ಹೈದರಾಬಾದ್:ವಿಶ್ವ ಬಾಹ್ಯಾಕಾಶ ಸಪ್ತಾಹವನ್ನು ಪ್ರತಿ ವರ್ಷ ಅಕ್ಟೋಬರ್ 4ರಿಂದ 10ರವರೆಗೆ ಆಚರಿಸಲಾಗುತ್ತಿದೆ. ಮಾನವನ ಅಭಿವೃದ್ಧಿಗೆ ಕಾರಣವಾಗಿರುವ ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆ ಸ್ಮರಿಸಲು ಈ ದಿನವನ್ನು ಆಚರಿಸಲಾಗುವುದು. ವಿಶ್ವ ಬಾಹ್ಯಾಕಾಶ ಸಪ್ತಾಹವು ಜಾಗತಿಕವಾಗಿ ದೊಡ್ಡದಾದ ವಾರ್ಷಿಕ ಬಾಹ್ಯಾಕಾಶ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರವೂ ಭವಿಷ್ಯದಲ್ಲಿ ಬಾಹ್ಯಕಾಶದ ಬಗ್ಗೆ ಕಲಿಕೆಗೆ ಉತ್ಸಾಹ ನೀಡುವ ಜೊತೆಗೆ ಇದರಿಂದ ಪ್ರೇರಣೆಗೊಂಡು ದೊಡ್ಡದಾದ ಮತ್ತು ವಿಭಿನ್ನ ಹೆಜ್ಜೆ ಇಡಲು ಪ್ರೋತ್ಸಾಹ ನೀಡುತ್ತದೆ. ವಿಶ್ವ ಬಾಹ್ಯಾಕಾಶ ಸಪ್ತಾಹದಂದು ಸಾಮಾನ್ಯ ಜನರಿಗೆ ಬಾಹ್ಯಾಕಾಶದ ಚಟುವಟಿಕೆ ಕುರಿತು ಅರಿವು ಮೂಡಿಸಲಾಗುವುದು. ಜೊತೆಗೆ ಬಾಹ್ಯಾಕಾಶ ಹೋಗುವ ಮತ್ತು ಜಾಗತಿಕವಾಗಿ ಶಿಕ್ಷಣದ ಸಹಕಾರ ಉತ್ತೇಜಿಸುತ್ತದೆ
ವಿಶ್ವ ಬಾಹ್ಯಾಕಾಶ ಸಪ್ತಾಹದ ಆರಂಭ: ವಿಶ್ವ ಬಾಹ್ಯಾಕಾಶ ಸಪ್ತಾಹವನ್ನು ವಿಶ್ವ ಸಂಸ್ಥೆಯ ಸಾಮಾನ್ಯ ಸಂಸ್ಥೆಯಲ್ಲಿ 1999ರ ಡಿಸೆಂಬರ್ 6ರಂದು ಘೋಷಿಸಲಾಯಿತು. ಈ ವಾರದ ಸಮಯದಲ್ಲೇ ಅಂದರೆ 1957ರ ಅಕ್ಟೋಬರ್ 4 ರಂದು ಮೊದಲ ಮಾನವಸಹಿತ ಉಪಗ್ರಹವಾದ ಸ್ಪುಟ್ನಿಕ್ -1 ರ ಉಡಾವಣೆ ಮತ್ತು 1967 ಅಕ್ಟೋಬರ್ 10 ರಂದು ಬಾಹ್ಯಾಕಾಶ ಒಪ್ಪಂದಕ್ಕೆ ಸಹಿ ಹಾಕುವಿಕೆ ಘಟನೆಗಳು ನಡೆದಿದ್ದವು. ಬಾಹ್ಯಕಾಶದ ಬಗ್ಗೆ ಆಸಕ್ತಿ ಹೊಂದಿರುವ ಪ್ರತಿಯೊಬ್ಬರು ಈ ವಿಶ್ವ ಬಾಹ್ಯಾಕಾಶ ಸಪ್ತಾಹದಲ್ಲಿ ಭಾಗಿಯಾಗಬಹುದಾಗಿದೆ.
ವಿಶ್ವ ಸಂಸ್ಥೆಯಲ್ಲಿ ಬಾಹ್ಯಾಕಾಶಶ ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತು ಬಳಕೆ ಹೆಚ್ಚುವುದರ ಜೊತೆಗೆ ಇದಕ್ಕೆ ಹೆಚ್ಚಿನ ಬೆಂಬಲ ನೀಡಲಾಗಿದೆ. 25 ವಿಶ್ವ ಸಂಸ್ಥೆಯ ಘಟಕಗಳು ಮತ್ತು ವಿಶ್ವ ಬ್ಯಾಂಕ್ ಗ್ರೂಪ್ಗಳು ನಿಯಮಿತವಾಗಿ ಬಾಹ್ಯಕಾಶದ ಅಪ್ಲಿಕೇಷನ್ ಅನ್ನು ಬಳಕೆ ಮಾಡುತ್ತದೆ. ಪ್ರಮುಖ ವಿಶ್ವ ಸಮ್ಮೇಳನಗಳು ಮತ್ತು ಬಾಹ್ಯಾಕಾಶದ ಅನ್ವೇಷಣೆ ಸೇರಿದಂತೆ ವಿಶ್ವಸಂಸ್ಥೆಯ ಕೆಲಸಕ್ಕೆ ಬಾಹ್ಯಾಕಾಶ ಅಪ್ಲಿಕೇಶನ್‌ಗಳು ಪ್ರಮುಖ ಮತ್ತು ಕೆಲವೊಮ್ಮೆ ಅಗತ್ಯ ಕೊಡುಗೆಗಳನ್ನು ನೀಡುತ್ತವೆ.