ತಂತ್ರಜ್ಞಾನ ಯುಗದಲ್ಲಿ ಹುದ್ದೆ ಸ್ವರೂಪ ಬದಲಾಗುತ್ತಿದ್ದಂತೆ, ಹುದ್ದ ಆಕಾಂಕ್ಷಿಗಳ ಬೇಡಿಕೆಗಳು ವಿಭಿನ್ನವಾಗುತ್ತಿವೆ. ಈ ಹಿಂದೆ ಕೆಲಸಕ್ಕೂ ಮುನ್ನ ಅನುಭವ ಸಂಪಾದಿಸುವ ಇಂಟರ್ನ್ಶಿಪ್ಗೆ ಅವಕಾಶ ಸಿಕ್ಕಿದರೆ ಸಾಕು ಎನ್ನುತ್ತಿದ್ದ ಅಭ್ಯರ್ಥಿಗಳು ಇದೀಗ ಇಂಟರ್ನ್ಶಿಪ್ನಲ್ಲೂ ಹೊಸ ಹೊಸ ಸೌಲಭ್ಯಗಳ ಜೊತೆ ಸಂಬಳಕ್ಕಿಂತ ದುಪ್ಪಟ್ಟು ವೇತನ ಸ್ಟೈಫಂಡ್ ಅನ್ನು ಬೇಡುತ್ತಿದ್ದಾರೆ. ಅದರಲ್ಲೂ ಜೆನ್ ಜೆಡ್ (Generation Z) ಅಭ್ಯರ್ಥಿಗಳ ಬೇಡಿಕೆ ಇದೀಗ ಎಲ್ಲರನ್ನು ನಿಬ್ಬೆರಾಗಿಸುವಂತೆ ಮಾಡಿದೆ. ಈ ಕುರಿತು ಟ್ವಿಟರ್ ಬಳಕೆದಾರರೊಬ್ಬರು ಆಸಕ್ತಿಕರ ಸಂಗತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಪೀಪಲ್ ಸಕ್ಸಸ್ ಆಫ್ ಇನ್ಫೀಡೊ ನಿರ್ದೇಶಕ ಸಮೀರಾ ಖಾನ್ ಎನ್ನುವವರು ಇತ್ತೀಚೆಗೆ ಇಂಟರ್ನಿ ಯುವಕನ ಸಂದರ್ಶನ ನಡೆಸಿದ್ದಾರೆ. ಜೆನ್ ಜೆಡ್ ಅಭ್ಯರ್ಥಿ ಎಂದು ಗುರುತಿಸಿಕೊಂಡಿರುವ ಅಭ್ಯರ್ಥಿ ಸಂದರ್ಶನದಲ್ಲಿ ತಮಗೆ 50 ಸಾವಿರ ಸ್ಟೈಫಂಡ್ ಜೊತೆಗೆ ವರ್ಕ್-ಲೈಫ್ ಸಮದೂಗಿಸಲು 5 ಗಂಟೆ ಮಾತ್ರ ಕೆಲಸದ ಅವಧಿ ನಿಗದಿಸಬೇಕು ಎಂದಿದ್ದಾರೆ.
ಅಷ್ಟೇ ಅಲ್ಲದೇ, ಅಭ್ಯರ್ಥಿ ಎಂಎನ್ಸಿ ಸಂಸ್ಕೃತಿಯನ್ನು ಇಷ್ಟ ಪಡುವುದಿಲ್ಲ ಎಂದಿದ್ದು, ಸ್ಟಾರ್ಟ್ ಅಪ್ನಲ್ಲಿ ಕೆಲಸ ಮಾಡುವ ಆದ್ಯತೆ ಹೊಂದಿರುವುದಾಗಿ ತಿಳಿಸಿದ್ದಾರೆ. ಜೊತೆಗೆ 40 ರಿಂದ 50 ಸಾವಿರ ವೇತನ ಬೇಕು ಎಂದ ಅವರನ್ನು ಭವಿಷ್ಯದ ಕೆಲಸದಲ್ಲಿ ದೇವರು ಕಾಪಾಡಲಿ ಎಂದು ಬರೆದುಕೊಂಡಿದ್ದಾರೆ ಖಾನ್
ಈ ಪೋಸ್ಟ್ ಬಳಿಕ ಇದೀಗ ಟ್ವಿಟರ್ನಲ್ಲಿ ಜೆನ್-ಜೆಡ್ ಪೀಳಿಗೆ ಮನಸ್ಥಿತಿ ಕುರಿತು ಮತ್ತು ಅವರ ವೃತ್ತಿ- ಕೆಲಸದ ನಡುವಿನ ಸಮತೋಲನ ಕುರಿತು ಹೆಚ್ಚು ಚರ್ಚೆಯಾಗುತ್ತಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬಳಕೆದಾರರೊಬ್ಬರು, ವಾವ್! ಜೆನ್ ಜೆಡ್ ಇಂಟರ್ನ್ಗಳು ಈಗಾಗಲೇ ಅಸಾಧ್ಯವಾದ ಬೇಡಿಕೆ ಇಡುವುದರಲ್ಲಿ ಪರಿಣಿತರಾಗಿದ್ದಾರೆ ಎಂದಿದ್ದಾರೆ. 5 ಗಂಟೆಗಳ ಕೆಲಸಕ್ಕೆ ನಿಮಗೆ 40-50 ಸಾವಿರ ಪಾವತಿಸುವ ಪ್ರಾರಂಭವನ್ನು ಹುಡುಕುವಲ್ಲಿ ಅದೃಷ್ಟ. ನೀವು ಅದರಲ್ಲಿರುವಾಗ ಯುನಿಕಾರ್ನ್ ಕಂಡುಬಂದರೆ ನನಗೆ ತಿಳಿಸಿ ಎಂದಿದ್ದಾರೆ.