ಕರ್ನಾಟಕ

karnataka

ವಾಟ್ಸ್​ಆ್ಯಪ್​​ ಡಬಲ್ ಟ್ಯಾಪ್ ಫೀಚರ್; ವಿಡಿಯೊ ಫಾರ್ವರ್ಡ್-ರಿವೈಂಡ್​ ಮಾಡುವುದಿನ್ನು ಸರಾಗ!​

By ETV Bharat Karnataka Team

Published : Nov 3, 2023, 12:47 PM IST

ವಿಡಿಯೊಗಳನ್ನು ರಿವೈಂಡ್ ಅಥವಾ ಫಾರ್ವರ್ಡ್ ಮಾಡಲು ಅನುಕೂಲವಾಗುವ ಹೊಸ ಫೀಚರ್ ಅನ್ನು ವಾಟ್ಸ್​ಆ್ಯಪ್ ಹೊರತರುತ್ತಿದೆ.​

Whats App to get double tap feature to forward and rewind videos
Whats App to get double tap feature to forward and rewind videos

ಬೆಂಗಳೂರು: ವಾಟ್ಸ್​ಆ್ಯಪ್​​ನಲ್ಲಿ ವಿಡಿಯೋಗಳನ್ನು ಸರಾಗವಾಗಿ ಫಾರ್ವರ್ಡ್ ಅಥವಾ ರಿವೈಂಡ್ ಮಾಡುವ ಫೀಚರ್ ಶೀಘ್ರದಲ್ಲೇ ಲಭ್ಯವಾಗಲಿದೆ. ಯೂಟ್ಯೂಬ್​ನಲ್ಲಿ ವಿಡಿಯೋ ಫಾರ್ವರ್ಡ್​ ಅಥವಾ ರಿವೈಂಡ್ ಮಾಡುವ ರೀತಿಯಲ್ಲೇ ಇದು ಕೆಲಸ ಮಾಡಲಿದೆ. ಅಂದರೆ ಇದು ಡಬಲ್ ಟ್ಯಾಪ್ ಮಾಡುವ ಫೀಚರ್ ಆಗಿರಲಿದೆ.

ವಿಡಿಯೋ ರಿವೈಂಡ್ ಮಾಡಲು ಸ್ಕ್ರೀನ್​ನ ಎಡಭಾಗದಲ್ಲಿ ಎರಡು ಬಾರಿ ಟ್ಯಾಪ್ ಮಾಡಬೇಕು. ಹಾಗೆಯೇ ಫಾರ್ವರ್ಡ್ ಮಾಡಲು ಸ್ಕ್ರೀನ್​ನ ಬಲಭಾಗದಲ್ಲಿ ಎರಡು ಬಾರಿ ಟ್ಯಾಪ್ ಮಾಡಬೇಕು. ಯೂಟ್ಯೂಬ್ ಅಥವಾ ನೆಟ್​ಫ್ಲಿಕ್ಸ್​ನಲ್ಲಿ ಇದೇ ರೀತಿಯ ವೈಶಿಷ್ಟ್ಯವನ್ನು ನೀವು ಬಳಸಿರುತ್ತೀರಿ. ಸದ್ಯ ವಾಟ್ಸ್​ ಆ್ಯಪ್ ಕೂಡ ಅಂಥ ವೈಶಿಷ್ಟ್ಯವನ್ನು ನಿಮಗಾಗಿ ತರಲಿದೆ.

ಪ್ರಸ್ತುತ ಈ ಹೊಸ ವೈಶಿಷ್ಟ್ಯವು ಬೀಟಾ ಟೆಸ್ಟರ್​ಗಳಿಗೆ ಮಾತ್ರ ಲಭ್ಯವಿದೆ. ಮುಂದಿನ ಕೆಲಸ ವಾರಗಳಲ್ಲಿ ಇದು ಹೆಚ್ಚಿನ ಬಳಕೆದಾರರಿಗೆ ಸಿಗಲಿದೆ. ಅಲ್ಲದೆ, ಈ ವೈಶಿಷ್ಟ್ಯವನ್ನು ಬಳಸಲು, ನೀವು ಗೂಗಲ್ ಪ್ಲೇ ಸ್ಟೋರ್​ನಿಂದ ಇತ್ತೀಚಿನ ವಾಟ್ಸ್​ಆ್ಯಪ್ ಬೀಟಾ ಅನ್ನು ಇನ್​ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ. ಸದ್ಯಕ್ಕೆ ವಾಟ್ಸ್​ಆ್ಯಪ್ ವಿಡಿಯೋ ಪ್ಲೇ ಮಾಡಲು ಅಂತರ್​ನಿರ್ಮಿತ ವಿಡಿಯೋ ಪ್ಲೇಯರ್ ಅನ್ನು ಹೊಂದಿದೆ.

ಅಂದರೆ ನಿಮಗೆ ವಾಟ್ಸ್​ಆ್ಯಪ್​ನಲ್ಲಿ ವಿಡಿಯೋಗಳು ಬಂದಾಗ ನೀವು ಅವನ್ನು ತಕ್ಷಣಕ್ಕೆ ಥರ್ಡ್​ ಪಾರ್ಟಿ ಆ್ಯಪ್​ನಲ್ಲಿ ತೆರೆಯಲಾಗುವುದಿಲ್ಲ. ಅವು ಡಿಫಾಲ್ಟ್​ ಆಗಿ ವಾಟ್ಸ್​ಆ್ಯಪ್​ನೊಳಗೆ ಇರುವ ವಿಡಿಯೋ ಪ್ಲೇಯರ್​ನಲ್ಲಿಯೇ ಓಪನ್ ಆಗುತ್ತವೆ.

ಆದರೆ ಈಗಿನ ವಿಡಿಯೋ ಪ್ಲೇಯರ್​ನಲ್ಲಿ ವಿಡಿಯೋದ ನಿರ್ದಿಷ್ಟ ಭಾಗವನ್ನು ಸರಿಸುವುದು ಒಂದಿಷ್ಟು ಸಮಸ್ಯಾತ್ಮಕವಾಗಿದೆ. ಏಕೆಂದರೆ ಪ್ರೊಗ್ರೆಸ್ ಬಾರ್ ಕಾಣಿಸಬೇಕಾದರೆ ನೀವು ಮೊದಲಿಗೆ ಸ್ಕ್ರೀನ್ ಮೇಲೆ ಟ್ಯಾಪ್ ಮಾಡಬೇಕಾಗುತ್ತದೆ. ಇದರ ನಂತರವೇ ನೀವು ವಿಡಿಯೋವನ್ನು ಹಿಂದೆ ಅಥವಾ ಮುಂದೆ ಸರಿಸಬಹುದು.

32 ಜನರೊಂದಿಗೆ ವಿಡಿಯೋ ಕರೆ ಫೀಚರ್: ಐಓಎಸ್​ ಬಳಕೆದಾರರಿಗಾಗಿ ವಾಟ್ಸ್​ಆ್ಯಪ್ ಹೊಸ ವಿಡಿಯೋ ಫೀಚರ್ ಒಂದನ್ನು ಪರಿಚಯಿಸಿದೆ. ಈಗ ಐಫೋನ್ ವಾಟ್ಸ್​ಆ್ಯಪ್ ಬಳಕೆದಾರರು ಏಕಕಾಲಕ್ಕೆ 32 ಜನರೊಂದಿಗೆ ಗ್ರೂಪ್ ವಿಡಿಯೋ ಕಾಲ್ ಮಾಡಬಹುದು. ಈ ಮುನ್ನ ಈ ಫೀಚರ್ 15 ಜನರಿಗೆ ಸೀಮಿತವಾಗಿತ್ತು.

ಆ್ಯಂಡ್ರಾಯ್ಡ್​ ಬಳಕೆದಾರರಿಗೆ ಪಾಸ್ ಕೀ ಫೀಚರ್: ಲಾಗಿನ್ ಪ್ರಕ್ರಿಯೆಯನ್ನು ಸರಳಗೊಳಿಸುವ ಪ್ರಯತ್ನವಾಗಿ ವಾಟ್ಸ್​ಆ್ಯಪ್ ಇತ್ತೀಚೆಗೆ ಆಂಡ್ರಾಯ್ಡ್ ಬಳಕೆದಾರರಿಗೆ ಪಾಸ್​ ಕೀ ಫೀಚರ್ ಆರಂಭಿಸಿದೆ. ಇದರರ್ಥ ಆಂಡ್ರಾಯ್ಡ್ ಮೊಬೈಲ್​ಗಳಲ್ಲಿ ಇನ್ನು ಮುಂದೆ ಪಾಸ್​ವರ್ಡ್​ಗಳ ಅಗತ್ಯವಿಲ್ಲದೆ ವಾಟ್ಸ್​ಆ್ಯಪ್​ಗೆ ಲಾಗಿನ್ ಮಾಡಬಹುದು. ಬಳಕೆದಾರರು ಫೇಸ್ ಡಿಟೆಕ್ಷನ್, ಫಿಂಗರ್​ ಪ್ರಿಂಟ್ ಅಥವಾ ಪಿನ್ ಕೋಡ್ ಬಳಸಿ ತಮ್ಮ ಪಾಸ್​ಕೀಗಳನ್ನು ಅನ್ಲಾಕ್ ಮಾಡಬಹುದು.

ಇದನ್ನೂ ಓದಿ: ಲಾವಾ 5ಜಿ ಸ್ಮಾರ್ಟ್​ಫೋನ್ ಬ್ಲೇಜ್ -2 ಲಾಂಚ್​; ಬೆಲೆ ಇಷ್ಟು ಕಡಿಮೆ!

ABOUT THE AUTHOR

...view details