ನವದೆಹಲಿ: ಚಿಪ್-ತಯಾರಕ ಇಂಟೆಲ್ ಕಂಪನಿ ವಿಶ್ವದ ಅತ್ಯಂತ ವೇಗದ ಡೆಸ್ಕ್‌ಟಾಪ್ ಪ್ರೊಸೆಸರ್ ಆದ Intel Core i9-12900KS ಪ್ರೊಸೆಸರ್ ಅನ್ನು ಏಪ್ರಿಲ್ 5ರಿಂದ ಗ್ರಾಹಕರಿಗೆ ಲಭ್ಯವಾಗುವಂತೆ ಮಾಡುತ್ತಿದ್ದು, ಇದರ ಆರಂಭಿಕ ಬೆಲೆ 739 ಡಾಲರ್ (56151 ರೂಪಾಯಿ) ಆಗಿರಲಿದೆ ಎಂದು ಮಾಹಿತಿ ನೀಡಿದೆ.
ಈ ಡೆಸ್ಕ್‌ಟಾಪ್ ಪ್ರೊಸೆಸರ್ ಗರಿಷ್ಠ 5.5 ಗಿಗಾಹರ್ಟ್ಜ್ ಮ್ಯಾಕ್ಸ್ ಟರ್ಬೋ ಪ್ರೀಕ್ವೆನ್ಸಿ ವೇಗದಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿಕೆ ನೀಡಿದೆ. ಮ್ಯಾಕ್ಸ್ ಟರ್ಬೋ ಪ್ರೀಕ್ವೆನ್ಸಿ ಎಂದರೆ ಇಂಟೆಲ್ನ ಟರ್ಬೋ ಬೂಸ್ಟ್ ಟೆಕ್ನಾಲಜಿಯನ್ನು ಬಳಸಿಕೊಂಡು ಪ್ರೊಸೆಸರ್ ಕಾರ್ಯನಿರ್ವಹಣೆ ಮಾಡುವ ಗರಿಷ್ಟ ವೇಗವಾಗಿದೆ.
ಬಾಕ್ಸ್ಡ್ ಪ್ರೊಸೆಸರ್ (boxed processor) ಆಗಿ ಇಂಟೆಲ್ನ ಡೆಸ್ಕ್‌ಟಾಪ್ ಪ್ರೊಸೆಸರ್ ಕಾರ್ಯನಿರ್ವಹಿಸಲಿದ್ದು. ಪ್ರಪಂಚದಾದ್ಯಂತದ ಚಿಲ್ಲರೆ ವ್ಯಾಪಾರಿಗಳಲ್ಲಿ ದೊರಕಲಿದೆ. ಇಂಟೆಲ್ ಮತ್ತು ಅಧಿಕೃತ ಪಾಲುದಾರರಿಂದ ತಯಾರಿಸಿದ ಉತ್ಪನ್ನಗಳನ್ನು ಈ ಪ್ರೊಸೆಸರ್ನಲ್ಲಿ ಅಳವಡಿಸಲಾಗಿದೆ.