿಚಯಿಸುತ್ತಿದೆ.

worlds-first-smartphone
ವಿಶ್ವದ ಮೊದಲ 200 ಎಂಪಿ ಕ್ಯಾಮೆರಾ ಸಾಮರ್ಥ್ಯದ ಮೊಬೈಲ್

By

Published : Jul 30, 2022, 9:20 AM IST

ಮೊಬೈಲ್​ ಉತ್ಪಾದನಾ ಸಂಸ್ಥೆಗಳು ಗ್ರಾಹಕರನ್ನು ಸೆಳೆಯಲು ಹಲವಾರು ನೂತನ ವಿಧಾನಗಳನ್ನು ಪರಿಚಯಿಸುತ್ತವೆ. ಅದರಲ್ಲಿ ಕ್ಯಾಮೆರಾ ಬಹು ಬೇಡಿಕೆಯ ಅಪ್​ಗ್ರೇಡ್​ ಅಂಶ. 50 ಎಂಪಿ ಸಾಮರ್ಥ್ಯದ ಫೋನ್​ಗಳು ಈಗ ಮಾರುಕಟ್ಟೆಯಲ್ಲಿ ಸರ್ವೇಸಾಮಾನ್ಯವಾಗಿವೆ. ಇದೀಗ ಮೊಟೊರೋಲಾ ಕಂಪನಿ ಬರೋಬ್ಬರಿ 200 ಎಂಪಿ ಕ್ಯಾಮೆರಾದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ.

ವಿಶ್ವದ ಮೊದಲ 200 ಎಂಪಿ ಕ್ಯಾಮೆರಾ ಸಾಮರ್ಥ್ಯದ ಮೊಬೈಲ್

ಹೌದು ಅಮೆರಿಕಾ ಮೂಲದ ಮೊಟೊರೋಲಾ ಟೆಲಿಕಾಂ ಕಂಪನಿ 200 ಮೆಗಾಪಿಕ್ಸಲ್​ ಕ್ಯಾಮೆರಾ ಸಾಮರ್ಥ್ಯದ ಮೊಬೈಲ್​ ಅನ್ನು ಪರಿಚಯಿಸುತ್ತಿದೆ. ಮೋಟೋ X30 ಪ್ರೊ ಹೆಸರಿನಲ್ಲಿ ತರಲಿದೆ. 200 ಮೆಗಾಪಿಕ್ಸೆಲ್ ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್​ಫೋನ್ ಇದಾಗಲಿದೆ. ಮೋಟೋ ಈ ಫೋನ್ ಅನ್ನು ಆಗಸ್ಟ್ 2 ರಂದು ಚೀನಾದಲ್ಲಿ ಬಿಡುಗಡೆ ಮಾಡಲು ಯೋಜಿಸಿದೆ.

ಮೊಬೈಲ್​ನ ಪ್ರೊಸೆಸೆರ್​ ಸ್ನ್ಯಾಪ್​ಡ್ರಾಗನ್​ 700 ಸಾಮರ್ಥ್ಯ ಇರಲಿದ್ದು, ಅಂಡ್ರಾಯ್ಡ್​ 12 ನೊಂದಿಗೆ ಇದು ಕೆಲಸ ಮಾಡುತ್ತದೆ. 1 ನೇ ತಲೆಮಾರಿನ ಬಲವಾದ ಮೊಬೈಲ್​ ಇದಾಗಿದೆ ಎಂದು ಟೆಕ್​ ಮೂಲಗಳು ತಿಳಿಸಿವೆ.

ವಿಶ್ವದ ಮೊದಲ 200 ಎಂಪಿ ಕ್ಯಾಮೆರಾ ಸಾಮರ್ಥ್ಯದ ಮೊಬೈಲ್

ಇದು 125 W ವೇಗದ ಚಾರ್ಜಿಂಗ್ ಸೌಲಭ್ಯ, 12GB ರ‍್ಯಾಮ್​ ಮತ್ತು ಅಮ್ಲೋಯ್ಡ್​ ಪರದೆಯನ್ನು ಹೊಂದಿದೆ. 200 ಎಂಪಿ ಕ್ಯಾಮೆರಾವು 35, 50, 85 ಎಂಎಂ ಫೋಕಲ್​ ಲೆಂಗ್ತ್​ ಹೊಂದಿದೆ.

ಈ ಹೆಚ್ಚಿನ ಸಾಮರ್ಥ್ಯದ ಕ್ಯಾಮೆರಾ ಆಧಾರಿತ ಫೋನ್‌ನ ಬೆಲೆ ಎಷ್ಟು? ಯಾವಾಗ ಭಾರತಕ್ಕೆ ಬರಲಿದೆ ಎಂಬ ಬಗ್ಗೆ ಕಂಪನಿ ಇನ್ನೂ ಮಾಹಿತಿ ನೀಡಿಲ್ಲ. ಇದರ ಸಂಪೂರ್ಣ ವಿವರಗಳನ್ನು ತಿಳಿಯಲು ಇನ್ನೂ ಕೆಲ ದಿನಗಳು ಕಾಯಬೇಕಾಗಿದೆ. ಮೊಟೊರೊಲಾ ಈ ಕ್ಯಾಮೆರಾ ಫೋನ್ ಮೂಲಕ ಮತ್ತೊಮ್ಮೆ ಟೆಕ್ ಜಗತ್ತಿನ ಗಮನವನ್ನು ಸೆಳೆದಿದೆ.

ಓದಿ:ನೀರಿಲ್ಲದೇ ಸೆಕೆಂಡುಗಳಲ್ಲಿ ಬಟ್ಟೆ ಒಗೆಯುವ ವಾಷಿಂಗ್​​ ಮಷಿನ್.. ಡಿಟರ್ಜೆಂಟೂ ಬೇಕಿಲ್ಲ

ABOUT THE AUTHOR

...view details