ನವದೆಹಲಿ:ವಾಟ್ಸ್ಆ್ಯಪ್ ಪೇ ಇಂಡಿಯಾ ಮುಖ್ಯಸ್ಥ ವಿನಯ್ ಚೋಲೆಟ್ಟಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಹುದ್ದೆಗೆ ಏರಿದ ನಾಲ್ಕು ತಿಂಗಳಲ್ಲೇ ಅವರು ಹುದ್ದೆ ತ್ಯಜಿಸಿದ್ದಾರೆ. ನವೆಂಬರ್‌ನಲ್ಲಿ ಮೆಟಾದ ಮುಖ್ಯಸ್ಥ ಅಜಿತ್ ಮೋಹನ್ ರಾಜೀನಾಮೆ ನೀಡಿದ್ದರು. ಅದಾದ ನಂತರ ಚೋಲೆಟ್ಟಿ ಈಗ ರಾಜೀನಾಮೆ ನೀಡಿದ್ದು, ಸುಮಾರು ಒಂದೂವರೆ ತಿಂಗಳ ಅವಧಿಯಲ್ಲಿ ಭಾರತದಲ್ಲಿ ಮೆಟಾದಿಂದ ನಾಲ್ಕನೇ ಉನ್ನತ ಪ್ರೊಫೈಲ್ ಅಧಿಕಾರಿ ನಿರ್ಗಮನವಾದಂತಾಗಿದೆ.
ಮೋಹನ್ ನಂತರ, ವಾಟ್ಸ್ಆ್ಯಪ್ ಇಂಡಿಯಾ ಮುಖ್ಯಸ್ಥ ಅಭಿಜಿತ್ ಬೋಸ್ ಮತ್ತು ಮೆಟಾ ಇಂಡಿಯಾ ಪಬ್ಲಿಕ್ ಪಾಲಿಸಿ ಹೆಡ್ ರಾಜೀವ್ ಅಗರ್ವಾಲ್ ಕೂಡ ಕಳೆದ ತಿಂಗಳು ಕಂಪನಿಗೆ ರಾಜೀನಾಮೆ ನೀಡಿದ್ದರು. ಚೋಲೆಟ್ಟಿ ಲಿಂಕ್ಡ್‌ಇನ್‌ನಲ್ಲಿ WhatsApp ನಿರ್ಗಮಿಸುವ ಕುರಿತು ಅಪ್ಡೇಟ್ ಹಾಕಿದ್ದಾರೆ.