ಸ್ಯಾನ್ ಫ್ರಾನ್ಸಿಸ್ಕೋ( ಅಮೆರಿಕ): ಮೆಟಾ ಒಡೆತನದ ವಾಟ್ಸ್ಆ್ಯಪ್ ಒಂದಿಲ್ಲೊಂದು ಹೊಸ ಹೊಸ ವೈಶಿಷ್ಠ್ಯಗಳನ್ನು ತನ್ನ ಬಳಕೆದಾರರಿಗೆ ಪರಿಚಯಿಸುತ್ತಲೇ ಇರುತ್ತದೆ. ತನ್ನ ಹೊಸ ಉದ್ಯಮಶೀಲತೆಯ ದೃಷ್ಟಿಯಿಂದಿ ಇದೀಗ ಮತ್ತೊಂದು ಹೊಸ ವೈಶಿಷ್ಠ್ಯವನ್ನು ತನ್ನ ಬಳಕೆದಾರರಿಗೆ ಪರಿಚಯಿಸಲು ಮುಂದಾಗಿದೆ. ಹಾಗೇಯೆ ತನ್ನ ಗ್ರಾಹಕರಿಗೆ ಇನ್ನಷ್ಟು ವಿಶಿಷ್ಠತೆಗಳನ್ನೊಂಡಗೊಂಡ ಹೊಸ ಬಗೆಯ ಅನುಭವ ಕೊಡುವ ನಿಟ್ಟಿನಲ್ಲಿ ಮೆಟಾ ಕಾರ್ಯನಿರ್ವಹಿಸುತ್ತಿದೆ. ಇನ್ನು ಮೆಟಾ ವಾಟ್ಸ್ಆ್ಯಪ್ ಬಳಕೆದಾರರಿಗೆ ಶೆಡ್ಯೂಲ್ ಗ್ರೂಪ್ ಕಾಲ್ಸ್ ಫೀಚರ್ನ್ನು ಪರಿಚಯಿಸಲು ಮುಂದಾಗಿದ್ದು, ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ ಎಂದು ವರದಿಯಾಗಿದೆ.
ಶೆಡ್ಯೂಲ್ ಗ್ರೂಪ್ ಕಾಲ್ ಫೀಚರ್ :WABetaInfo ಮಾಹಿತಿ ಪ್ರಕಾರ, ಈ ತಂತ್ರಜ್ಞಾನ ಇನ್ನೂ ಅಭಿವೃದ್ಧಿ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಇದು ಲಭ್ಯವಾಗಲಿದೆ. ಇನ್ನು ಈ ಶೆಡ್ಯೂಲ್ ಗ್ರೂಪ್ ಕಾಲ್ಸ್ (ವೇಳಾಪಟ್ಟಿ ಗುಂಪು ಕರೆ) ತಂತ್ರಜ್ಞಾನವು ವಾಟ್ಸ್ಆ್ಯಪ್ ಬಳಕೆದಾರರು ಇತರ ವಾಟ್ಸ್ಆ್ಯಪ್ ಗುಂಪಿನ ಸದಸ್ಯರೊಂದಿಗೆ ಕರೆ ಮಾಡಲು ಬಳಕೆ ಮಾಡಬಹುದಾಗಿದೆ. ಇಲ್ಲಿ ಬಳಕೆದಾರರಿಗೆ ಒಂದು ಆಯ್ಕೆಯನ್ನು ನೀಡಲಾಗಿರುತ್ತದೆ. ಈ ಆಯ್ಕೆಯ ಮೂಲಕ ಬಳಕೆದಾರರು ಯಾವಾಗ ಮತ್ತು ಯಾರಿಗೆ ಕರೆ ಮಾಡಬಹುದು ಎಂಬುದನ್ನು ನಿರ್ಧರಿಸಬಹುದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ ಎಂದು WABetaInfo ತನ್ನ ವರದಿಯಲ್ಲಿ ಹೇಳಿದೆ.
ಇನ್ನು ಈ ಶೆಡ್ಯೂಲ್ ಗ್ರೂಪ್ ಕಾಲ್ ತಂತ್ರಜ್ಞಾನದಿಂದ ಆಡಿಯೋ ಮತ್ತು ವಿಡಿಯೋ ಕರೆಗಳನ್ನೂ ಕೂಡಾ ನಿಮಗೆ ಬೇಕಾದ ದಿನ, ಗಂಟೆ ಎಂದು ಮೊದಲೇ ನಿರ್ಧರಿಸಿ ನಿಗದಿ ಮಾಡಬಹುದು. ಇನ್ನು ಯಾವುದೇ ವ್ಯಕ್ತಿ ಕರೆ ಮಾಡಿದಾಗ ಆ ಗುಂಪಿನಲ್ಲಿರುವ ಎಲ್ಲ ಸದಸ್ಯರಿಗೆ ಕರೆ ಹೋಗುತ್ತದೆ. ಈ ವೇಳೆ ನಮಗೆ ನೋಟಿಫಿಕೇಶನ್ ದೊರೆಯುವುದರಿಂದ ತಕ್ಷಣ ಆ ಕರೆಯಲ್ಲಿ ನಾವು ಸೇರಿಕೊಳ್ಳಬಹುದಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.