ನವದೆಹಲಿ:ಮೈಕ್ರೋಸಾಫ್ಟ್ನ ವಿಂಡೋಸ್ 11 ಆಪರೇಟಿಂಗ್ ಸಿಸ್ಟಮ್ ಪ್ರಸ್ತುತ 400 ದಶಲಕ್ಷಕ್ಕೂ ಹೆಚ್ಚು ಇನ್ಸ್ಟಾಲ್ ಆಗಿದ್ದು, 2024 ರ ಆರಂಭದಲ್ಲಿ ಈ ಸಂಖ್ಯೆ 500 ಮಿಲಿಯನ್ ತಲುಪುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ. ವಿಂಡೋಸ್ 11 ಈಗ ಸುಮಾರು ಅರ್ಧ ಶತಕೋಟಿ ಸಾಧನಗಳಲ್ಲಿ ಸಕ್ರಿಯವಾಗಿದೆ, ಇದು ಕಂಪನಿಯ ನಿರೀಕ್ಷೆಗಳಿಗಿಂತ ಹೆಚ್ಚಾಗಿದೆ ಎಂದು ಮೈಕ್ರೋಸಾಫ್ಟ್ ಆಂತರಿಕ ಡೇಟಾ ಉಲ್ಲೇಖಿಸಿ ವಿಂಡೋಸ್ ಸೆಂಟ್ರಲ್ ವರದಿ ಮಾಡಿದೆ.
ವಿಂಡೋಸ್ 10 ಬಿಡುಗಡೆಯಾದ ಒಂದು ವರ್ಷದ ನಂತರ 400 ಮಿಲಿಯನ್ ಸಕ್ರಿಯ ಇನ್ಸ್ಟಾಲ್ ತಲುಪಿತ್ತು. ಇದು ವಿಂಡೋಸ್ 7 ಗಿಂತ ಶೇಕಡಾ 115 ರಷ್ಟು ವೇಗವಾಗಿದೆ. ಅದೇ ಇನ್ಸ್ಟಾಲ್ ಪ್ರಮಾಣವನ್ನು ತಲುಪಲು ವಿಂಡೋಸ್ 11 ಎರಡು ವರ್ಷ ತೆಗೆದುಕೊಂಡಿದೆ. "ವಿಂಡೋಸ್ 10ಕ್ಕೆ ಹೋಲಿಸಿದರೆ ಇದು ಗಮನಾರ್ಹವಾಗಿ ನಿಧಾನಗತಿಯ ದರವಾಗಿದೆ. ವಿಂಡೋಸ್ 10 ಕೇವಲ ಒಂದು ವರ್ಷದಲ್ಲಿ ಈ ಸಂಖ್ಯೆಯನ್ನು ತಲುಪಿದೆ (ಮತ್ತು ಅಂತಿಮವಾಗಿ 2020 ರ ಆರಂಭದಲ್ಲಿ 1 ಬಿಲಿಯನ್ ಬಳಕೆದಾರರು)" ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮೈಕ್ರೋಸಾಫ್ಟ್ ಅಕ್ಟೋಬರ್ 2021 ರಲ್ಲಿ ವಿಂಡೋಸ್ 11 ಅನ್ನು ಕಟ್ಟುನಿಟ್ಟಾದ ಹಾರ್ಡ್ವೇರ್ ಅವಶ್ಯಕತೆಗಳೊಂದಿಗೆ ಬಿಡುಗಡೆ ಮಾಡಿತ್ತು.
2018 ರಿಂದ ತಯಾರಾದ ಪಿಸಿಗಳಲ್ಲಿ ವಿಂಡೋಸ್ 11 ಅನ್ನು ಇನ್ಸ್ಟಾಲ್ ಮಾಡಬಹುದಾಗಿದೆ. (ಟಿಪಿಎಂ ಭದ್ರತಾ ಚಿಪ್ಗಳಿಂದಾಗಿ). ಆದರೆ ವಿಂಡೋಸ್ 10 ಗೆ ಅಪ್ಡೇಟ್ ಮಾಡಲಾದ ಎಲ್ಲ ಹಳೆಯ ವಿಂಡೋಸ್ 7 ಮತ್ತು 8 ಪಿಸಿಗಳು ಮತ್ತು ಮೊದಲ ಮೂರು ವರ್ಷಗಳಲ್ಲಿ ತಯಾರಾದ ಹೊಸ ವಿಂಡೋಸ್ 10 ಪಿಸಿಗಳಿಗೆ ವಿಂಡೋಸ್ 11 ಲಭ್ಯವಾಗುವುದಿಲ್ಲ.