ಗಾಂಧಿನಗರ( ಗುಜರಾತ್):ಉಕ್ರೇನ್ ಮತ್ತು ರಷ್ಯಾ ನಡುವಿನ ಸಂಘರ್ಷ ಇನ್ನೂ ನಡೆಯುತ್ತಲೇ ಇದೆ. ಈ ಮಧ್ಯೆ ಹಿಂತಿರುಗಿ ನೋಡುವುದಾದರೆ, ಪೆಸಿಫಿಕ್ ಯುದ್ಧದ ಸಮಯದಲ್ಲಿ ಅಮೆರಿಕ ಸೈನ್ಯವು ಜಪಾನ್‌ನ ನಾಗಸಾಕಿ ಮತ್ತು ಹಿರೋಷಿಮಾ ಮೇಲೆ ಅಣುಬಾಂಬ್‌ಗಳನ್ನು ಹಾಕಿದ್ದ ಕರಾಳ ಇತಿಹಾಸವನ್ನೂ ಒಮ್ಮೆ ನೆನಪಿಸಿಕೊಳ್ಳಬೇಕಾಗುತ್ತದೆ.
ಒಂದು ದೇಶವು ತನ್ನ ಎದುರಾಳಿ ರಾಷ್ಟ್ರದೊಂದಿಗೆ ಪರೋಕ್ಷವಾಗಿ ಯುದ್ಧ ಮಾಡಲು ತಂತ್ರಜ್ಞಾನ ಅಥವಾ ಜೈವಿಕ ಶಸ್ತ್ರಾಸ್ತ್ರಗಳನ್ನು ಬಳಸಿಕೊಳ್ಳುತ್ತಿರುವಾಗ ಭವಿಷ್ಯದಲ್ಲಿ ದೇಶದ ಗಡಿಯಲ್ಲೂ ಇಂತಹ ಜೈವಿಕ ಶಸ್ತ್ರಾಸ್ತ್ರ ಸಂಘರ್ಷ ಉದ್ಭವಿಸಿದರೂ ಯಾವುದೇ ಅಚ್ಚರಿ ಇಲ್ಲ. ಹೀಗಾಗಿ ಭಾರತ ಎಡಬಲಗಳಲ್ಲಿ ಶತ್ರುಗಳನ್ನ ಹೊಂದಿದೆ. ಹೀಗಾಗಿ ಭಾರತದ ಸೈನಿಕರು ಯಾವುದಕ್ಕೂ ಸಿದ್ದರಾಗಿರಬೇಕಾಗುತ್ತದೆ.
ಜೈವಿಕ ಯುದ್ಧಕ್ಕೂ ರಾಷ್ಟ್ರದ ಸೈನಿಕರು ಸಿದ್ಧ: ETV ಭಾರತಕ್ಕೆ ನೀಡಿದ ಸಂದರ್ಶನದಲ್ಲಿ DRDO ವಿಜ್ಞಾನಿ ಅಜಯ್ ಕುಮಾರ್ ಹಲವು ಮಹತ್ವದ ಅಂಶಗಳನ್ನು ಬಿಚ್ಚಿಟ್ಟಿದ್ದಾರೆ. ದೇಶವು ಪ್ರಸ್ತುತ ಸ್ವಾವಲಂಬನೆಯತ್ತ ಸಾಗುತ್ತಿದೆ ಮತ್ತು DRDO ರಕ್ಷಣಾ ವ್ಯವಸ್ಥೆಗಳು ಸೇರಿದಂತೆ ಹಲವು ಹೊಸ ಅಂಶಗಳನ್ನು ಸಿದ್ಧಪಡಿಸುತ್ತಿದೆ ಎಂಬ ಅಂಶವನ್ನು ದೇಶದ ಜನರ ಎದುರು ತೆರೆದಿಟ್ಟಿದ್ದಾರೆ. ರಷ್ಯಾ- ಉಕ್ರೇನ್ ಯುದ್ದ ನಡೆಯುತ್ತಿರುವ ಈ ಸಂದರ್ಭದಲ್ಲಿ ರಾಸಾಯನಿಕ ಮತ್ತು ಜೈವಿಕ ಯುದ್ಧದ ಸನ್ನಿವೇಶ ಸೃಷ್ಟಿಯಾಗಿದೆ. ಹೀಗಾಗಿ ಜೈವಿಕ ಮತ್ತು ರಾಸಾಯನಿಕ ಪರಿಸ್ಥಿತಿಗಳನ್ನು ತಡೆಗಟ್ಟಲು, ಅದನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಲು ಹಾಗೂ ಉತ್ತಮ ಸೌಲಭ್ಯಗಳ ಕುರಿತು ಸಂಶೋಧನೆ ಮಾಡಲಾಗಿದೆ ಎಂದು ಅಜಯ್ ಕುಮಾರ್ ಹೇಳಿದ್ದಾರೆ.
ಏನಿದು ಜೈವಿಕ ಆಯುಧ?: ದೇಶದಲ್ಲಿ ಸಂಭವಿಸಬಹುದಾದ ರಾಸಾಯನಿಕ ಮತ್ತು ಜೈವಿಕ ಸನ್ನಿವೇಶವನ್ನು ನಿಭಾಯಿಸಲು ನಿರ್ದಿಷ್ಟ ರೀತಿಯ ಆಯುಧ ವಿನ್ಯಾಸಗೊಳಿಸಲಾಗಿದೆ ಎಂದು ವಿಜ್ಞಾನಿ ಅಜಯ್ ಕುಮಾರ್ ತಿಳಿಸಿದ್ದಾರೆ. ಪ್ರಯೋಗಾಲಯದಲ್ಲಿ ಈ ಸಂಬಂಧಿತ ಉಡುಪನ್ನು ಈಗಾಗಲೇ ಮಾಡಲಾಗಿದೆ. ಇಂತಹ ಯಾವುದೇ ದಾಳಿ ನಡೆದರೂ ಸೈನಿಕರನ್ನು ರಕ್ಷಣೆ ಮಾಡುವ ತಂತ್ರಜ್ಞಾನ ಕಂಡುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.